November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ನ.8ರಂದು ಲಕ್ಷ್ಮೀ ಇಂಡಸ್ಟ್ರೀಸ್‌ ಕನಸಿನ ಮನೆ ಉಜಿರೆಯಲ್ಲಿ ನೂತನ ಉತ್ಪನ್ನಗಳ ಲೋಕಾರ್ಪಣೆ

ಉಜಿರೆ: ರಾಜ್ಯದಾದ್ಯಂತ ಮನೆ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಗಳಿಸಿರುವ ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಯ ನೂತನ ಉತ್ಪನ್ನಗಳ ಲೋಕಾರ್ಪಣಾ ಸಮಾರಂಭವು ನ. 8ರಂದು ಉಜಿರೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮಾಲಕ ಕೆ. ಮೋಹನ್ ಕುಮಾರ್ ತಿಳಿಸಿದ್ದಾರೆ.

ನೂತನ ಉತ್ಪನ್ನಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಲೋಕಾರ್ಪಣೆಗೊಳಿಸಲಿರುವರು.

ಮುಖ್ಯ ಅತಿಥಿಗಳಾಗಿ ಬರೋಡದ ಉದ್ಯಮಿ ಹಾಗೂ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ. ಲಿ. ಸಂಸ್ಥೆಯ ಶಶಿಧರ ಶೆಟ್ಟಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು. ಶರತ್‌ಕೃಷ್ಣ ಪಡುವೆಟ್ನಾಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ,ಎ.ಸಿ.ಸಿ.ಇ. ಬೆಳ್ತಂಗಡಿ ಸೆಂಟರ್ ಅಧ್ಯಕ್ಷ ಸುರೇಶ್ ಬಂಗೇರ ಭಾಗವಹಿಸಲಿರುವರು.

ಈ ಸಂದರ್ಭದಲ್ಲಿ ಲಕ್ಷ್ಮೀ ನಿಲಯ, ಉಜಿರೆಯ ಶ್ರೀಮತಿ ಲೀಲಾವತಿ ರಾಜು ಮೇಸ್ತ್ರಿ, ಸಂಸ್ಥೆಯ ಮಾಲಕ ಕೆ. ಮೋಹನ್ ಕುಮಾರ್, ಶ್ರೀಮತಿ ರೇಶ್ಮಾ ಮೋಹನ್ ಕುಮಾರ್, ಮೌಲ್ಯಲಕ್ಷ್ಮೀ, ಮಾನ್ವಿ ಲಕ್ಷ್ಮೀ ಹಾಗೂ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿರುವರು.

ನಿಮ್ಮ ಕನಸಿನ ಮನೆಗೆ ನಮ್ಮ ಸೌಂದರ್ಯದ ಸ್ಪರ್ಶ: ಮನೆ ನಿರ್ಮಾಣ ಕ್ಷೇತ್ರದಲ್ಲಿ ಗುಣಮಟ್ಟ, ಬಾಳಿಕೆ ಹಾಗೂ ಆಕರ್ಷಕ ವಿನ್ಯಾಸಕ್ಕೆ ಆದ್ಯತೆ ನೀಡುತ್ತಿರುವ ಲಕ್ಷ್ಮೀ ಇಂಡಸ್ಟ್ರೀಸ್‌ನ ನೂತನ ಉತ್ಪನ್ನಗಳು ಹಲವು ವಿಶೇಷತೆಗಳನ್ನು ಹೊಂದಿವೆ.

  • ನೀರಿನಿಂದ ಹಾನಿಯಾಗದ ಜಲನಿರೋಧಕ ಬಾಗಿಲುಗಳು.
  • ಗೆದ್ದಲುಗಳ ಬಾಧೆಯಿಂದ ಮುಕ್ತವಾದ ದೀರ್ಘಕಾಲ ಬಾಳಿಕೆ.
  • ಬಲಿಷ್ಠ ನಿರ್ಮಾಣ ಹಾಗೂ ಮನಮೋಹಕ ವಿನ್ಯಾಸ.
  • ಪರಿಸರ ಸ್ನೇಹಿ ಉತ್ಪನ್ನಗಳು.
  • ಆಕರ್ಷಕ ವಿನ್ಯಾಸದೊಂದಿಗೆ ಅತ್ಯುತ್ತಮ ಗುಣಮಟ್ಟ.

