November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆ

ಧರ್ಮಸ್ಥಳ: ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲೆಯ ಫ್ಲಾಕ್ ಲೀಡರ್ ದಿವ್ಯ ಸಂಸ್ಥಾಪಕರ ದಿನದ ಮಹತ್ವ ಹಾಗೂ ಉದ್ದೇಶದ ಕುರಿತು ವಿವರಿಸಿ ಸ್ವಾಗತಿಸಿದರು.
ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲೆಯ ಕಬ್ ದಳದ ವಿದ್ಯಾರ್ಥಿಗಳು ನೆರವೇರಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ. ಸಾಂಕೇತಿಕವಾಗಿ ಧ್ವಜ ಚೀಟಿಯನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಧ್ವಜ ಚೀಟಿ ಅಭಿಯಾನಕ್ಕೆ ಚಾಲನೆ ನೀಡಿದರು.

ಹೊಸದಾಗಿ ಕಬ್ ದಳಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಪ್ರವೇಶ ಬ್ಯಾಡ್ಜ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ ಮತ್ತು ಬುಲ್‌ಬುಲ್‌ಗಳ ಪ್ರತಿಜ್ಞೆ, ನಿಯಮಗಳು ಹಾಗೂ ಗುರಿಗಳನ್ನು ವಿದ್ಯಾರ್ಥಿಗಳಿಂದ ಹೇಳಿಸಲಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಶಾಲೆಯ ಸ್ಕೌಟ್ ಮಾಸ್ಟರ್‌ಗಳಾದ ಶಶಿಕಲಾ ಎಂ., ಜ್ಯೋತಿಲಕ್ಷ್ಮಿ ಎ.ವಿ., ಗೈಡ್ ಕ್ಯಾಪ್ಟನ್‌ಗಳಾದ ಗೀತಾ ಕೆ., ದೀಕ್ಷಾ, ಕಬ್ ಮಾಸ್ಟರ್‌ಗಳಾದ ಅಮೃತಾ ವಿ. ಶೆಟ್ಟಿ, ಕಾದಂಬರಿ ಸಂದೀಪ್, ಹೇಮಾವತಿ ಜೈನ್ ಹಾಗೂ ಫ್ಲಾಕ್ ಲೀಡರ್‌ಗಳಾದ ಸೌಮ್ಯ ಎಂ., ಪದ್ಮಶ್ರೀ ಮತ್ತು ದಿವ್ಯ ಸಹಕರಿಸಿದರು.

Related posts

ಸ್ಪಂದನಾ ಸೇವಾ ಸಂಘದ 116ನೇ ಸೇವಾ ಯೋಜನೆಯ ಧನಸಹಾಯ ವಿತರಣೆ

Suddi Udaya

ಉಜಿರೆ: ಎಸ್.ಡಿ.ಎಂ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದಿಂದ “ಗ್ರಂಥಾಲಯದ ಪ್ರಾಮುಖ್ಯತೆ” ವಿಶೇಷ ಕಾರ್ಯಕ್ರಮ

Suddi Udaya

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ನಾವೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶಿಶಿಲ : ಮುಚ್ಚಿರಡ್ಕ ಜಯಂತ್ ನಾಯ್ಕ್ ರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

Suddi Udaya
error: Content is protected !!