November 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಶಿಶಿಲ: ಬೆಳ್ತಂಗಡಿ ತಾಲೂಕು ಮಟ್ಟದ ಗೌಡೆರೆ ಗೌಜಿ ಗಮ್ಮತ್ತು ಆಮಂತ್ರಣ ಬಿಡುಗಡೆ


ಶಿಶಿಲ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಶಿಶಿಲ, ಗ್ರಾಮ ಸಮಿತಿ ಶಿಶಿಲ ವತಿಯಿಂದ ಬೆಳ್ತಂಗಡಿ ತಾಲೂಕು ಮಟ್ಟದ ಗೌಡೆರೆ ಗೌಜಿ ಗಮ್ಮತ್ತು ಕಾರ್ಯಕ್ರಮದ ಸಮಾಲೋಚನಾ ಸಭೆ ಮತ್ತು ಆಮಂತ್ರಣ ಪತ್ರ ಬಿಡುಗಡೆಯು ಸಮುದಾಯ ಭವನ ಶಿಶಿಲದಲ್ಲಿ ನಡೆಯಿತು.

ಗೌಡೆರೆ ಗೌಜಿ ಗಮ್ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 2026 ಇದರ ಬಗ್ಗೆ ತಾಲೂಕು ಒಕ್ಕಲಿಗ ಯುವ ವೇದಿಕೆ ಇದರ ಕಾರ್ಯದರ್ಶಿ ಸುರೇಶ್ ಕೌಡಂಗೆ ಇವರು ಮಾಹಿತಿ ನೀಡಿ ಶಿಶಿಲ ಗ್ರಾಮದ ಒಕ್ಕಲಿಗ ಗ್ರಾಮ ಸಮಿತಿಯಿಂದ ಸಹಕಾರ ಕೋರಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಿಶಿಲ ಒಕ್ಕಲಿಗ ಗ್ರಾಮ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಬದ್ರಿಜಲ್, ಉಪಾಧ್ಯಕ್ಷ ಕೊರಗಪ್ಪ ಗೌಡ, ಪಡ್ಪು ಗ್ರಾಮ ಗೌಡರಾದ ರಮೇಶ್ ಗೌಡ ಪಿಲಿಂಗಲ್, ಒತ್ತು ಗೌಡರಾದ ಕೃಷ್ಣಪ್ಪ ಗೌಡ ಮುಚಿರಡ್ಕ ಗ್ರಾಮ ಸಮಿತಿ ಸದಸ್ಯರಾದ ಸುಬ್ರಾಯ ಗೌಡ ಬದ್ರಿಜಲ್, ರಮೇಶ್ ಗೌಡ ಮುಚಿರಡ್ಕ, ಕೋಮಲಾಕ್ಷಿ ಅಡಹಳ್ಳ, ಗಾಯತ್ರಿ ಗುತ್ತು,ಧರ್ಮಪಾಲ ಗೌಡ , ಗ್ರಾಮ ಸಮಿತಿ ಕಾರ್ಯದರ್ಶಿ ಭುವನ್ ಕುಮಾರ್ ಬರಮೇಲು ಹಾಗೂ ತಾಲೂಕು ಯುವ ವೇದಿಕೆ ಸದಸ್ಯರು ಹಾಗೂ ಶಿಶಿಲ ಗ್ರಾಮದ ಎಲ್ಲಾ 7 ಬೈಲುವಾರು ಸದಸ್ಯರು ಹಾಗೂ ಗ್ರಾಮದ ಒಕ್ಕಲಿಗ ಸಮುದಾಯ ಸದಸ್ಯರು ಭಾಗವಹಿಸಿ, ಕಾರ್ಯಕ್ರಮಕ್ಕೆ ಶಿಶಿಲ ಗ್ರಾಮದ ಎಲ್ಲಾ ಸದಸ್ಯರ ಸಹಕಾರ ಕೇಳಲಾಯಿತು.

2026ನೇ ವರ್ಷದ ಲೆಕ್ಕಾಚಾರ ಮಂಡಿಸಲಾಯಿತು. ಭುವನ್ ಕುಮಾರ್ ನಿರೂಪಿಸಿದರು.

Related posts

ತಣ್ಣೀರುಪಂತ ಸುಗಮ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಆಟಿಡೊಂಜಿ ದಿನ

Suddi Udaya

ಬೆಹರೆನ್ ದೇಶದ ಬಿಲ್ಲವ ವೈಭವ ಕಾರ್ಯಕ್ರಮದಲ್ಲಿ ರಕ್ಷಿತ್ ಶಿವರಾಮ್ ರವರಿಗೆ ಸನ್ಮಾನ

Suddi Udaya

ಮೇ.31ಕ್ಕೆ ನಿವೃತ್ತರಾಗುತ್ತಿರುವ ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ಮೆನೇಜರ್ ಲ| ರವೀಂದ್ರ ಶೆಟ್ಟಿ ಬಳಂಜ

Suddi Udaya

ಎ.22: ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ “ಹರಿ ದರ್ಶನ” ಯಕ್ಷಗಾನ ಬಯಲಾಟ

Suddi Udaya

ಅರಸಿನಮಕ್ಕಿಯಲ್ಲಿ ಮಹಿಳೆಯರಿಗಾಗಿ 31ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ಶಿರ್ಲಾಲು: ಎಸ್.ಐ ಆರ್ ಕೆಲಸಕ್ಕೆಂದು ತೆರಳಿದ್ದ ಮಹಿಳೆಗೆ ಜಾತಿ ನಿಂದನೆ: ಪ್ರಕರಣ ದಾಖಲು

Suddi Udaya
error: Content is protected !!