ಬೆಳ್ತಂಗಡಿ: ಪೆರೋಡಿತ್ತಾಯ ಕಟ್ಟೆ ಸರಕಾರಿ ಉನ್ನತಿಕರಿಸಿದ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷೆ ಸುಮಲತಾ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಚೇತನಾಕ್ಷಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಸುಲೈಮಾನ್ ಕಟ್ಟೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನೇಸರ, ಸಂಘದ ಉಪಾಧ್ಯಕ್ಷ ಶಮ್ಸುದ್ದೀನ್ ಕಟ್ಟೆ, ಶಿಕ್ಷಕರಾದ ಚೌಹಾಣ್, ರಂಗಸ್ವಾಮಿ ಪೇರೋಡಿತ್ತಾಯ ಕಟ್ಟೆ ಶಾಲೆಯ ನಿಕಟ ಪೂರ್ವ ಮುಖ್ಯೋಪಾಧ್ಯಾಯ ಸೂರ್ಯನಾರಾಯಣ ಭಟ್, ಶಾಲಾ ಮುಖ್ಯೋಪಾಧ್ಯಾಯನಿ ಬೆನಿಡಿಕ್ಟ್, ಮುಖ್ಯ ಶಿಕ್ಷಕಿ, ಜ್ಯೋತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರಂಬಾರು ಹಾಗೂ ಬಳಂಜ ಶಾಲೆಯಿಂದ ಪದನ್ನೋತಿಗೊಂಡ ಶಿಕ್ಷಕರಾದ ಚೌಹಾನ್ ಹಾಗೂ ರಂಗಸ್ವಾಮಿ ಇವರನ್ನು ಶಾಲಾಭಿವೃದ್ಧಿ ಸಮಿತಿಯಿಂದ ಗೌರವಿಸಲಾಯಿತು.
ಶಾಲಾ ಸಹ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಬಿಸಿಯೂಟ ಕಾರ್ಯಕರ್ತೆಯರು, ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶೆರಿಪ್ ಮಂಜೊಟ್ಟಿ, ಸದಸ್ಯರಾದ ವಿಠಲ, ಸಿರಾಜ್ ಶಾಲಾಭಿಮಾನಿಗಳು, 8 ವಲಯಗಳ ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು.















