ಬೆಳ್ತಂಗಡಿ: ಅಳದಂಗಡಿ ವಲಯದ ಬಡಗಕಾರಂದೂರು ಕಾರ್ಯಕ್ಷೇತ್ರದ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರವು ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ರಾಜೀವಿ ಆಚಾರ್ಯ ರವರು ವಹಿಸಿದ್ದರು. ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ತಾಲೂಕು ಯೋಜನಾಧಿಕಾರಿ ಹರೀಶ್ ರವರು ಕೇಂದ್ರದ ದಾಖಲಾತಿಯ ಹಸ್ತಾಂತರ ಮಾಡಿ ಜ್ಞಾನವಿಕಾಸದ ಉದ್ದೇಶ, ಜ್ಞಾನ ವಿಕಾಸದಿಂದ ಮಹಿಳೆಯರು ಹಾಗೂ ಕುಟುಂಬದಲ್ಲಿ ಆಗುವ ಬದಲಾವಣೆ, ಕೇಂದ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರುಡ್ ಸೆಟ್ ಉಪನ್ಯಾಸಕರಾದ ಜೇಮ್ಸ್ ಅಬ್ರಾಮ್, ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಸದಾನಂದ ಉಂಗಿಲಬೈಲು, ಒಕ್ಕೂಟದ ಅಧ್ಯಕ್ಷರಾದ ಹರೀಶ್ ಸಾಲಿಯಾನ್, ಆಶಾ ಹರೀಶ್ ಹಾಗೂ ಹಿರಿಯರಾದ ಬೇಬಿ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ರವಿಕಲಾ ಶೆಟ್ಟಿ, ಸೇವಾ ಪ್ರತಿನಿಧಿ ಶುಭ ಹರೀಶ್ ರೈ, ಪೂರ್ಣಿಮಾ ಪ್ರಮೋದ್ ದೇವಾಡಿಗ, ನೂತನ ಸಂಯೋಜಕಿ ರೂಪ ವಿಶ್ವನಾಥ್, ಒಕ್ಕೂಟದ ಪದಾಧಿಕಾರಿಗಳು ಹಾಗೂ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.













