September 6, 2026
Uncategorized

ನಡ ಕುತ್ರೋಟ್ಟು ಬಳಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ: ಬಾಲಕ ಮೃತ್ಯು,

ನಡ :ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಬಾಲಕ ಸಾವನ್ನಪ್ಪಿರುವ ಘಟನೆ ನಡ ಗ್ರಾಮದ ಹೊಕ್ಕಿಲ ಕುತ್ರೊಟ್ಟು
ನರ್ಜೆ ಕ್ರಾಸ್ ಬಳಿ ನ. 16 ರಂದು ರಾತ್ರಿ ನಡೆದಿದೆ.

ನಾವೂರು ಗ್ರಾಮದ ಗಣೇಶ್ ಎಂಬವರು ಪುತ್ರ
ತನ್ವಿತ್ (12ವ) ಮೃತಪಟ್ಟ ಬಾಲಕ
ನಾವೂರು ಕುಂಡಡ್ಕ ಕಡೆಯಿಂದ ಶಶಿ ಎಂಬವರ ರಿಕ್ಷಾದಲ್ಲಿ
ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಕುತ್ರೋಟ್ಟು – ಟಿ.ಬಿ ಕ್ರಾಸ್ ಮೂಲಕ ಉಜಿರೆ ಹಳೆ ಪೇಟೆಗೆ ಹತ್ತಿರ ರಸ್ತೆಯಲ್ಲಿ ಬರುತ್ತಿದ್ದ ಸಮಯ ಕುತ್ರೋಟ್ಟು ಬಳಿ ಘಟನೆ ನಡೆದಿದೆ.
ಬಾಲಕ ಸೇರಿದಂತೆ ಆಟೋದಲ್ಲಿ ಕೆಲ ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ . ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಆಟೋ ಪಲ್ಟಿಯಾಗಿ ಪ ರಿಣಾಮ ಬಾಲಕನ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದ ಬಾಲಕನನ್ನು ತಕ್ಷಣ ಸ್ಥಳೀಯ ನಿವಾಸಿಗಳ ಸಹಕಾರ ದಲ್ಲಿ. ಆಸ್ಪತ್ರೆಗೆ ಕರೆದುಕೊಂಡು ಬಂದರೂ, ಪ್ರಯೋಜನ ವಾಗದೆ ಬಾಲಕ ಮೃತಪಟ್ಟನೆನ್ನಲಾಗಿದೆ. ಆಟೋದಲ್ಲಿದ್ದ ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Related posts

ಚಲಿಸುತ್ತಿದ್ದ ಲಾರಿಯ ಬೋಲ್ಟ್ ಕಟ್: ಚಾಲಕನ ಮುಂಜಾಗ್ರತೆಯಿಂದ ತಪ್ಪಿದಅನಾಹುತ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಯುವಸಿರಿ ರೈತ ಭಾರತದ ಐಸಿರಿ ಕಲ್ಪನೆಯಂತೆ 2000ಕ್ಕೂ ಮಿಕ್ಕಿ ಯುವ ಜನತೆಯಿಂದ ಏಕಕಾಲದಲ್ಲಿ ಭತ್ತದ ಕೃಷಿಯ ಕಟಾವು ಕಾರ್ಯಕ್ರಮ

Suddi Udaya

ಮಂಜುಶ್ರೀ ಸೀನಿಯರ್ ಚೇಂಬರ್ ಪೂರ್ವಧ್ಯಕ್ಷರಾದ ಪ್ರಥ್ವಿರಂಜನ್ ರಾವ್’ರವರ ಶ್ರದ್ಧಾಂಜಲಿ ಸಭೆ

Suddi Udaya

ಅಳದಂಗಡಿಯಲ್ಲಿ ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ – ಡಿ .ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ: ‌ಸುದ್ದಿ ಉದಯ ಪತ್ರಿಕೆಯ ಸ್ಪೆಷಲ್ ರಿಪೋರ್ಟ್ ಗೆ ಸಾರ್ವಜನಿಕರ ವ್ಯಾಪಕ ಮೆಚ್ಚುಗೆ

Suddi Udaya

ಪಣಕಜೆ:ಪ್ಲೈವುಡ್ ಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಸದಸ್ಯರಿಗೆ 15 ಶೇ. ಡಿವಿಡೆಂಟ್

Suddi Udaya
error: Content is protected !!