November 1, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗರ್ಡಾಡಿ: ಸತ್ಯಶ್ರೀ ಫ್ರೆಂಡ್ಸ್ ಪಡ್ತಿರೆ ವತಿಯಿಂದ 3ನೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಆಟೋಟ ಸ್ಪರ್ಧೆ

ಗರ್ಡಾಡಿ: ಸತ್ಯಶ್ರೀ ಫ್ರೆಂಡ್ಸ್ ಪಡ್ತಿರೆ ವತಿಯಿಂದ 3ನೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಆಟೋಟ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯಶ್ರೀ ಫ್ರೆಂಡ್ಸ್ ಪಡ್ತಿರೆ, ಗರ್ಡಾಡಿಯ ಅಧ್ಯಕ್ಷರಾದ ಪ್ರದೀಪ್ ಪಡ್ತಿರೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಡಾ.ಬಾಬಾ. ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಿತ್ ಶಿವರಾಂ ಅವರು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿ ಹಬ್ಬವನ್ನು ಜಾತಿ , ಧರ್ಮದ ಎಲ್ಲೆಯನ್ನು ಮೀರಿ ಸೌಹಾರ್ದತೆಯಿಂದ ಆಚರಣೆ ಮಾಡುವ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ಸರ್ವಜನಾಂಗದ ಶಾಂತಿಯ ತೋಟವನ್ನು ಸಮೃದ್ಧಗೊಳಿಸಲು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳು ಹೆಚ್ಚು ಹೆಚ್ಚು ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರ್‌ನ ಪ್ರಾಂಶುಪಾಲರಾದ ಅಲೆಕ್ಸ್ ಐವನ್ ಸಿಕ್ವೇರಾ, ಪಡಂಗಡಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮೆಲ್ವಿನ್ ಸಿಕ್ವೇರಾ, ಅಬ್ಬಾಸ್ ಪಜೆಮಾರ್, ಸತ್ಯ ಸಾರಮುಪ್ಪಣ್ಯ ದೈವಸ್ಥಾನ, ಪಡ್ತಿರೆ ಗರ್ಡಾಡಿಯ ಪ್ರಧಾನ ಅರ್ಚಕರಾದ ಬಾಬು ಪಡ್ತಿರೆ, ದೈವಸ್ಥಾನದ ಅಧ್ಯಕ್ಷರಾದ ಕರಿಯ ಪಡ್ತಿರೆ ಹಾಗೂ ದೈವಸ್ಥಾನದ ಮಾಜಿ ಅಧ್ಯಕ್ಷರಾದ ನಾರಾಯಣ ಅವರು ಉಪಸ್ಥಿತರಿದ್ದರು. ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಕ್ರೀಡಾಸ್ಫೂರ್ತಿ, ಸೌಹಾರ್ದತೆ ಹಾಗೂ ಪರಸ್ಪರ ಬಾಂಧವ್ಯವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕ್ರೀಡಾಕೂಟಕ್ಕೆ ಗಣ್ಯರು ಶುಭ ಹಾರೈಸಿದರು.

Related posts

ನಡ: ಕನ್ಯಾಡಿ-1 ಸಾರ್ವ ಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶಿರ್ಲಾಲು: ಅಂಗಡಿಗೆ ಬಿದ್ದ ಬೃಹತ್ ಗಾತ್ರದ ಮರ, ಅಪಾರ ಹಾನಿ

Suddi Udaya

ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೇರಣಾ ಉಪನ್ಯಾಸ ಹಾಗೂ ಡಾ. ರಜತಾ ಪಿ. ಶೆಟ್ಟಿ ಅವರಿಗೆ ಸನ್ಮಾನ

Suddi Udaya

ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ವಿರೋಧಿಸಿ ಕಡಿರುದ್ಯಾವರ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಯುವವಾಹಿನಿ ವೇಣೂರು ಘಟಕದ ಸೇವಾ ಯೋಜನೆ ವತಿಯಿಂದ ಸಹಾಯಧನ ಹಸ್ತಾಂತರ

Suddi Udaya

ಲಯನ್ ಎಂ. ಜಿ. ಶೆಟ್ಟಿಯವರಿಗೆ ಪ್ರತಿಷ್ಠಿತ ಎಮ್.ಜೆ.ಎಫ್ ಗೌರವ

Suddi Udaya
error: Content is protected !!