ನಮ್ಮ ಕನಸಿನ ಹೊಸ ಹೆಜ್ಜೆ – ‘ಲಕ್ಷ್ಮೀ ದ್ವಾರ’: ಮೋಹನ್ ಕುಮಾರ್

ನಮ್ಮ ಕನಸಿನ ಕೂಸಾದ ‘ಲಕ್ಷ್ಮೀ ಇಂಡಸ್ಟ್ರೀಸ್’ ಇಂದು ಹೊಸತನದ ಕನಸು, ಪರಿಸರ ಕಾಳಜಿ ಹಾಗೂ ಭವಿಷ್ಯದ ದೂರದೃಷ್ಟಿಯೊಂದಿಗೆ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡುತ್ತಿದೆ. ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಕೊಡುಗೆಯಾಗಿ ನೀಡಬೇಕು, ಮರ-ಗಿಡಗಳನ್ನು ಸಂರಕ್ಷಿಸಿ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸಬೇಕು ಎಂಬ ಉದಾತ್ತ ಆಶಯದೊಂದಿಗೆ ನೂತನ ಉತ್ಪನ್ನವೊಂದನ್ನು ಪರಿಚಯಿಸುತ್ತಿದ್ದೇವೆ.‘ಲಕ್ಷ್ಮೀ ದ್ವಾರ’ ಎಂಬ ಹೆಸರಿನೊಂದಿಗೆ ಪರಿಸರ ಸ್ನೇಹಿ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡಿರುವ ಈ ವಿನೂತನ ಉತ್ಪನ್ನವು ನಮ್ಮ ಸಂಸ್ಥೆಯ ಹೊಸ ಕನಸು ಹಾಗೂ ಹೊಸ ಪ್ರಯತ್ನದ ಪ್ರತೀಕವಾಗಿದೆ. ಗ್ರಾಹಕರ ಅಭಿರುಚಿ, ಗುಣಮಟ್ಟ ಮತ್ತು ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಈ ಉತ್ಪನ್ನವನ್ನು ರೂಪಿಸಲಾಗಿದೆ.ನ. 8ರಂದು ನಡೆಯಲಿರುವ ಈ ನೂತನ ಉತ್ಪನ್ನಗಳ ಅದ್ದೂರಿ ಲೋಕಾರ್ಪಣಾ ಸಮಾರಂಭಕ್ಕೆ ಗ್ರಾಹಕರು, ಹಿತೈಷಿಗಳು, ಬಂಧು-ಮಿತ್ರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮ್ಮ ಹೊಸ ಪ್ರಯತ್ನಕ್ಕೆ ಪ್ರೀತಿ, ಪ್ರೋತ್ಸಾಹ ಮತ್ತು ಆಶೀರ್ವಾದ ನೀಡಬೇಕೆಂದು ವಿನಂತಿಸುತ್ತೇನೆ ಎಂದು ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್ ತಿಳಿಸಿದರು.

Related posts

ಪಜಿರಡ್ಕ: ಓಂಕಾರೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ 14ನೇ ವರ್ಷದ ಗೋಕುಲಾಷ್ಟಮಿ ಕಾರ್ಯಕ್ರಮ

Suddi Udaya

ಉರುವಾಲು: ಶ್ರೀ ಭಾರತೀ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಆಕಸ್ಮಿಕ ಗ್ಯಾಸ್ ಸೋರಿಕೆ: ಸುಟ್ಟು ಕರಕಲಾದ ಅಡುಗೆ ಮನೆ

Suddi Udaya

ಕೆಎಂಜೆ ಉಜಿರೆ ಸರ್ಕಲ್ ಸಮಿತಿ ರಚನೆ

Suddi Udaya

ನಾರಾವಿ ಎನ್ ಎಸ್ ಎಸ್ ನಿಂದ ಸ್ವಚ್ಛತಾ ಜಾಥಾ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಮತದಾನದ ಜಾಗೃತಿ

Suddi Udaya
error: Content is protected !!