32.5 C
ಪುತ್ತೂರು, ಬೆಳ್ತಂಗಡಿ
October 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಪ್ಪಿನಂಗಡಿ-ಕುಪ್ಪೆಟ್ಟಿ ರಸ್ತೆ: ಅಧಿಕಾರಿಗಳಿಂದ ಪರಿಶೀಲನೆ

ಬೆಳ್ತಂಗಡಿ: ಸಂಪೂರ್ಣ ಹದಗೆಟ್ಟಿರುವ ಉಪ್ಪಿನಂಗಡಿ-ಕುಪ್ಪೆಟ್ಟಿ ನಡುವಿನ ರಾಜ್ಯ ಹೆದ್ದಾರಿಗೆ ತೇಪೆ ಹಾಕುವ ಕಾರ್ಯಕ್ಕೆ ತುರ್ತು ಚಾಲನೆ ನೀಡಲಾಗಿದೆ.

ನ. 6ರಂದು ಕಲ್ಲೇರಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ವಿದ್ಯಮಾನಗಳ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆಯ ಸುಪರಿಟೆಂಡೆಂಟ್ ಇಂಜಿನಿಯರ್‌ಇಬ್ರಾಹಿಂ ಅವರು ಅ.29 ರಂದು ಉಪ್ಪಿನಂಗಡಿಯಿಂದ ಕುಪ್ಪೆಟ್ಟಿವರೆಗೆ ರಸ್ತೆಯಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು ಮತ್ತು ತುರ್ತು ದುರಸ್ತಿಗೆ ಕ್ರಮ ಕೈಗೊಂಡು ಚಾಲನೆ ನೀಡಿದರು.

ಈ ನಡುವೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಕೆ ಶಾಹುಲ್ ಹಮೀದ್ ನೇತೃತ್ವದ ನಿಯೋಗವೂ ಅಧಿಕಾರಿಗಳ ಕಚೇರಿಗೆ ತೆರಳಿ ರಸ್ತೆ ದುರಸ್ತಿಗೆ ಮನವಿ ಮಾಡಿತ್ತು ಮತ್ತು ಪ್ರತಿಭಟನೆಯ ಕಾವು ಏರುತ್ತಿರುವ ಬಗ್ಗೆ ಮಾಹಿತಿ ನೀಡಿತ್ತು.

ಕುಪ್ಪೆಟ್ಟಿಯಿಂದ ಉಪ್ಪಿನಂಗಡಿಯ ತನಕದ ರಸ್ತೆ ಮೊದಲೇ ಹಾಳಾಗಿತ್ತು. ಈ ರಸ್ತೆಯಲ್ಲಿ ಮಣ್ಣನ್ನು ಹೊತ್ತೊಯ್ಯುವ ಬೃಹತ್ ಲಾರಿಗಳಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಸಾಮಾನ್ಯ ಲಘು ಮತ್ತು ದ್ವಿಚಕ್ರ ಸವಾರರು ಹೊಂಡಗಳಲ್ಲಿ ರಸ್ತೆಯನ್ನು ಹುಡುಕುವಂತಾಗಿದ್ದು ದಿನನಿತ್ಯ ಅಪಘಾತ ಸಂಭವಿಸುತ್ತಲೇ ಇದೆ. ಶೀಘ್ರವೇ ಪರಿಪೂರ್ಣ ಮರು ಡಾಮರೀಕರಣ ನಡೆಸುವ ಮೂಲಕ ನಾಗರಿಕರನ್ನು ಬೀದಿಗಿಳಿದು ಹೋರಾಟ ನಡೆಸಲು ಅವಕಾಶ ಕೊಡದೆ ಸಹಕರಿಸಿ ಎಂದು ಶಾಹುಲ್ ಹಮೀದ್ ಅವರು ಅಧಿಕಾರಿಗಳನ್ನು ವಿನಂತಿಸಿದರು.

ರಸ್ತೆ ಪರಿಶೀಲನೆ ವೇಳೆ ಪ್ರಮುಖರಾದ ಜಯವಿಕ್ರಮ ಕಲ್ಲಾಪು, ಅಯಾಬ್ ಡಿ.ಕೆ, ಇಸುಬು ಪೆದಮಲೆ, ಪಯಾಜ್ ಅಹಮದ್, ಯು.ಟಿ ಶರೀಫ್‌ ಸಖಾಫಿ, ಅಹಮದಿನ್ ಆದಮ್, ಸಹಾಯಕ ಅಧಿಕಾರಿಯಾದ ರಾಘವೇಂದ್ರ ನಾಯಕ್, ಬೆಳ್ತಂಗಡಿ ಸಹಾಯಕ ಇಂಜಿನಿಯರ್ ಗೋಪಾಲ ಪಡಿಯಾರ್, ಎಂಜಿನಿಯರ್‌ಸೂರಜ್ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಕೊಕ್ಕಡದ ಬೃಹತ್ ರಕ್ತದಾನ ಶಿಬಿರ : 331 ಯೂನಿಟ್ಸ್ ರಕ್ತ ಸಂಗ್ರಹಣೆ

Suddi Udaya

ಕನ್ಯಾಡಿ ಹಾಲು ಉತ್ಪಾದಕರ ಮಹಿಳಾ ಸಂಘ: ಅಧ್ಯಕ್ಷರಾಗಿ ಸೌಮ್ಯಲತಾ, ಉಪಾಧ್ಯಕ್ಷರಾಗಿ ಸವಿತಾ

Suddi Udaya

ಅಂಚೆ ಇಲಾಖೆಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಕಕ್ಯಪದವು; ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ

Suddi Udaya

ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಯೋಗ ಸಪ್ತಾಹಕ್ಕೆ ಚಾಲನೆ

Suddi Udaya
error: Content is protected !!