
ಬೆಳ್ತಂಗಡಿ: ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಆರ್ಥಿಕ ವ್ಯವಹಾರ ಮಾತ್ರವಲ್ಲದೆ ಗ್ರಾಹಕ ಕಾಳಜಿ ಹಾಗೂ ಸಾಮಾಜಿಕ ಚಿಂತನೆಯೊಂದಿಗೆ ಕಾರ್ಯಾಚರಿಸುತ್ತಿರುವುದು ಸಂಸ್ಥೆಯ ಅಭ್ಯುದಯಕ್ಕೆ ಪ್ರೇರಕ ಶಕ್ತಿಯಾಗಿದೆ ಎಂದು ದಕ್ಷಿಣ- ಮಧ್ಯ ಕ್ಷೇತ್ರ ಸಂಘಚಾಲಕ ಡಾ.ವಾಮನ ಶೆಣೈ ಹೇಳಿದರು.
ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ರಜತ ಮಹೋತ್ಸವ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿದ್ದರು. ಕ್ಯಾಂಪ್ರೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ 25 ಕಾರ್ಯಕ್ರಮಗಳ ಪಟ್ಟಿ ಅನಾವರಣಗೊಳಿಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಮಂಜುನಾಥ ಎಸ್.ಕೆ., ಭಾರತಿ ಜಿ.ಭಟ್, ಕುಡಾಳ ದೇಶಸ್ಥ ಅದ್ಯ ಗೌಡ್ ಬ್ರಾಹ್ಮಣ ಜಿಲ್ಲಾ ಸಂಘದ ಅಧ್ಯಕ್ಷ ಪ್ರವೀಣ್ ಸಂಜೀವ ದರ್ಬೆ, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ ಶ್ರೀಧರ ಸಾಮಂತ, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಅಧ್ಯಕ್ಷ ಭಾಸ್ಕರ ದೇವಸ್ಯ, ಪುರೋಹಿತ ಪ್ರಶಾಂತ ಭಟ್, ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಆಡಳಿತ ಮೊಕ್ತಸರ ಸುಧಾಕರ ಶೆಣೈ ಅತಿಥಿಗಳಾಗಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಾದ ಕೆ.ನಾರಾಯಣ ನಾಯಕ್, ಹರೇಕಳ ಹಾಜಬ್ಬ, ಡಾ.ಪಿ.ಅನಂತಕೃಷ್ಣ ಭಟ್, ಪಿ.ವಿನೋದ್ ಶೆಣೈ, ಅಶ್ಮಿತ್ ಎ.ಜೆ., ಭಾಸ್ಕರ ರೈ ಕುಕ್ಕುವಳ್ಳಿ, ಡಾ.ಕೆ.ಪ್ರೇಮಚಂದ್ರ ಶೆಣೈ, ಡಾ.ಪ್ರವೀಣ್ ಚಂದ್ರ ನಾಯಕ್, ಕಡಬ ಅಚ್ಯುತ ಪ್ರಭು, ಕಲ್ಲೇಗ ಸಂಜೀವ ನಾಯಕ್, ಪ್ರತೀಕ್ಷಾ ಡಿ.ನಾಯಕ್ ಅವರನ್ನು ಗೌರವಿಸಲಾಯಿತು. ಅಶಕ್ತ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಧನಸಹಾಯ ವಿತರಿಸಲಾಯಿತು.
ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಉಪೇಂದ್ರ ನಾಯಕ್, ಪ್ರಧಾನ ವ್ಯವಸ್ಥಾಪಕಿ ಅನಿತಾ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಅಧ್ಯಕ್ಷ ಗಣೇಶ್ ಶೆಣೈ ಸ್ವಾಗತಿಸಿದರು. ಹೃಷಿಕೇಶ್ ವಂದಿಸಿದರು. ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕಿಂತ ಮುನ್ನ ಅಶ್ಮಿತ್ ಎ.ಜೆ. ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.











