October 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭರತನಾಟ್ಯ ವಿದ್ವತ್‌ ಅಂತಿಮ ಪರೀಕ್ಷೆಯಲ್ಲಿ ಮಾಧವಿ. ಎನ್. ಎಸ್ ಅವರಿಗೆ ಡಿಸ್ಟಿಂಕ್ಷನ್

ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ನಡೆಸುವ ಭರತನಾಟ್ಯ ವಿದ್ವತ್‌ ಅಂತಿಮ ಪರೀಕ್ಷೆಯಲ್ಲಿ ಉಜಿರೆಯ ಮಾಧವಿ ಎನ್. ಎಸ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಸುಮಾರು 16 ವರ್ಷಗಳ ಭರತನಾಟ್ಯ ಕಲೋಪಾಸನೆಯಲ್ಲಿ “ವಿದುಷಿ” ಪದವಿಯನ್ನು ಪಡೆದದ್ದು ಮಹತ್ವದ ಮೈಲಿಗಲ್ಲಾಗಿದೆ. ಇವರು ನಿನ್ನಿಕಲ್ಲು ನಿವಾಸಿ ದಿ| ಎನ್. ಸಂಜೀವ ಹಾಗೂ ಶ್ರೀಮತಿ ಸುಶೀಲ. ಎಸ್ ದಂಪತಿಯ ಪುತ್ರಿಯಾಗಿದ್ದು, ತಮ್ಮ ಭರತನಾಟ್ಯ ಕಲಿಕೆಯನ್ನು ದೇವಿಕಿರಣ್ ಕಲಾನಿಕೇತನ, ಮಡಂತ್ಯಾರು ಇದರ ಉಜಿರೆ ಶಾಖೆಯ ನೃತ್ಯಸಂಸ್ಥೆಯಲ್ಲಿ ಗುರು ವಿದುಷಿ ಶ್ರೀಮತಿ ಸ್ವಾತಿ ಜಯರಾಮ್ ಹಾಗೂ ಗುರು ವಿದುಷಿ ಶ್ರೀಮತಿ ಪ್ರಥ್ವಿ ಸತೀಶ್ ಅವರ ಮಾರ್ಗದರ್ಶನದಲ್ಲಿ ನಿರಂತರ ಸಾಧನೆ ಮಾಡುತ್ತಿದ್ದು, ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ಅಧ್ಯಯನ ಮತ್ತು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಮೂಡಬಿದಿರೆ ಇಲ್ಲಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.

Related posts

ಕಡಿರುದ್ಯಾವರ: ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಡಿರುದ್ಯಾವರ: ಕೊಪ್ಪದ ಗಂಡಿಯಲ್ಲಿ ಧರೆ ಕುಸಿತ : ಅಪಾರ ನಷ್ಟ

Suddi Udaya

ಭಕ್ತರ ಭಕುತಿಯ ಭಾವದಲ್ಲಿ ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಜಾತ್ರೋತ್ಸವ ಸಂಪನ್ನ

Suddi Udaya

ನಾರಾವಿ ಕಾಲೇಜಿನಲ್ಲಿ ಉಚಿತ ಫಿಸಿಯೋಥೆರಪಿ ಹಾಗೂ ಹೋಮಿಯೋಪಥಿಕ್ ತಪಸಣಾ ಶಿಬಿರ

Suddi Udaya

ಪ್ರವೀಣ್ ನೆಟ್ಟಾರು ಮನೆಗೆ ಹರೀಶ್ ಪೂಂಜ ಭೇಟಿ

Suddi Udaya

ಬೆಳ್ತಂಗಡಿ: ಅಕ್ರಮ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಪೊಲೀಸರ ದಾಳಿ: ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳು ಪೊಲೀಸ್ ವಶ

Suddi Udaya
error: Content is protected !!