November 10, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ದೋಸೆ ಹಬ್ಬ ಸಂಭ್ರಮ- ಡ್ಯಾನ್ಸ್ ಸ್ಪರ್ಧೆಯಲ್ಲಿ ತಿವಾ ಡ್ಯಾನ್ಸ್ ಕ್ರಿವ್‌ಗೆ ರನ್ನರ್ ಆಪ್ ಪ್ರಶಸ್ತಿಸುಶ್ಮಿತಾ ನೇತೃತ್ವದ ಗುರುವಾಯನಕೆರೆ ತಂಡದ ಆಕರ್ಷಕ ನೃತ್ಯ ಪ್ರದರ್ಶನಕ್ಕೆ ಮೆಚ್ಚುಗೆ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲದ ವತಿಯಿಂದ ಆಯೋಜಿಸಲಾಗಿದ್ದ ದೋಸೆ ಹಬ್ಬದ ಅಂಗವಾಗಿ ನಡೆದ ಡ್ಯಾನ್ಸ್ ಸ್ಪರ್ಧೆಯಲ್ಲಿ ಗುರುವಾಯನಕೆರೆಯ ಸುಶ್ಮಿತಾ ನೇತೃತ್ವದ ತಿವಾ ಡ್ಯಾನ್ಸ್ ಕ್ರಿವ್ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸ್ಪರ್ಧೆಯಲ್ಲಿ ತಂಡದ ಸದಸ್ಯರು ಅತ್ಯುತ್ತಮ ನೃತ್ಯ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ತಮ್ಮ ವಿಭಿನ್ನ ನೃತ್ಯ ಶೈಲಿ, ಸಮನ್ವಯ ಹಾಗೂ ಕಲಾತ್ಮಕ ಅಭಿವ್ಯಕ್ತಿಯ ಮೂಲಕ ಗಮನಾರ್ಹ ಪ್ರದರ್ಶನ ನೀಡಿ ಪ್ರಶಸ್ತಿಗೆ ಭಾಜನರಾದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ, ಕಲಾವಿದ ಧನರಾಜ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಪಾರೆಂಕಿ, ವಿನೀತ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದು, ಪ್ರಶಸ್ತಿ ವಿತರಿಸಿ ತಂಡಕ್ಕೆ ಶುಭ ಹಾರೈಸಿದರು.

ಸುಶ್ಮಿತಾ ಅವರ ನೇತೃತ್ವದಲ್ಲಿ ಸಾಧನೆ ಮಾಡಿದ ತಿವಾ ಡ್ಯಾನ್ಸ್ ಕ್ರಿವ್ ತಂಡದ ಸದಸ್ಯರಿಗೆ ಅಭಿನಂದನೆಗಳು ವ್ಯಕ್ತವಾಗಿವೆ.

Related posts

ಶಿಶಿಲ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಮೇಲಂತಬೆಟ್ಟು ನಿವಾಸಿ ಮಲ್ಲಿಕ್ ನಿಧನ

Suddi Udaya

ಆನೆ ಸಂತ್ರಸ್ತರ ಹೋರಾಟ ಸಮಿತಿ ಕಡಿರುದ್ಯಾವರ ಅಧ್ಯಕ್ಷರಾಗಿ ಸಂತೋಷ್ ಗೌಡ ವಳಂಬ್ರ

Suddi Udaya

ಬೆಳ್ತಂಗಡಿ ವಕೀಲರ ಸಂಘ ದಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಭೇಟಿ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಾಮ ಸಭೆ: ಪಿಡಿಒ ಗಾಯತ್ರಿಯವರಿಗೆ ಬೀಳ್ಕೊಡುಗೆ- ಕಾರ್ಯವೈಖರಿಗೆ ಗ್ರಾಮಸ್ಥರಿಂದ ಶ್ಲಾಘನೆ

Suddi Udaya

ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ ಉಪ್ಪಿನಂಗಡಿಯ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣೆ

Suddi Udaya
error: Content is protected !!