ಬೆಳ್ತಂಗಡಿ: ವಿಡಿಯೋ ವೈರಲ್ ಆಗಿರುವ ಬಗ್ಗೆ ವಿವಾಹಿತ ಮಹಿಳೆ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿಯ ವಕೀಲರೊಬ್ಬರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯ ವಿಡಿಯೋವನ್ನು ವಕೀಲ ವೇಣೂರು ಗ್ರಾಮದ ಸತೀಶ್ ಎಂಬವರು ಪಡೆದುಕೊಂಡು ಬಳಿಕ ವಿಡಿಯೋವನ್ನು ಬೇರೆಯವರಿಗೆ ಕಳುಹಿಸಿ ಇದೀಗ ಎಲ್ಲೆಡೆ ವೈರಲ್ ಆಗಿರುವ ಬಗ್ಗೆ ವಿವಾಹಿತ ಮಹಿಳೆ ವೇಣೂರು ಪೊಲೀಸ್ ಠಾಣೆಗೆ ಸೆ.21 ರಂದು ದೂರು ನೀಡಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸರು INFORMATION TECHNOLOGY ACT 2000, (U/S 66(E),67,67(A)) ಅಡಿಯಲ್ಲಿ ವಕೀಲರಾದ ಸತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.











