November 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಯಾ ವಿಶೇಷ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬೆಳ್ತಂಗಡಿ: ಲಾಯಿಲದ ದಯಾ ವಿಶೇಷ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ನಾಡಗೀತೆಯನ್ನು ಹಾಡುವ ಮುಖಾಂತರ ಚಾಲನೆ ನೀಡಲಾಯಿತು.

ವೇದಿಕೆಯಲ್ಲಿ ಶಾಲಾ ಸಂಚಾಲಕ ವಂ.ಫಾ.ವಿನೋದ್ ಮಸ್ಕರೆನ್ಹಸ್ , ಶಾಲಾ ಮುಖ್ಯ ಶಿಕ್ಷಕಿ ದಿವ್ಯ ಟಿವಿ, ಮೂರ್ಜೆ ಸೇಂಟ್ ಫ್ರಾನ್ಸಿಸ್ ಸೆವಿಯರ್ ಚರ್ಚ್ ನ ಧರ್ಮ ಗುರು ಫಾ. ಸಿಬಿ ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ವಂ. ಫಾ. ವಿನೋದ್ ಮಸ್ಕರೆನ್ಹಸ್ ಅಧ್ಯಕ್ಷತೆ ವಹಿಸಿ ಕನ್ನಡ ಧ್ವಜದ ಮಹತ್ವ ಹಾಗೂ ಕನ್ನಡ ನಾಡು-ನುಡಿಯ ಇತಿಹಾಸದ ಕುರಿತು ಹೇಳಿದರು.

ಶಾಲೆಯ ವಿಶೇಷ ಮಕ್ಕಳು ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕನ್ನಡ ಗೀತೆಗಳು, ನೃತ್ಯ ಹಾಗೂ ವಿವಿಧ ಮನರಂಜನಾ ಚಟುವಟಿಕೆಗಳ ಮೂಲಕ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು.

ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ, ಪ್ರೀತಿ ಹಾಗೂ ಗೌರವವನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಸೆಂಟ್ ಫ್ರಾನ್ಸಿಸ್ ಸೆವಿಯರ್ ಚರ್ಚ್ ಮೂರ್ಜೆ ಇಲ್ಲಿನ ಸಂಡೇ ಸ್ಕೂಲ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ವಿಶೇಷ ಶಿಕ್ಷಕ ಚಿರಂಜೀವಿ ನಿರೂಪಿಸಿ, ಧನ್ಯವಾದವಿತ್ತರು.

Related posts

ಬಡಕೋಡಿ ಸ. ಹಿ. ಪ್ರಾ. ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಸರ್ಕಾರಿ ಬಸ್ಸುಗಳ ಮುಖಾಮುಖಿ ಡಿಕ್ಕಿ: ಪ್ರಯಾಣಿಕರು ಸಣ್ಣಪುಟ್ಟ ಗಾಯಾಗಳಿಂದ ಪಾರು

Suddi Udaya

ಡಿ.30: ರೂ.1.62 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪಡಂಗಡಿ ಪ್ರಾ.ಕೃ.ಪ.ಸ. ಸಂಘದ “ಸಮೃದ್ಧಿ” ಸಭಾಭವನ ಹಾಗೂ ಗೋದಾಮು ಕಟ್ಟಡ ಲೋಕಾರ್ಪಣೆ

Suddi Udaya

ಎಸ್.ಡಿ.ಎಂ ಕಾಲೇಜು : ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪೂರ್ವಾಭ್ಯಾಸ ಶಿಬಿರ

Suddi Udaya

ಧರ್ಮಸ್ಥಳ ಲಕ್ಷ ದೀಪೋತ್ಸವದ ಪ್ರಯುಕ್ತ 12ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಹೊಸಂಗಡಿ: ಕಾರು ಡಿಕ್ಕಿ-ಬಾಲಕ ಸ್ಥಳದಲ್ಲೇ ಮೃತ್ಯು

Suddi Udaya
error: Content is protected !!