23.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿರ್ಲಾಲು: ಎಸ್.ಐ ಆರ್ ಕೆಲಸಕ್ಕೆಂದು ತೆರಳಿದ್ದ ಮಹಿಳೆಗೆ ಜಾತಿ ನಿಂದನೆ: ಪ್ರಕರಣ ದಾಖಲು

ಬೆಳ್ತಂಗಡಿ: ಶಿರ್ಲಾಲಿನಲ್ಲಿ ಎಸ್.ಐ ಆರ್ ಕೆಲಸಕ್ಕೆಂದು ತೆರಳಿದ್ದ ದಲಿತ ಸಮುದಾಯಕ್ಕೆ ಸೇರಿದ‌ ಬಿ.ಎಲ್.ಒ ಗೆ ಸ್ಥಳೀಯ ನಿವಾಸಿ ಯಶೋಧ ಆಚಾರಿ ಎಂಬವರು ಮನೆಯೊಳಗೆ ಪ್ರವೇಶಿಸಲು ಅನುಮತಿ ನೀಡದೆ ನೀನು ಹೊರಗೆ ನಿಲ್ಲು ನಿನ್ನ ಜಾತಿಯವರು ಅಲ್ಲಿಯೇ ನಿಲ್ಲುವುದು ಬರಬಾರದು ಎಂದು ಜಾತಿ ನಿಂದನೆ ಮಾಡಿರುವುದಾಗಿ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಬಿಎಲ್.ಒ ಆಗಿ ಕೆಲಸ ಮಾಡುತ್ತಿದ್ದು ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬವರ ಮನೆಗೆ ಬಿ.ಎಲ್.ಒ‌ ಮಾಧವ ಎಂಬರೊಂದಿಗೆ ಜು.6 ರಂದು ಬೆಳಗ್ಗೆ 11:30 ಕ್ಕೆ ಮನೆಯ ಅಂಗಳಕ್ಕೆ ಪ್ರವೇಶಿಸಿದಾಗ “ನೀನು ಅಲ್ಲಿಯೇ ನಿಲ್ಲು ನಿಮ್ಮ ಜಾತಿಯವರು ಇಲ್ಲಿಗೆ ಬರುವುದಿಲ್ಲ” ಎಂದು ಹೇಳಿದ್ದು ಮನೆಯ ಸಿಟ್ ಔಟ್ ಗೆ ಪ್ರವೇಶ ನೀಡದೆ ಮೆಟ್ಟಿಲು ಬಳಿಯೇ ಮಾತಿನಲ್ಲಿಯೇ ತಡೆದು ಯಶೋಧ ಆಚಾರಿ ನಿಲ್ಲಿಸಿ ಅಪಮಾನ ಮಾಡಿ ಜಾತಿ ನಿಂದನೆ ಮಾಡಿರುವುದಾಗಿ ಜು.7 ರಂದು ದೂರು ನೀಡಿದ್ದಾರೆ.

ಬಿ.ಎಲ್.ಒ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಯಶೋಧ ಆಚಾರಿ ವಿರುದ್ಧ ಜು.7 ರಂದು ಸಂಜೆ SC/ST act-2015(u/s-3(1)(r),3(2)(va)) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನ:ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಸಂತಾಪ

Suddi Udaya

ಹೊಸಂಗಡಿ: ಸೂರ್ಯನಾರಾಯಣ ದೇವಸ್ಥಾನದ ಬಳಿಯ ಫಲ್ಗುಣಿ ನದಿಯ ಬಲದಂಡೆ ಸಂರಕ್ಷಣಾ ಕಾಮಗಾರಿಗೆ ರೂ.50 ಲಕ್ಷ ಅನುದಾನ– ಶಾಸಕ ಹರೀಶ್ ಪೂಂಜ

Suddi Udaya

ಗುರುವಾಯನಕೆರೆ ಅಯ್ಯಪ್ಪ ಭಕ್ತರ ಮಹಾಸಂಗಮ ಸಮಾವೇಶದಲ್ಲಿ ಸಂಪತ್ ಬಿ. ಸುವರ್ಣ ರವರಿಂದ 7 ಹಕ್ಕೋತ್ತಾಯಗಳ ಮಂಡನೆ

Suddi Udaya

ಉಜಿರೆ ಶ್ರೀ ಧ.ಮಂ.ಕಾಲೇಜಿನಲ್ಲಿ “MS Excel with Power BI” ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮ

Suddi Udaya

ಇಂದು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಕೆ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

Suddi Udaya

ನಿಡ್ಲೆ ಸ.ಹಿ.ಪ್ರಾ. ಶಾಲೆಯ ಕಟ್ಟಡ ದುರಸ್ಥಿ ಕಾರ್ಯಕ್ಕೆ ಶ್ರೀ ಕ್ಷೇ. ಧ.ಗ್ರಾ.ಯೋ. ವತಿಯಿಂದ ರೂ. 1ಲಕ್ಷ ಮಂಜೂರು

Suddi Udaya
error: Content is protected !!