November 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆಪ್ರಮುಖ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ನ.6: ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ-ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ, ಪಿಲಿಗೂಡು ನಿಂದ ಉಪ್ಪಿನಂಗಡಿ ತನಕದ ರಸ್ತೆಯು ವಾಹನ ಸಂಚಾರಕ್ಕೆ ಸಾಧ್ಯವಾದಷ್ಟು ಹದಗೆಟ್ಟಿದ್ದು, ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನಾಗರಿಕರು, ವಾಹನ ಸವಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕಾರ್ಮಿಕರು, ರೋಗಿಗಳು, ಸಾರ್ವಜನಿಕರು ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯೂ ಇಲ್ಲದೆ ಕಂಗಾಲಾಗಿದ್ದು, ಈ ನಿಟ್ಟಿನಲ್ಲಿ ನಾಗರಿಕ ಹೋರಾಟ ಸಮಿತಿ ರಚಿಸಿದ್ದು, ಶೀಘ್ರವಾಗಿ ಸಂಪೂರ್ಣ ಡಾಮರೀಕರಣದ ರಸ್ತೆ ನಿರ್ಮಾಣಕ್ಕೆ, ಜನಪ್ರತಿನಿಧಿಗಳು, ಸರಕಾರವನ್ನು ಒತ್ತಾಯಿಸಲು, ನ.6 ರಂದು ಅಪರಾಹ್ನ 3 ರಿಂದ 5 ರ ತನಕ ಕಲ್ಲೇರಿ ಜಂಕ್ಷನ್ ನಲ್ಲಿ, ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಅಬ್ಬಾಸ್‌ ಬಟ್ಲಡ್ಕ ತಿಳಿಸಿದ್ದಾರೆ.

ಅವರು ನ.4ರಂದು ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ಮೂರು ವರ್ಷಗಳಿಂದ ಮುಖ್ಯ ಮಂತ್ರಿಗಳು, ಲೋಕೋಪಯೋಗಿ ಸಚಿವರು, ಉಸ್ತುವಾರಿ ಸಚಿವರು, ಶಾಸಕರು ಸಹಿತ ಹಲವು ಜನಪ್ರತಿನಿಧಿಗಳನ್ನು ಭೇಟಿ ಮಾಡಿದರೂ, ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಕಾಣಲಿಲ್ಲ. ಇಲಾಖೆಯೆ ಹಲವು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗಲೆಲ್ಲಾ ಭೇಟಿ ನೀಡಿ ಸರಕಾರದ ಗಮನಕ್ಕೆ ತರುತ್ತೇವೆ ಎಂಬ ಭರವಸೆ ನೀಡುತ್ತಾರೆಯೇ ಹೊರತು ಅವರಿಂದಲೂ ಯಶಸ್ಸು ಕಾಣಲಿಲ್ಲ.

ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಚೀಫ್ ಇಂಜಿನಿಯ‌ರ್ ರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ನಿರ್ಣಾಯಕ ಮನವಿ ಮಾಡಲಾಗಿತ್ತು. ಶೀಘ್ರವಾಗಿ ಪರಿಹಾರದ ಭರವಸೆಯೊಂದಿಗೆ, ಮರು ದಿನವೇ ಉನ್ನತ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕೊಟ್ಟು ಪರಿಶೀಲನ ಮಾಡಿದ್ದಾರೆ. ಸಂಪೂರ್ಣ ಮರು ಡಾಮರೀಕರಣ ಮಾಡದೆ ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ಸರಕಾರಕ್ಕೆ ನಾವು ಎಚ್ಚರಿಕೆಯನ್ನು ನೀಡುತ್ತಿದ್ದೇವೆ.

ಜಾತಿ ಧರ್ಮ ಪಕ್ಷ ಭೇದವಿಲ್ಲದೆ ಸರ್ವ ನಾಗರಿಕರನ್ನು ಖುದ್ದಾಗಿ ಭೇಟಿ ನೀಡಿ ಈ ಪ್ರತಿಭಟನೆಗೆ ನಾಗರಿಕ ಹೋರಾಟ ಸಮಿತಿ ನಾಯಕರು ಆಹ್ವಾನಿಸುತ್ತಿದ್ದು, ನೂರಾರು ಸಾರ್ವಜನಿಕರು ಭಾಗವಹಿಸಿ ಸಹಕರಿಸುವ ನಿರೀಕ್ಷೆ ಇದೆ. ನವೆಂಬರ್ 6 ರ ಪ್ರತಿಭಟನೆ ಬಳಿಕವೂ ಮುಂದಿನ ಪ್ರತಿಭಟನೆಯ ಸ್ವರೂಪವನ್ನು ಶುಕ್ರವಾರ ಸಮಾವೇಶದಲ್ಲಿ ತಿಳಿಸಲಾಗುವುದು. ಈ ನಿಟ್ಟಿನಲ್ಲಿ ಗುರುವಾಯನಕೆರೆ – ಉಪ್ಪಿನಂಗಡಿ ಪರಿಸರದ ಸರ್ವ ನಾಗರಿಕರು ಜಾತಿ ಧರ್ಮ ಪಕ್ಷ ಭೇದವಿಲ್ಲದೆ ನೂರಾರು ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ನಾಗರಿಕ ಹೋರಾಟ ಸಮಿತಿ ಮನವಿ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಬಟ್ಲಡ್ಕ, ಪ್ರಧಾನ ಕಾರ್ಯದರ್ಶಿ ಎನ್.ಎಂ ಶರೀಫ್ ಸಖಾಫಿ ನೆಕ್ಕಿಲ್, ಕೋಶಾಧಿಕಾರಿ ಬಿ ಎಂ ಉಸ್ಮಾನ್ ಹಾಜಿ ಅಳಕೆ, ಉಪಾಧ್ಯಕ್ಷ ಅಬ್ದುರಹ್ಮಾನ್ ಬಂಡಸಾಲೆ, ಬಸ್‌ ನೌಕರರ ಸಂಘದ ಉಪಾಧ್ಯಕ್ಷ ಪ್ರಸಾದ್, ಮಹಮ್ಮದ್ ಗೋವಿಂದೂರು, ಮೊದಲಾದವರು ಉಪಸ್ಥಿತರಿದ್ದರು.

Related posts

ಬಾರ್ಯದ ಯೋಗ ಪ್ರತಿಭೆ ವಿಕಾಸ್‌ರಿಗೆ ಶಾಸಕ ಹರೀಶ್ ಪೂಂಜರಿಂದ ಸನ್ಮಾನ

Suddi Udaya

ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಧರ್ಮಸ್ಥಳದ ಡಾ.ಚಿರನ್ವಿ ಜೈನ್ ಗೆ ಪದವಿ

Suddi Udaya

ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

Suddi Udaya

ಪುದುವೆಟ್ಟು: ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣೆ

Suddi Udaya

ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ : ದಾನಿಗಳಿಗೆ ಗೌರವಾರ್ಪಣೆ

Suddi Udaya

ಸ್ಪೀಚ್ ಕ್ರಾಪ್ಟ್ ತರಬೇತಿಯಲ್ಲಿ ಚಂದ್ರಹಾಸ ಬಳಂಜರವರಿಗೆ ಪ್ರಶಸ್ತಿ

Suddi Udaya
error: Content is protected !!