November 3, 2026
ತಾಲೂಕು ಸುದ್ದಿಬೆಳ್ತಂಗಡಿಸಮಸ್ಯೆ

ಡಾ. ಪ್ರದೀಪ್ ನಾವೂರು ಆಟಿಕುಕ್ಕೆ ಅವರ ಕ್ಲಿನಿಕ್‌ಗೆ ಸಚಿವ ಯು.ಟಿ. ಖಾದರ್ ಭೇಟಿ – ಕೆಲ ದಿನಗಳ ಹಿಂದೆ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಭೇಟಿ-ಮಾತುಕತೆ


ನಾವೂರು: ನಾವೂರಿನ ವೈದ್ಯ ಡಾ. ಪ್ರದೀಪ್ ನಾವೂರು ಆಟಿಕುಕ್ಕೆ ಅವರ ಕ್ಲಿನಿಕ್‌ಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನ.೨ರಂದು ಭೇಟಿ ನೀಡಿದ್ದು, ಡಾ. ಪ್ರದೀಪ್ ಅವರೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.
ಡಾ. ಪ್ರದೀಪ್ ಅವರ ಕ್ಲಿನಿಕ್‌ಗೆ ಕೆಲ ದಿನಗಳ ಹಿಂದೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕ್ಲಿನಿಕ್ ನಾಶ ಮಾಡಲು ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ಪಾರದರ್ಶಕ ತನಿಖೆ ನಡೆಯಬೇಕು ಎನ್ನುವುದು ನಮ್ಮ ಅನಿಸಿಕೆಯೂ ಆಗಿದೆ. ನಿಮಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸಚಿವ ಖಾದರ್ ಭರವಸೆ ನೀಡಿದ್ದಾರೆ.

ಆರೋಗ್ಯ ಸಮಸ್ಯೆ ಹೇಳಿಕೊಂಡು ಬರುವ ಕ್ಲಿನಿಕ್‌ಗೆ ಹಾನಿ ಮಾಡುವ ಕೃತ್ಯಗಳನ್ನು ಸಹಿಸಲಾಗುವುದಿಲ್ಲ. ವೈದ್ಯರನ್ನು ಎಲ್ಲರೂ ಗೌರವದಿಂದ ನೋಡುತ್ತಾರೆ. ಅಂಥÀದರಲ್ಲಿ ಡಾ. ಪ್ರದೀಪ್ ನಾವೂರು ಅವರ ಕ್ಲಿನಿಕ್‌ಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಅಕ್ಷಮ್ಯ. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂಬ ಭರವಸೆ ನನಗೆ ಇದೆ ಎಂದು ಯು.ಟಿ. ಖಾದರ್ ಅವರು ಮಾತುಕತೆ ವೇಳೆ ಡಾ. ಪ್ರದೀಪ್‌ರಿಗೆ ತಿಳಿಸಿದ್ದಾರೆ.

ಖಾದರ್ ಭೇಟಿ ಸಂದರ್ಭದಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಾಂಗ್ರೆಸ್ ಹಿರಿಯ ಮುಖಂಡ ರಾಜಶೇಖರ ಅಜ್ರಿ, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದು, ಡಾ. ಪ್ರದೀಪ್ ಅವರಿಗೆ ನೈತಿಕ ಸ್ಥೆöÊರ್ಯ ತುಂಬಿದರು. ಕಟ್ಟಡದ ಮಾಲಕಿ ತನುಜಾ ಶೇಖರ್ ಹಾಗೂ ಡಾ. ಕವಿತಾ ಪ್ರದೀಪ್ ಕೂಡ ಈ ವೇಳೆ ಉಪಸ್ಥಿತರಿದ್ದರು.
ಖಾದರ್ ಭೇಟಿ ಬಗ್ಗೆ ಮಾತನಾಡಿದ ಡಾ. ಪ್ರದೀಪ್, “ರಾಜ್ಯದ ಆರೋಗ್ಯ ಸಚಿವರು ಕ್ಲಿನಿಕ್‌ಗೆ ಭೇಟಿ ನೀಡಿ ಮಾತನಾಡಿ, ನಮ್ಮಲ್ಲಿ ಭರವಸೆ ತುಂಬಿರುವುದು ಸಮಾಧಾನ ತಂದಿದೆ. ಈ ಪ್ರಕರಣದಲ್ಲಿ ನಮಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಕೃತ್ಯದ ಹಿಂದೆ ಯಾರೇ ಇದ್ದರೂ ಅವರನ್ನು ತನಿಖೆಗೆ ಒಳಪಡಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಈ ದಿಕ್ಕಿನಲ್ಲಿ ಕಾನೂನು ಹೋರಾಟ ಮುಂದುವರಿಸಲಿದ್ದೇವೆ” ಎಂದು ಹೇಳಿದ್ದಾರೆ.

Related posts

ದ ಕ ಜಿಲ್ಲಾ ಗೊಲ್ಲ (ಯಾದವ )ಸಂಘ ಬೆಳ್ತಂಗಡಿ ವಲಯದ ವತಿಯಿಂದ ಮನಿಷಾರಿಗೆ ಸನ್ಮಾನ

Suddi Udaya

ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮ

Suddi Udaya

ದ.ಕ.ಜಿಲ್ಲಾ ಗೊಲ್ಲ(ಯಾದವ)ಸಮಾಜ ಸೇವಾ ಸಂಘದ ವತಿಯಿಂದ ಅಶ್ವತ್ ಎಸ್ ರವರಿಗೆ ಸನ್ಮಾನ

Suddi Udaya

ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನಗೈದ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್

Suddi Udaya

ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಂದ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ ದಾಖಲಿಸಲು ಅರ್ಜಿ ಆಹ್ವಾನ

Suddi Udaya

ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾಗಿ ಅಭಿ ಅರಿಗಾ ನೇಮಕ

Suddi Udaya
error: Content is protected !!