November 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕುಂಭ ಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಕುಂಭ ಕಾರ್ನಿವಾಲ್ ಕಾರ್ಯಕ್ರಮ

ವೇಣೂರು: ನಿಟ್ಟಡೆ ಕುಂಭ ಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ನ.7ರಂದು ನಮ್ಮೂರ ಜಾತ್ರೆ ಕುಂಭಶ್ರೀ ವೈಭವದ ಪ್ರಯುಕ್ತ ಕುಂಭ ಕಾರ್ನಿವಾಲ್ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಶಾಲಾ ಸಂಸ್ಥಾಪಕ ಗಿರೀಶ್ ಕೆ ಎಚ್ ಹಾಗೂ ಸಂಚಾಲಕ ಅಶ್ವಿತ್ ಕುಲಾಲ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶೈಲ ಶ್ರೀ , ಕುಂಭಶ್ರೀ ವೈಭವ ಸಮಿತಿಯ ಗೌರವ ಅಧ್ಯಕ್ಷ ಅಶ್ವಿತ್ ಕುಲಾಲ್ ಇವರು ದೀಪ ಬೆಳಗಿಸಿ ಬಲೂನ್ ಹಾರಿಸುವುದರ ಮೂಲಕ ಆರಂಭಗೊಂಡಿತು.

ಎಲ್ .ಕೆ.ಜಿ ಯಿಂದ 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರಿಗೆ ಫ್ಯಾಷನ್ ಶೋ ಸಂಗೀತ ಕುರ್ಚಿ, ಮಡಿಕೆ ಒಡೆಯುವುದು ಹಗ್ಗ ಜಗ್ಗಾಟ ಮುಂತಾದ ಆಟಗಳನ್ನು ಆಡಿಸಿ ಮನೋರಂಜನೆ ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಮಮತಾ ಶಾಂತಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶುಭ ನಿತೇಶ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಎನ್ ಹಾಗೂ ಶಿಕ್ಷಕ- ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

Related posts

ಸೋಮಂತ್ತಡ್ಕದಲ್ಲಿ ಶ್ರೀ ಕಟೀಲೇಶ್ವರಿ ಜನರಲ್ ಸ್ಟೋರ್ ಶುಭಾರಂಭ

Suddi Udaya

ಮಡಂತ್ಯಾರು: ಪೆದ್ಯಾರ್ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾರ್ಯ: ಸುದ್ದಿ ಉದಯ ಜನಧ್ವನಿ Effect

Suddi Udaya

ಲೋಕಸಭಾ ಚುನಾವಣೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya

ಅಂತರ್ ರಾಜ್ಯ ಖೋ ಖೋ ಪಂದ್ಯಾಟ: ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ನಯನಾಡು ಸ.ಪ್ರೌ. ಶಾಲೆ ವಿದ್ಯಾರ್ಥಿಗಳು

Suddi Udaya

ಭಾರತೀಯ ಸೇನೆಯ ಪರಾಕ್ರಮ, ಶೌರ್ಯ, ನಿಖರತೆ ಶ್ಲಾಘನೀಯ: ರಕ್ಷಿತ್ ಶಿವರಾಂ

Suddi Udaya

ಪ್ರಸನ್ನ ಆಂ.ಮಾ. ವಸತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya
error: Content is protected !!