November 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ನೊಂದ ಕುಟುಂಬಕ್ಕೆ ನೆರಳಾದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಮಚ್ಚಿನ ಗ್ರಾಮದ ಕುತ್ತಿನ ಡಾಕಯ್ಯ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜರು ನೆರವು ನೀಡಿ ನೊಂದ ಕುಟುಂಬಕ್ಕೆ ನೆರಳಾಗಿದ್ದಾರೆ.

ಊರಿನ ಸಹೃದಯಿ ಬಂಧುಗಳು ನಿರ್ಮಾಣ ಹಂತದಲ್ಲಿದ್ದ ಡಾಕಯ್ಯ ಗೌಡರ ಮನೆಯನ್ನು ಊರವರ ಸಹಕಾರದೊಂದಿಗೆ ನಿರ್ಮಿಸಿಕೊಡಲು ಮುಂದಾಗಿದ್ದು ಅದಕ್ಕೆ ಶಾಸಕರೂ ತಮ್ಮ ಸಹಾಯ ಹಸ್ತ ಚಾಚಿದ್ದು ಕುಟುಂಬಕ್ಕೆ ಆಸರೆಯಾಗಿದ್ದಾರೆ.

ಮಚ್ಚಿನ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಮಾಣೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಕುಲಾಲ್, ವಿಶ್ವಹಿಂದೂ ಪರಿಷತ್ ಭಜರಂಗದಳ ಬೆಳ್ತಂಗಡಿ ಪ್ರಖಂಡದ ಸಂಯೋಜಕ ಪ್ರಭಾಕರ ಮುದಲಡ್ಕ, ಮಚ್ಚಿನ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಶೆಟ್ಟಿ ನೆತ್ತರ, ಗ್ರಾಮದ ಪ್ರಮುಖರಾದ ವಸಂತ ಮರಕಡ, ಶ್ಯಾಮ ಸುಂದರ್ ಭಟ್, ಹರೀಶ್ ಪ್ರಭು ಕುತ್ತಿನ, ಕೃಷ್ಣ ಭಟ್ ಮಾಣೂರು, ಸಂದೀಪ್ ಮಾಣೂರು ಹಾಗೂ ಮೃತ ಡಾಕಯ್ಯ ಗೌಡರ ಪತ್ನಿ ಮತ್ತು ಮಕ್ಕಳು ಶಾಸಕರನ್ನು ಭೇಟಿಯಾಗಿದ್ದರು.

Related posts

ಕಲ್ಮಂಜ: ಸಿದ್ದಬೈಲು ಪರಾರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚನೆ

Suddi Udaya

ಮಡಂತ್ಯಾರು : ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ-ಶ್ರೀಮತಿ ಸರೋಜ ಶೆಟ್ಟಿ ದಂಪತಿಯ 25ನೇ ವರ್ಷದ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

Suddi Udaya

ಚಿರಂಜೀವಿ ಶೆಟ್ಟಿ ನಾಳ ನಿರ್ಮಾಣದ ‘ಮೃತ್ಯುಂಜಯ’ ಮೈರಲ್ಕೆ ಶ್ರೀ ಕಿರಾತಮೂರ್ತಿ ದೇವಸ್ಥಾನದ ಭಕ್ತಿ ಗೀತೆ ಬಿಡುಗಡೆ

Suddi Udaya

ಸಂಕಷ್ಟದಲ್ಲಿರುವ ಹೆಂಚು ಉದ್ಯಮ ಸೂಕ್ತ ಪರಿಹಾರ ಕ್ರಮಕ್ಕಾಗಿ ಪರಿಷತ್ ನಲ್ಲಿ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಮುಂಡಾಜೆ ಪ. ಪೂ. ಕಾಲೇಜಿನಲ್ಲಿ ಪೋಷಕರ ಸಭೆ

Suddi Udaya
error: Content is protected !!