November 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಆಶಾ ಯಂಗ್‌ಸ್ಟರ್ಸ್ ಕ್ಲಬ್ ಬೆಳ್ತಂಗಡಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

ಬೆಳ್ತಂಗಡಿ: ಆಶಾ ಯಂಗ್‌ಸ್ಟರ್ಸ್ ಕ್ಲಬ್ ಬೆಳ್ತಂಗಡಿ ಇದರ 2026- 27 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆ.31ರಂದುಕ್ಲಬ್ ನ ಸಭಾಂಗಣದಲ್ಲಿ ಜರಗಿತು.

ನಿರ್ಗಮನ ಅಧ್ಯಕ್ಷ ಜಯರಾಮ್ ಬಂಗೇರ ಮತ್ತು ಅವರ ಪದಾಧಿಕಾರಿಗಳ ತಂಡವು ನಿಯೋಜಿತ ಅಧ್ಯಕ್ಷ ಪಾಲಾಕ್ಷ ಸುವರ್ಣ ಮತ್ತು ಅವರ ಪದಾಧಿಕಾರಿಗಳ ತಂಡಕ್ಕೆ ಅಧಿಕಾರವನ್ನು ಹಸ್ತಾಂತರಿಸಿ ಶುಭ ಹಾರೈಸಿದರು.

ಬೆಳ್ತಂಗಡಿಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ನಿವೃತ್ತ ಮೇಲ್ವಿಚಾರಕ ಸುರೇಂದ್ರ ಎಸ್ ರವರು ಭಾಗವಹಿಸಿ ಸಂಘದಲ್ಲಿ ಪದಾಧಿಕಾರಿಗಳ ಪಾತ್ರ ದ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕ್ಲಬ್ ನ ಖಜಾಂಚಿ ನಾರಾಯಣ ಶೆಟ್ಟಿ, ಶಿವಪ್ಪ ಬಿರ್ವ, ದಯಾನಂದ ಶೆಟ್ಟಿ, ಶಿವರಾಮ ಹೆಗ್ದೆ, ರಫೀಕ್ ಗುರುವಾಯನಕೆರೆ, ಕೃಷ್ಣಪ್ಪ ಭಂಡಾರಿ, ಸಂಜೀವ ಬಿ.ಹೆಚ್ ., ಜೀವನ್ ಪತ್ರಾವೋ ಹಾಗೂ ಮಾಧ್ಯಮ ಪ್ರತಿನಿಧಿ ತುಕಾರಾಂ ಬಿ., ಉಪಸ್ಥಿತರಿದ್ದರು.

ಬಿ.ಲಕ್ಷ್ಮಣ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಕರ್ಕೇರ ಧನ್ಯವಾದವಿತ್ತರು.

Related posts

ಉಜಿರೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಕುರಿತು ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ

Suddi Udaya

ಜ.3: ಬೆಳ್ತಂಗಡಿ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ

Suddi Udaya

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ

Suddi Udaya

ಬಂದಾರು ಶಾಲಾ ವಿದ್ಯಾರ್ಥಿಗಳಿಗೆ ಬೆಸ್ಟ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಎಸ್.ಡಿ.ಎಂ ಮಸ್ಟರಿಂಗ್ ಕೇಂದ್ರದಿಂದ ತಾಲೂಕಿನ 241 ಮತಗಟ್ಟೆಗಳಿಗೆ ಮತಯಂತ್ರಯೊಂದಿಗೆ ತೆರಳಿದ ಚುನಾವಣಾ ಸಿಬ್ಬಂದಿಗಳು

Suddi Udaya

ಕಾಜೂರು ಶಿಕ್ಷಣ ಸಂಸ್ಥೆಯಲ್ಲಿ “ಅಲೀಫ್ ಡೇ” ಸಮಾರಂಭ

Suddi Udaya
error: Content is protected !!