November 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಶ್ರೀಮತಿ ಮಮತಾ ಚಂದ್ರಶೇಖರ್ ಜಾರೋಡಿ ಕುತ್ಲೂರಿನಲ್ಲಿ ನಿರ್ಮಿಸಿರುವ ನೂತನ ಕಾಮದೇನು ಡೈರಿ ಫಾರ್ಮ್: ಹರೀಶ್ ಪೂಂಜರಿಂದ ಡೈರಿ ಉದ್ಘಾಟನೆ, ಲೋಗೋ ಬಿಡುಗಡೆ

ನಾರಾವಿ: ಸ್ವಾವಲಂಬನೆಯ ಬದುಕು ಕಟ್ಟುವ ಮೂಲಕ ಯುವ ಜನತೆಗೆ ,ಪ್ರೇರಣೆಯಾಗುವ ನಿಟ್ಟಿನಲ್ಲಿ ಶ್ರೀಮತಿ ಮಮತಾ ಚಂದ್ರಶೇಖರ್ ಜಾರೋಡಿ ಇವರು ಕುತ್ಲೂರಿನಲ್ಲಿ ನಿರ್ಮಿಸಿರುವ ನೂತನ ಕಾಮದೇನು ಡೈರಿ ಫಾರ್ಮ್ ಇದರ ಉದ್ಘಾಟನಾ ಸಮಾರಂಭವು ನ.6ರಂದು ಜರುಗಿತು.

ಕಾಮದೇನು ಡೈರಿ ಫಾರ್ಮ್ ನ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೆರವೇರಿಸಿ ಶುಭ ಕೋರಿದರು.ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಕೆ‌.ಪ್ರತಾಪಸಿಂಹ ನಾಯಕ್ ಉದ್ಘಾಟಿಸಿ ಶುಭ ಕೋರಿದರು ‌ಮುಖ್ಯ ಅತಿಥಿಗಳಾಗಿ ಪತ್ರಕರ್ತರು, ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಮಾಜಿ ಸಚಿವರು,ಮಾಜಿ ಸಚಿವ ಎಸ್. ಅಂಗಾರ ಸುಳ್ಯ,ಕ್ವಾರೆ ಮತ್ತು ಕ್ರಷರ್ ಅಸೋಸಿಯೇಷನ್ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಡಿ.ವೈ.ಎಸ್.ಪಿ ರೋಹಿಣಿ ಸಿಕೆ, ಉದ್ಯಮಿ ವಸಂತ ಭಟ್ ನಾರಾವಿ,ಬಿಜೆಪಿ ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಪ್ರಗತಿಪರ ಕೃಷಿಕ ಅಂಕರ್ಜಾಲ್ ಶ್ರೀನಿವಾಸ್ ಶೆಟ್ಟಿ,ನಾರಾವಿ ಸೊಸೈಟಿ ಅಧ್ಯಕ್ಷ ಸುಧಾಕರ ಭಂಡಾರಿ,ಸರಸ್ವತಿ,ರತ್ನಮ್ಮ, ಭಾಗವಹಿಸಿದರು.

ಈ ಸಂದರ್ಭದಲ್ಲಿ ಕಾಮಧೇನು ಡೈರಿ ಪಾರ್ಮ್ ನ ನೂತನ ಲೋಗೋ ಬಿಡುಗಡೆ ನಡೆಯಿತು.ಸಮಾರಂಭದಲ್ಲಿ ಶಾಸಕ ಪೂಂಜ,ಮಾಜಿ ಎಂಎಲ್ಸಿ ಕೆ‌.ಪ್ರತಾಪಸಿಂಹ ನಾಯಕ್ ಅವರನ್ನು ಗೌರವಯುತವಾಗಿ ಸನ್ಮಾನಿಸಲಾಯಿತು. ಬಳಿಕ ಡೈರಿ ಫಾರ್ಮ್ ನ ಕೆಲಸ ನಿರ್ವಹಿಸಿದ ಜಯರಾಜ್ ಶೆಟ್ಟಿ ಹಾಗೂ ಪ್ರಶಾಂತ್ ಆಚಾರ್ಯ ಅವರುಗಳನ್ನು ಗಣ್ಯರು ಸನ್ಮಾನಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿ ವಂದಿಸಿದರು. ಅಶೋಕ್ ಎಂ.ಕೆ ಸ್ವಾಗತಿಸಿದರು.

ಶ್ರೀಮತಿ ಮಮತಾ ಚಂದ್ರಶೇಖರ್ ಜಾರೋಡಿ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ,ಸತ್ಕರಿಸಿದರು.ನೂರಾರು ಹೈನುಗಾರರು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿದರು.

Related posts

ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಅಯೋಧ್ಯೆಯ ಭರತಕುಂಡ ಭೇಟಿ

Suddi Udaya

ಕನ್ಯಾಡಿ -I : ಮೇರ್‍ಲ ನಿವಾಸಿ ಕೃಷಿಕ ಸಾಂತಪ್ಪ ಗೌಡ ನಿಧನ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವರ ಪ್ರತಿಷ್ಠಾಷ್ಟಬಂಧ ಬಹ್ಮಕಲಶೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25 ಕ್ವಿಂಟಾಲ್ ಅಕ್ಕಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಸುಲ್ಕೇರಿ ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಮಿತಿಯ ಮಾಸಿಕ ಸಭೆ

Suddi Udaya

ನಾಳ ಸಮೀಪದ ಗದ್ದೆಯ ಪಾಲು ಬಾವಿಗೆ ಬಿದ್ದ ಅಡಿಕೆ ಸಾಗಾಟದ ಪಿಕಪ್

Suddi Udaya

ರಾಜ್ಯಮಟ್ಟದ ರಸಪ್ರಶ್ನೆ: ಇಳಂತಿಲದ ಅಂಕಿತಾ ಎ ಪ್ರಥಮ

Suddi Udaya
error: Content is protected !!