26 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಡಂತ್ಯಾರು : ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ವತಿಯಿಂದ ಆಟಿಡೊಂಜಿ ದಿನ ಕೆಸರ್ದ ಗೊಬ್ಬು

ಮಚ್ಚಿನ: ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯ ಇದರ ಆಶ್ರಯದಲ್ಲಿ ಆ. 9ರಂದು ಲಕ್ಷ್ಮಿ ಗದ್ದೆ ಪಲ್ಕೆ ಯಲ್ಲಿ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ನಡುಬೊಟ್ಟು ಧರ್ಮದರ್ಶಿಗಳಾದ ರವಿ ಯನ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಪೂವಪ್ಪ ಮೂಲ್ಯ ಬಂಗಿದೊಟ್ಟು, ಪ್ರಗತಿಪರ ಕೃಷಿಕ ಗಂಗಾಧರ ಮೂಲ್ಯ ಪೆರ್ನಕ್ಕ, ಮಹಾಲಿಂಗೇಶ್ವರ ದೇವಸ್ಥಾನ ಓಡಿಲು ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಿನೇಶ್ ಕೊಂಡೆಮಾರು, ನಂದಿ ಕೆಟರಸ್ ಮಾಲಕರಾದ ಗೋಪಾಲ ಮೂಲ್ಯ ಕೊಂಬೊಟ್ಟು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದ ಕ್ರೀಡಾಕೂಟ ಸಮಿತಿ ಅಧ್ಯಕ್ಷ ಹೊನ್ನಪ್ಪ ಮೂಲ್ಯ ಮಾಣೂರು ಉಪಸ್ಥಿತರಿದ್ದರು. ಕ್ರೀಡಾಕೂಟವನ್ನು ರವಿ ಎನ್ ನಡುಬೊಟ್ಟು ಇವರು ಗದ್ದೆಗೆ ಹಾಲು ಹಾಕಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವಾಲಿಬಾಲ್ ಹಗ್ಗ ಜಗ್ಗಾಟ ಹಾಗೂ ಇನ್ನಿತರ ಆಟೋಟ ಸ್ಪರ್ಧೆಗಳು ನಡೆಯಿತು. ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಮುಕ್ತೇಶ್ವರರಾದ ಹರ್ಷ ಸಂಪಿಗೆತ್ತಾಯ ಆಗಮಿಸಿ ಶುಭ ಹಾರೈಸಿದರು. ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ ಆಗಮಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದರು.

ಸಂಜೆ ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಯರ ಯಾನೆ ಕುಂಬಾರರ ಸಂಘ ಮಡಂತ್ಯಾರ್ ವಲಯದ ಅಧ್ಯಕ್ಷ ಚಿದಾನಂದ ಬಳ್ಳಮಂಜ ವಹಿಸಿದರು ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಇದರ ಅಧ್ಯಕ್ಷ ಮಯ್ಯುರು ಉಳ್ಳಾಲ, ಬೆಳ್ತಂಗಡಿ ತಾಲೂಕು ಯುವ ವೇದಿಕೆಯ ಅಧ್ಯಕ್ಷ ಅವಿನಾಶ್ ಮಾಣುರು, ಪ್ರೊ. ಗುಡ್ ಯೂ ಮಾಲಕರಾದ ಚಂದ್ರಹಾಸ ಪಲ್ಲಿಪಾಡಿ, ಎಂ ಆರ್ ಪಿ ಎಲ್ ಮ್ಯಾನೇಜರ್ ಭಾಸ್ಕರ ಕುಲಾಲ್, ಮಂಗಳೂರು ಪಾಲಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧರ್ಣಪ್ಪ ಮೂಲ್ಯ ಪಟ್ಲತೋಡಿ, ಸಿಟಿ ಎಲೆಕ್ಟ್ರಿಕಲ್ ಮಾಲಕರಾದ ಲೋಕೇಶ್ ಕಂಚಿoಜ, ಆವರಣ ಟಯರ್ ಬಸವನಗುಡಿ ಮಾಲಕರಾದ ರಾಜೇಶ್, ಬಿಲ್ಡಿಂಗ್ ಕಾಂಟ್ರಾಕ್ಟರ್ ರಾಮಣ್ಣ ಮೂಲ್ಯ ಕೋಲಾಜೆ, ವಾಣಿಜ್ಯ ತೆರಿಗೆ ಅಧಿಕಾರಿ ಯತೀಶ್ ಸಿರಿಮಜಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯರಿಗೆ ಸನ್ಮಾನಿಸಲಾಯಿತು ಮತ್ತು 2026-27 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ವಿವಿಧ ಕ್ರೀಡಾಪಟುಗಳ ಬಹುಮಾನ ವಿತರಣೆ ನಡೆಯಿತು. ಸಂದೇಶ್. ಸ್ವಾಗತಿಸಿ ಹರ್ಷ ಬಳ್ಳಮಂಜ ಧನ್ಯವಾದ ನೀಡಿದರು. ಹರೀಶ್ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.
-ವರದಿ: ಹರ್ಷ ಬಳ್ಳಮಂಜ

Related posts

ರೋಟರಿ ಕ್ಲಬ್ : ನವೀಕೃತ ತಾಲೂಕು ಪಶು ಆಸ್ಪತ್ರೆಯ ಆಪರೇಷನ್ ಥಿಯೇಟರ್ ಉದ್ಘಾಟನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲ್ಲೂಕಿನ ವಿವಿಧ ಚಚ್೯ಗಳಿಗೆ ಭೇಟಿ ನೀಡಿ, ಮತ ಯಾಚಿಸಿದ ಹರೀಶ್ ಪೂಂಜ

Suddi Udaya

ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮೇಲಂತಬೆಟ್ಟು ಗ್ರಾ.ಪಂ. ಎದುರು ಪ್ರತಿಭಟನೆ

Suddi Udaya

ತಣ್ಣೀರುಪಂತ ವಲಯ, ಕರಾಯ ಕಾರ್ಯಕ್ಷೇತ್ರದ ಬಾಬು ರವರಿಗೆ ರವರಿಗೆ ವೀಲ್ ಚೆಯರ್ ವಿತರಣೆ

Suddi Udaya

ತ್ರೋಬಾಲ್ ಪಂದ್ಯಾಟ: ಕರಂಬಾರು ಶಾಲೆ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಉನ್ನತ ಮಟ್ಟದ ಇಲಾಖಾಧಿಕಾರಿಗಳ ಗೈರಿಗೆ ಎರಡನೇ ಬಾರಿಯು ರದ್ದುಗೊಂಡ ಕುವೆಟ್ಟು ಗ್ರಾಮಸಭೆ

Suddi Udaya
error: Content is protected !!