ವೇಣೂರು: ಪಡ್ಡಂದಡ್ಕ ಕೆದ್ಯೊಟ್ಟು ನಿವಾಸಿ ರಾಜೇಶ್ ಪೂಜಾರಿಯವರ ಪತ್ನಿ ಪೂರ್ಣಿಮಾ ರವರು ಹೃದಯಾಘಾತದಿಂದ ನ.3ರಂದು ನಿಧನರಾದರು.
ನ.3ರಂದು ಬೆಳಿಗ್ಗೆ ಪೂರ್ಣಿಮಾ ಅವರಿಗೆ ತಲೆನೋವು ಕಾಣಿಸಿಕೊಂಡಿತ್ತು. ಎಂದಿನಂತೆ ಬೆಳಿಗ್ಗೆ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿ, ತಲೆನೋವು ಹೆಚ್ಚಾಗಿದ್ದರಿಂದ ಚಿಕಿತ್ಸೆಗಾಗಿ ಕ್ಲಿನಿಕ್‌ಗೆ ತೆರಳಲು ಆಟೋ ರಿಕ್ಷಾವೊಂದನ್ನು ಗೊತ್ತು ಮಾಡಿದ್ದರು. ಆಟೋ ರಿಕ್ಷಾದ ಪ್ರಯಾಣದ ಮಧ್ಯೆ ತಲೆನೋವಿನೊಂದಿಗೆ ಹಠಾತ್ತಾಗಿ ತೀವ್ರ ಸ್ವರೂಪದ ಎದೆನೋವು ಕಾಣಿಸಿಕೊಂಡಿದ್ದು, ಮಾರ್ಗಮಧ್ಯದಲ್ಲೇ ಪೂರ್ಣಿಮಾ ರವರು ಮೃತಪಟ್ಟಿದ್ದಾರೆ.
ಪೂರ್ಣಿಮಾ ಅವರ ಪತಿ ರಾಜೇಶ್ ಪೂಜಾರಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇಬ್ಬರು ಪುತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.















