November 4, 2026
ತಾಲೂಕು ಸುದ್ದಿವರದಿ

ಸುದ್ದಿ ಉದಯ ದೀಪಾವಳಿ ವಿಶೇಷಾಂಕ-2026 ಮಾರುಕಟ್ಟೆಗೆ ಬಿಡುಗಡೆ-ಜನರ ದ್ವನಿಯಾಗಿ ಸುದ್ದಿ ಉದಯದ ಕಾರ್ಯ ಶ್ಲಾಘನೀಯ: ಕೆ. ಮೋಹನ್ ಕುಮಾರ್

ಉಜಿರೆ: ತಾಲೂಕಿನ ಜನಪ್ರಿಯ ವಾರಪತ್ರಿಕೆ ‘ಸುದ್ದಿ ಉದಯ’ದ ದೀಪಾವಳಿ ವಿಶೇಷಾಂಕ–2026 ಪುಸ್ತಕವನ್ನು ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ಲಕ್ಷ್ಮೀ ಇಂಡಸ್ಟ್ರೀಸ್‌ನ ಕನಸಿನ ಮನೆ ಮಾಲಕರಾದ ಕೆ. ಮೋಹನ್ ಕುಮಾರ್ ಅವರು ನ.2ರಂದು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಕೇವಲ ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡ ಸುದ್ದಿ ಉದಯ ಪತ್ರಿಕೆ ಅಲ್ಪಾವಧಿಯಲ್ಲೇ ಜನರ ವಿಶ್ವಾಸ ಗಳಿಸಿ ಮನೆಮಾತಾಗಿದೆ. ಜನಪರ ಕಾಳಜಿ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಉತ್ತಮ ಸುದ್ದಿಗಳ ಮೂಲಕ ಪತ್ರಿಕೆ ತನ್ನದೇ ಆದ ಓದುಗರ ಬಳಗವನ್ನು ರೂಪಿಸಿಕೊಂಡಿದೆ. ಗ್ರಾಮೀಣ ಭಾಗದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಪ್ರಯತ್ನ ಶ್ಲಾಘನೀಯ ಎಂದರು.

ಸುದ್ದಿ ಉದಯದ ದೀಪಾವಳಿ ವಿಶೇಷಾಂಕ ಅತ್ಯಂತ ಸುಂದರವಾಗಿ ಹಾಗೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಈ ವಿಶೇಷಾಂಕದ ಪುಟಗಳನ್ನು ತಿರುವಿ ಹಾಕುವಾಗ ಇಡೀ ಬೆಳ್ತಂಗಡಿ ತಾಲೂಕನ್ನು ಸುತ್ತಿ ಬಂದ ಅನುಭವವಾಗುತ್ತದೆ. ತಾಲೂಕಿನ ವೈವಿಧ್ಯಮಯ ಕ್ಷೇತ್ರಗಳ ಸಾಧನೆ, ವಿಶೇಷತೆಗಳು ಹಾಗೂ ಸ್ಥಳೀಯ ಬದುಕಿನ ಚಿತ್ರಣವನ್ನು ಒಂದೇ ಪುಸ್ತಕದಲ್ಲಿ ಕಟ್ಟಿಕೊಟ್ಟಿರುವುದು ವಿಶೇಷ. ಇಂತಹ ಮೌಲಿಕ ಪ್ರಯತ್ನಗಳಿಗೆ ಓದುಗರ ಪ್ರೋತ್ಸಾಹ ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬರೂ ದೀಪಾವಳಿ ವಿಶೇಷಾಂಕವನ್ನು ಖರೀದಿಸಿ ಪತ್ರಿಕೆಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್. ಕುಲಾಲ್, ವ್ಯವಸ್ಥಾಪಕ ನಿರ್ದೇಶಕ ತುಕರಾಮ್ ಬಿ., ಉಪಸಂಪಾದಕ ಹಾಗೂ ಜಾಹೀರಾತು ವಿಭಾಗದ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಕಚೇರಿ ವ್ಯವಸ್ಥಾಪಕ ತಿಮ್ಮಪ್ಪ ಗೌಡ, ದೀಪಾವಳಿ ವಿಶೇಷಾಂಕದ ಕಾರ್ಯನಿರ್ವಾಹಕ ಸಂಪಾದಕ ಸುಧೀತ್ ಉಜಿರೆ ಹಾಗೂ ವಿನ್ಯಾಸಕಾರ ಇರ್ಫಾನ್ ಉಜಿರೆ ಉಪಸ್ಥಿತರಿದ್ದರು.

Related posts

ಮಾಚಾರು: ಕೋರ್ಯಾರು ನಿವಾಸಿ ಜಯಗೌಡ ನಿಧನ

Suddi Udaya

ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಸಮಿತಿಯ ನೂತನ ಅಧ್ಯಕ್ಷರಾಗಿ ಸುದರ್ಶನ್ ಶೆಟ್ಟಿ ನೇಮಕ

Suddi Udaya

ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಬೆಳ್ತಂಗಡಿ : ಸಂತ ತೆರೇಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ವತಿಯಿಂದ ನಡ ಸ.ಹಿ.ಪ್ರಾ.ಶಾಲೆಗೆ ಶುದ್ಧ ಕುಡಿಯುವ ನೀರಿನ ಯಂತ್ರ ಹಸ್ತಾಂತರ

Suddi Udaya

ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾದ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಿದ ಶಾಸಕ ಹರೀಶ್ ಪೂಂಜ: ಬೋರ್‌ವೆಲ್ ಸೌಲಭ್ಯವನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೊಸ ಚೈತನ್ಯ

Suddi Udaya
error: Content is protected !!