November 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪೆರೋಡಿತ್ತಾಯಕಟ್ಟೆ ಸ.ಉ. ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಬೆಳ್ತಂಗಡಿ: ಪೆರೋಡಿತ್ತಾಯ ಕಟ್ಟೆ ಸರಕಾರಿ ಉನ್ನತಿಕರಿಸಿದ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷೆ ಸುಮಲತಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಚೇತನಾಕ್ಷಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಸುಲೈಮಾನ್ ಕಟ್ಟೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನೇಸರ, ಸಂಘದ ಉಪಾಧ್ಯಕ್ಷ ಶಮ್ಸುದ್ದೀನ್ ಕಟ್ಟೆ, ಶಿಕ್ಷಕರಾದ ಚೌಹಾಣ್, ರಂಗಸ್ವಾಮಿ ಪೇರೋಡಿತ್ತಾಯ ಕಟ್ಟೆ ಶಾಲೆಯ ನಿಕಟ ಪೂರ್ವ ಮುಖ್ಯೋಪಾಧ್ಯಾಯ ಸೂರ್ಯನಾರಾಯಣ ಭಟ್, ಶಾಲಾ ಮುಖ್ಯೋಪಾಧ್ಯಾಯನಿ ಬೆನಿಡಿಕ್ಟ್, ಮುಖ್ಯ ಶಿಕ್ಷಕಿ, ಜ್ಯೋತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರಂಬಾರು ಹಾಗೂ ಬಳಂಜ ಶಾಲೆಯಿಂದ ಪದನ್ನೋತಿಗೊಂಡ ಶಿಕ್ಷಕರಾದ ಚೌಹಾನ್ ಹಾಗೂ ರಂಗಸ್ವಾಮಿ ಇವರನ್ನು ಶಾಲಾಭಿವೃದ್ಧಿ ಸಮಿತಿಯಿಂದ ಗೌರವಿಸಲಾಯಿತು.

ಶಾಲಾ ಸಹ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಬಿಸಿಯೂಟ ಕಾರ್ಯಕರ್ತೆಯರು, ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶೆರಿಪ್ ಮಂಜೊಟ್ಟಿ, ಸದಸ್ಯರಾದ ವಿಠಲ, ಸಿರಾಜ್ ಶಾಲಾಭಿಮಾನಿಗಳು, 8 ವಲಯಗಳ ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು.

Related posts

ಸೌತಡ್ಕ ಬಯಲು ಗಣಪನಿಗೆ ವಾರ್ಷಿಕ ಮೂಡಪ್ಪ ಸೇವೆಯ ಸಂಭ್ರಮ   

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಯುವನಿಧಿ ನೊಂದಣಿ ಶಿಬಿರ

Suddi Udaya

ಧರ್ಮಸ್ಥಳ ನೇರ್ತನೆ ರಸ್ತೆ; ಸ್ಥಳೀಯರಿಂದ ಶ್ರಮದಾನದ ಮೂಲಕ ದುರಸ್ತಿ

Suddi Udaya

ಬದುಕಿನ ಭವಿಷ್ಯದ ಕಠಿಣ ಹಾದಿಯ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿಸಬೇಕು: ಯಾಕೂಬ್ ಎಸ್ ಕೊಯ್ಯೂರು

Suddi Udaya

ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ‘ಅಭಯೋದ ಸಿರಿ ಅಪ್ಪೆ ರಕ್ತೇಶ್ವರಿ’ ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ದ.ಕ. ಜಿಲ್ಲಾ ತುಳು ಪರಿಷತ್ ನ ಉಪಾಧ್ಯಕ್ಷರಾಗಿ ಧರಣೇಂದ್ರ ಕುಮಾರ್, ಸದಸ್ಯರಾಗಿ ಇಸ್ಮಾಯಿಲ್ ಕೆ. ಆಯ್ಕೆ

Suddi Udaya
error: Content is protected !!