ಅರಸಿನಮಕ್ಕಿಯಲ್ಲಿ ನ.2 ರಂದು ನಡೆಯುವ ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ಸೂಚಿಸುತ್ತದೆ.50 ಸಾವಿರಕ್ಕೂ ಹೆಚ್ಚು ಜನರ ಜೀವನಾಡಿಯಾಗಿರುವ ಈ ರಸ್ತೆ ಹದಗೆಟ್ಟು ಜನರು ಪರದಾಡುತ್ತಿದ್ದಾರೆ.
ಈ ನ್ಯಾಯಯುತ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕು. ಸರ್ಕಾರ ಕೂಡಲೇ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕಿಶೋರ್ ಶಿರಾಡಿಸಂಚಾಲಕರು, ಮಲೆನಾಡು ಜನ ಹಿತರಕ್ಷಣಾ ವೇದಿಕೆ ತಿಳಿಸಿದ್ದಾರೆ.











