November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ.8: ಬೆಳ್ತಂಗಡಿ ಬಸ್‌ನಿಲ್ದಾಣದಲ್ಲಿ 7ನೇ ವರ್ಷದ ದೋಸೆ ಹಬ್ಬ

ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದಿಂದ ಶಾಸಕ ಹರೀಶ್ ಪೂಂಜನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 7ನೇ ವರ್ಷದ ದೀಪಾವಳಿ ದೋಸೆ ಹಬ್ಬ-2026 ಹಾಗೂ ಗೋಪೂಜಾ ಉತ್ಸವ ನ.8 ರಂದು ಬೆಳ್ತಂಗಡಿ ಬಸ್‌ನಿಲ್ಧಾಣದಲ್ಲಿ ನಡೆಯಲಿದೆ.

ಬೆಳಗ್ಗೆ 8ರಿಂದ ಪ್ರಜಾಪ್ರಭುತ್ವ ಉಳಿಸಿ ಆರಾಜಕತೆ ಅಳಿಸಿ ಮ್ಯಾರಥಾನ್ ಉದ್ಘಾಟನೆಯೊಂದಿಗೆ ಕಾರ್ಯಕ್ರಮದ ಆರಂಭಗೊಳ್ಳಲಿದೆ. ಜಿಲ್ಲಾ ಮಟ್ಟದ ಸಾಂಸ್ಕೃತಿಕ ತುಡರ್ ನೃತ್ಯ ಸ್ಪರ್ಧೆ, ಬೆಳ್ತಂಗಡಿ ತಾಲೂಕಿನ 3-7ವರ್ಷದೊಳಗಿನ ಮಕ್ಕಳಿಗೆ ಬಾಲೆ ಪಿಲಿ ಸ್ಪರ್ಧೆ, ಬೆಳ್ತಂಗಡಿ ತಾಲೂಕಿನವರಿಗಾಗಿ ರೀಲ್ಸ್ ಸ್ಪರ್ಧೆ, ಸಂಜೆ 9.15ಕ್ಕೆ ಸುಡು ಮದ್ದು ಪ್ರದರ್ಶನ, ಗೋ ಪೂಜಾ ಉತ್ಸವ ಬಳಿಕ ಯಾನ್ ಒರಿ ಬರೊಲಿಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಎಲ್ಲಾರು ಭಾಗವಹಿಸಿ
ಹಿಂದೂ ಸಂಸ್ಕೃತಿಯ ಸನಾತನಾ ಸಂಸ್ಕಾರವನ್ನು ಉಳಿಸುವ ಪ್ರಯತ್ನವನ್ನು ಭಾರತೀಯ ಜನಾತ ಪಾರ್ಟಿಯ ಯುವಮೋರ್ಚಾ ತಂಡ ದೀಪಾವಳಿ ಸುದಿನದಂದು ದೋಸೆಹಬ್ಬದ ಮೂಲಕ ನಡೆಸುತ್ತಿದೆ. ನಾನಾ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಜನತೆ ಭಾಗವಹಿಸಿ ದೋಸೆಯ ಸವಿ ರುಚಿಯನ್ನು ಸವಿದು ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು. ಹರೀಶ್ ಪೂಂಜ, ಶಾಸಕರು

Related posts

ಬೆಳ್ತಂಗಡಿ: ತುಳುನಾಡ ಪೋರ್ಲು ಸೇವಾ ಟ್ರಸ್ಟ್ ನಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ವಿಶ್ವ ಸೈಕಲ್ ದಿನ ಜಾಗೃತಿ ರ‍್ಯಾಲಿ

Suddi Udaya

ಪುದುವೆಟ್ಟು: ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ಮಟ್ಟದ ಪ್ರತಿಭಾ ಕಾರಂಜಿ

Suddi Udaya

ವೇಣೂರು ಪ್ರಾ.ಕೃ.ಪ. ಸಹಕಾರಿ ಸಂಘದ ನೂತನ “ಫಲ್ಗುಣಿ ಕಟ್ಟಡ” ಲೋಕಾರ್ಪಣೆ

Suddi Udaya

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕ ದೀಪಕ್ ಎ.ಎಸ್. ಲೋಕಸಭಾ ಸಂಸದ ಬ್ರಿಜೇಶ್ ಚೌಟರ ಭೇಟಿ

Suddi Udaya

ಬಳಂಜ ಶಾಲೆಯಲ್ಲಿ 89 ವರ್ಷದ ವೆಂಕಮ್ಮ ರವರಿಂದ ಮತದಾನ

Suddi Udaya
error: Content is protected !!