October 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣದ ಅಧ್ಯಯನ: ಫಾತಿಮಾ ಸಫೀರಾಗೆ ಪಿಎಚ್.ಡಿ.

ಉಜಿರೆ: ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರದ ಕುರಿತು ಸಂಶೋಧನೆ ನಡೆಸಿದ ಉಜಿರೆಯ ಎಸ್‌ಡಿಎಂ ಕಾಲೇಜಿನ (ಸ್ವಾಯತ್ತ) ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಫಾತಿಮಾ ಸಫೀರಾ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.

‘ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರ: ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮಹಿಳೆಯರನ್ನು ಕುರಿತ ಅಧ್ಯಯನ’ ಎಂಬ ವಿಷಯದ ಕುರಿತು ಅವರು ಸಂಶೋಧನೆ ಕೈಗೊಂಡಿದ್ದರು. ಸ್ವಸಹಾಯ ಸಂಘಗಳು ಮುಸ್ಲಿಂ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಸ್ಥಾನಮಾನ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಸಬಲೀಕರಣದ ಪ್ರಕ್ರಿಯೆಯಲ್ಲಿ ವಹಿಸುವ ಪಾತ್ರವನ್ನು ಈ ಅಧ್ಯಯನವು ವಿಶ್ಲೇಷಿಸಿದೆ. ಮಹಿಳೆಯರ ಬದುಕಿನಲ್ಲಿ ಸ್ವಸಹಾಯ ಸಂಘಗಳು ಉಂಟುಮಾಡುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಕುರಿತೂ ಸಂಶೋಧನೆ ಬೆಳಕು ಚೆಲ್ಲಿದೆ.

ಡಾ. ವೇದವ ಪಿ. ಅವರ ಮಾರ್ಗದರ್ಶನದಲ್ಲಿ ಫಾತಿಮಾ ಸಫೀರಾ ಅವರು ಈ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ.

ಇವರು ಕೆ. ಹಂಝಾ ಆದಂ ಮತ್ತು ದಿವಂಗತ ಜಮೀಲಾ ದಂಪತಿಯ ಪುತ್ರಿ ಹಾಗೂ ಬಿ. ಎ. ಶಮೀವುಲ್ಲಾ ಅವರ ಪತ್ನಿ.

ಅವರ ಈ ಶೈಕ್ಷಣಿಕ ಸಾಧನೆಗೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Related posts

ದ.ಕ. ಜಿಲ್ಲೆಯ ಜಲಪ್ರದೇಶಗಳಲ್ಲಿ ಅನಧಿಕೃತ ಪ್ರವೇಶ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ

Suddi Udaya

ಉಜಿರೆ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನ ವಿಚಾರ ಸಂಕಿರಣ ಮತ್ತು ವಿಜ್ಞಾನ ನಾಟಕ ಸ್ಪರ್ಧೆ

Suddi Udaya

ಸೇಕ್ರೆಡ್ ಹಾರ್ಟ್ ಪ. ಪೂ ಕಾಲೇಜಿನ ಅನೀಶ್ ಎನ್.ಸಿಸಿ ರಾಷ್ಟ್ರೀಯ ಏಕತಾ ಶಿಬಿರಕ್ಕೆ ಆಯ್ಕೆ

Suddi Udaya

ಸುಲ್ಕೇರಿ ಮೊಗ್ರು ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಡ್ರಾಯಿಂಗ್ ಪುಸ್ತಕ ವಿತರಣೆ

Suddi Udaya

ಫೆ. 2: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

Suddi Udaya
error: Content is protected !!