26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ.3: ಬೆಳ್ತಂಗಡಿ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ

ಬೆಳ್ತಂಗಡಿ: ರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ 51ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಜ.3ರಂದು ನಡೆಯಲಿರುವುದು.

ಜ.3ರಂದು ಬೆಳಿಗ್ಗೆ ಗಣಹೋಮ, ಶ್ರೀ ಮಹಾಗಣಪತಿ ದೇವರಿಗೆ ಅಥರ್ವಶೀರ್ಷಾಭಿಷೇಕ, ಶಾಸ್ತಾರ ಸಹಸ್ರಕದಳಿಯಾಗ ಹಾಗೂ ಶ್ರೀ ಅಯ್ಯಪ್ಪ ದೇವರಿಗೆ ಏಕಾದಶ ರುದ್ರಾಭಿಷೇಕ ನಂತರ ಅಯ್ಯಪ್ಪ ಸ್ವಾಮಿಯ ದೀಪೋತ್ಸವದ ಉದ್ಘಾಟನೆ ನಡೆಯಲಿರುವುದು.

ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ಬೆಂಗಳೂರು ಬೇಗೂರು ಶ್ರೀ ಚೆನ್ನಕೇಶವ ದೇವಸ್ಥಾನದ ಧರ್ಮದರ್ಶಿ ನಾರಾಯಣ ಬೇಗೂರು, ಬೆಳ್ತಂಗಡಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಯು., ಭಾಸ್ಕರ ಗುರುಸ್ವಾಮಿ, ಬೆಳ್ತಂಗಡಿ ಎಂ.ಆರ್.ಜೆ. ಎಂಟರ್‌ಪ್ರಸೈಸ್‌ನ ರಾಘವೇಂದ್ರ ಕಿಣಿ ಭಾಗವಹಿಸಲಿರುವರು.

ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪಸೇವೆ, ದೀಪಾರಾಧನೆ, ರಾತ್ರಿ ಲಾಯಿಲ ವೆಂಕಟರಮಣ ದೇವಸ್ಥಾನದ ಬಳಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ಪಾಲಾಶ ಕೊಂಬೆಯ ಮೆರವಣಿಗೆ, ಶ್ರೀ ಶನೀಶ್ವರ ದೇವರಿಗೆ ಕಲ್ಪೋಕ್ತ ಪೂಜೆ, ಶ್ರೀ ಸತ್ಯದೇವತೆಗೆ ತಂಬಿಲ ಸೇವೆ, ಶ್ರೀ ಶಾಸ್ತಾರ ದೇವರ ಸನ್ನಿಧಾನದಲ್ಲಿ ರಂಗಪೂಜೆ, ಮಂತ್ರಾಕ್ಷತೆ, ಶ್ರೀ ಸತ್ಯದೇವತೆ ನೇಮೋತ್ಸವ ಜರುಗಲಿರುವುದು. ಜ.4ರಂದು ಬೆಳಿಗ್ಗೆ ಮಾಲಾಧಾರಿಗಳಿಂದ ಅಗ್ನಿಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿರುವುದು.

Related posts

ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದ ಸಭೆ

Suddi Udaya

ಮಚ್ಚಿನ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಎಕ್ಸೆಲ್ ನಲ್ಲಿ ಮಹಾವೀರ ಜಯಂತಿ ಆಚರಣೆ

Suddi Udaya

ಕನ್ಯಾಡಿ 2 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya

ವಾರದ ಸಂತೆ ಮಾರುಕಟ್ಟೆಗೆ ಮೀಸಲಿರಿಸಿದ ಜಮೀನನ್ನು ಸ್ವಾಧೀನಪಡಿಸಿಕೊಂಡ ತಣ್ಣೀರುಪಂತ ಗ್ರಾ.ಪಂ.

Suddi Udaya

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

Suddi Udaya
error: Content is protected !!