November 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸಮ್ಮೇಳನ: ಅಭ್ಯಾಸ್ ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗೆ ರನ್ನರ್ಸ್-ಅಪ್ ಪ್ರಶಸ್ತಿ

ಉಜಿರೆ: ಎಸ್.ಡಿ.ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SDM IT) ಕಾಲೇಜಿನಲ್ಲಿ ಅ.29 ಮತ್ತು 30ರಂದು ಆಯೋಜಿಸಲಾಗಿದ್ದ ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ (State-Level Techno-Cultural Fest) ಅಭ್ಯಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಸಮಗ್ರ ರನ್ನರ್ಸ್-ಅಪ್ (Runner-Up) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ(Quiz Competition)ಕಾಲೇಜಿನ ಸುವಿತ್ ರಾವ್ ಮತ್ತು ಚೇತನ್ ಕುಮಾರ್ ಎ. ಎಂ ಜೋಡಿಯು ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿದೆ. ಅಂತೆಯೇ ಟ್ರೆಷರ್ ಹಂಟ್ ವಿಭಾಗದಲ್ಲಿ (Treasure Hunt): ಮಧುಶ್ರೀ, ಹಿಮಾ ಟಿ. ಎ, ಸುಜಿತ್ ನಾಯ್ಕ್ ಮತ್ತು ಶೈವಿಕ್ ಗೌಡ ಹೆಚ್. ಎ ಅವರ ತಂಡವು ತೀವ್ರ ಪೈಪೋಟಿಯ ನಡುವೆ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಕಾರ್ಯಕ್ರಮದ ವಿಶೇಷ ಅಂಗವಾಗಿ ವೆರೈಟಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು (Variety Competition) ಕಾಲೇಜಿನ ಒಟ್ಟು 43 ವಿದ್ಯಾರ್ಥಿಗಳ ಬೃಹತ್ ತಂಡವು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಅತ್ಯುತ್ತಮ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಇವರ ಅದ್ಭುತ ಪ್ರದರ್ಶನಕ್ಕೆ 10,000 ರೂ. ಮೌಲ್ಯದ ಪ್ರೋತ್ಸಾಹಧನವನ್ನು (Gift Voucher) ನೀಡಿ ಗೌರವಿಸಲಾಗಿದೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related posts

ಸಮಸ್ತ ಬೆಳ್ತಂಗಡಿ ಸಂಯುಕ್ತ ಜಮಾಅತ್ ಖಾಝಿಯಾಗಿ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್: ಕನ್ನಡಿಕಟ್ಟೆ ಮಸ್ಜಿದ್ ನಲ್ಲಿ ಕಾರ್ಯಕ್ರಮ ಸಂಪನ್ನ

Suddi Udaya

ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನಾ ದಿನಾಚರಣೆ

Suddi Udaya

ಮಾ.31ರೊಳಗೆ ಶಾಲಾ ಹಳೇ ವಿದ್ಯಾರ್ಥಿಗಳ ಸಂಘ ರಚಿಸುವಂತೆ ಶಿಕ್ಷಣ ಇಲಾಖೆ ಸೂಚನೆ

Suddi Udaya

ಜ.22: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಬೆಳ್ತಂಗಡಿ ತಾಲೂಕಿನಾದ್ಯಂತ ಸಂಭ್ರಮಿಸಲು ಸಜ್ಜಾಗಿರುವ ರಾಮಭಕ್ತರು

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಮಡಂತ್ಯಾರು ಸಿ ಎ ಬ್ಯಾಂಕ್ ಅಧ್ಯಕ್ಷ ಜೊಯೆಲ್ ಮೆಂಡೊನ್ಸಾ ರವರನ್ನು ಅಭಿನಂದಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ

Suddi Udaya
error: Content is protected !!