
ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ 71ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಸೈoಟ್ ಅಲೋಶಿಯಸ್ ಕಾಲೇಜಿನ ಕನ್ನಡ ಭಾಷಾ ವಿಭಾಗ ಮುಖ್ಯಸ್ಥೆ ಜಾನೆಟ್ ಪಿಂಟೋ ರವರು ” ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಸಂಭ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಪ್ರೀತಿ, ಗೌರವದಿಂದ ನಮ್ಮ ಭಾಷೆಯ ಬಗೆಗಿನ ಅಭಿಮಾನ ಶಾಶ್ವತವಾಗಿದ್ದಲ್ಲಿ ಮಾತ್ರ ಸಂಸ್ಕೃತಿಯ ಸೊಗಡು ಮುಂದಿನ ಪೀಳಿಗೆ ಅರಿಯಲು ಮತ್ತು ಆಚರಿಸಲು ಸಾಧ್ಯ”ವೆಂದು ತಿಳಿಸಿದರು.
ಕಾಲೇಜು ನಿರ್ದೇಶಕ ಡಾ. ಶರತ್ ಗೋರೆ ” ಕಾಲ ಬದಲಾಗುತ್ತಾ ಹೋದಂತೆ ನಮ್ಮ ಭಾಷೆಯ ಶೈಲಿ ಬದಲಾಗಬಾರದು. ಬದಲಿಗೆ ತನ್ನತನ, ಪ್ರಾಚೀನ ಸೊಗಡು, ಪರಂಪರೆಯನ್ನು ಉಳಿಸಿಕೊಂಡಾಗ ಭಾಷೆಯ ಸತ್ವ ಉಳಿಯಲು ಸಾಧ್ಯ” ವೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ನಿರ್ದೇಶಕ ಮತ್ತು ಪ್ರಾಂಶುಪಾಲರಾಗಿರುವಂತಹ ಡಾ. ಎಸ್. ಎನ್ ವೆಂಕಟೇಶ್ ನಾಯಕ್ ರವರು ವಹಿಸಿದ್ದರು. ” ಕನ್ನಡ ಭಾಷೆಯ ಬಳಕೆಯಾದಾಗ ನಮ್ಮ ಸಂಸ್ಕೃತಿಯ ಸೊಗಡು ಅನಾವರಣಗೊಳ್ಳಲು ಸಾಧ್ಯ. ಈ ಮೂಲಕ ನಮ್ಮ ಭಾಷಾ ಪರಂಪರೆಯನ್ನು ಉಳಿಸೋಣ. ಬೆಳೆಸೋಣ” ವೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಕಾಲೇಜು ನಿರ್ದೇಶಕರುಗಳಾದ ಮೆಹಬೂಬ ಬಾಷಾ, ಯೋಗೇಶ್ ಬೆಡೆಕರ್, ಚಂದ್ರಶೇಖರ ರಾಜೇ ಅರಸ್, ಸುಭಾಶ್ ಝಾ ಮತ್ತು ಕಾಲೇಜು ಆಡಳಿತಧಿಕಾರಿ ಶ್ರೀಯುತ ಅರುಣ್ ಡಿಸಿಲ್ವ ರವರು ಉಪಸ್ಥಿತರಿದ್ದರು. ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಆಶಿಕಾ ಕಿರಣ್ ನೆರವೇರಿಸಿದರು. ಜೀವಶಾಸ್ತ್ರ ವಿಭಾಗ ಮುಖ್ಯಸ್ಥೆ ಧನಶ್ರೀ ಕುಡ್ವ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಜೊವಿಟ ವಂದನಾರ್ಪಣೆ ಮಾಡಿದರು. ಕನ್ನಡ ಉಪನ್ಯಾಸಕ ನಿಕೇತ್ ಮೋಹನ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.











