ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತಿಯ ಗ್ಯಾರಂಟಿ ಅನುಷ್ಟಾನ ಸಮಿತಿ ಕಛೇರಿಯಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೆಸ್ಕಾಂ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಛೇರಿಗಳ ಮೂಲಕ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಹಾಗೂ ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಪರಿಶೀಲಿಸಲಾಯಿತು. ಸರ್ಕಾರದ ಪಂಚಯೋಜನೆಗಳ ಸವಲತ್ತುಗಳನ್ನು ಪಡೆಯಲು ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿಗೊಳಿಸುವ ಕುರಿತು ಚರ್ಚಿಸಲಾಯಿತು.
ಗೃಹಲಕ್ಷ್ಮೀ ಯೋಜನೆಯಡಿ ಪ್ರಸ್ತುತ ೫೯೨೦೪ ಫಲಾನುಭವಿಗಳಿದ್ದು, ಆಗಸ್ಟ್-೨೦೨೩ ರಿಂದ ಜುಲೈ ೨೦೨೬ ರವರೆಗೆ ತಾಲೂಕಿನ ಅರ್ಹ ಗೃಹಲಕ್ಷ್ಮೀ ಯೋಜನೆಯ ಕುಟುಂಬಗಳಿಗೆ ೩೬೨,೪೪,೬೪,೦೦೦/-ರೂ ಸಹಾಯಧನ ದೊರೆತಿರುವುದಾಗಿ, ಬಾಕಿ ಕಂತುಗಳನ್ನು ಸರಕಾರವು ಬಿಡುಗಡೆಯಾದ ನಂತರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದೆಂದು ಹಾಗೂ ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆ ಕಾರ್ಯಕ್ಕೆ ಈಗಾಗಲೇ ತರಭೇತಿಯನ್ನು ಪ್ರಾರಂಭಿಸಲಾಗಿರುತ್ತದೆ, ಸರ್ಕಾರವು ನಿರ್ದೇಶನ ನೀಡಿದ ನಂತರದಲ್ಲಿ ಮರುಪರಿಶೀಲನೆ ಮಾಡುವ ಕಾರ್ಯವನ್ನು ನಡೆಸುವುದಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇವರು ಸಭೆಗೆ ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ಧರ್ಮಸ್ಥಳ ಘಟಕದ ಬಸ್ಸುಗಳ ಮೂಲಕ ೨೦೨೬ರ ಅಕ್ಟೋಬರ್ ತಿಂಗಳಲ್ಲಿ ಒಟ್ಟು ೭,೬೦,೩೦೬ ಮಹಿಳಾ ಪ್ರಯಾಣಿಕರು ಯೋಜನೆಯ ಸವಲತ್ತನ್ನು ಪಡೆದಿದ್ದು, ಜೂನ್-೨೦೨೩ ರಿಂದ ಈವರೆಗೆ ರೂ.೧೨೬,೮೬,೧೬,೨೬೩/- ಖರ್ಚು ಭರಿಸುವುದಾಗಿ ಧರ್ಮಸ್ಥಳ ಘಟಕದ ಮೇಲ್ವಿಚಾರಕರು ಸಭೆಗೆ ಮಾಹಿತಿ ನೀಡಿದರು.
ಅನ್ನ ಭಾಗ್ಯ ಯೋಜನೆಗೆ ಸಂಬAಧಿಸಿದAತೆ ಅಕ್ಟೋಬರ್ ೨೦೨೬ರ ವರೆಗೆ ತಾಲೂಕಿನಲ್ಲಿ ಒಟ್ಟು ೪೮೩೬೯ ಪಡಿತರ ಚೀಟಿಗಳಲ್ಲಿ ೪೬೫೭೭ ಪಡಿತರ ಚೀಟಿಗಳಿಗೆ ವಿತರಿಸಲಾಗಿ ಶೇಕಡಾ ೯೬.೨೬% ರಂತೆ ೧೯೬೭೬ ಕ್ವಿಂಟಾಲ್ ಪಡಿತರ ಅಕ್ಕಿ ವಿತರಿಸಲಾಗಿದೆ. ತಾಲೂಕಿನಲ್ಲಿ ೫ ವರ್ಷ ಪೂರ್ಣಗೊಳಿಸಿದ ಪಡಿತರ ಚೀಟಿಯ ಇ-ಕೆವೈಸಿ ಕಾರ್ಯವು ಪ್ಗಗತಿಯಲ್ಲಿದ್ದು, ದಿನಾಂಕ ೨೯/೧೦/೨೦೨೬ರ ವರೆಗೆ ತಾಲೂಕಿನಲ್ಲಿ ಶೇಕಡಾ ೮೮.೮೯% ಪ್ರಗತಿಯನ್ನು ಸಾಧಿಸಲಾಗಿದೆ ಹಾಗೂ ಸರ್ಕಾರವು ದಿನಾಂಕ ೩೦/೧೧/೨೦೨೬ರ ವರೆಗೆ ಅಂತಿಮ ಗಡುವು ನೀಡಿರುವುದಾಗಿ ಎಂದು ಆಹಾರ ನಿರೀಕ್ಷಕರು ಸಭೆಗೆ ವಿವರ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ಉಜಿರೆ ಉಪವಿಭಾಗದಲ್ಲಿ ೨೦೨೬ರ ಅಕ್ಟೋಬರ್ ಮಾಹೆಯಲ್ಲಿ ೨೭೧೯೭ ಕುಟುಂಬಗಳಿಗೆ ೧,೪೦,೦೯,೯೨೧/- ರೂ, ಹಾಗೂ ಬೆಳ್ತಂಗಡಿ ಉಪವಿಭಾಗದಲ್ಲಿ ೨೦೨೬ರ ಅಕ್ಟೋಬರ್ಮಾಹೆಯಲ್ಲಿ ೪೫೮೯೬ ಕುಟುಂಬಗಳಿಗೆ ೨,೬೭,೫೫,೮೮೭/-ರೂ ಸಹಾಯಧನ ದೊರತಿದ್ದು ತಾಲೂಕಿನ ೨ ಉಪ ವಿಭಾಗಗಳಿಗೆ ಈವರೆಗೆ ಒಟ್ಟು ೧,೪೯,೨೭,೦೨,೧೨೧/- ರೂ ಸಹಾಯಧನ ದೊರೆತಿರುವುದಾಗಿ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಭೆಗೆ ತಿಳಿಸಿದರು. ತಾಲೂಕಿನ ಅರ್ಹ ಗೃಹಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯದ ಗಡುವು ಈಗಾಗಲೇ ಮುಗಿದಿರುತ್ತದೆ ಎಂದು ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೮೪೭೨ ಫಲಾನುಭವಿಗಳಿದ್ದು, ಬೆಳ್ತಂಗಡಿ ತಾಲೂಕಿನ ೧೨೪೧ ಅಭ್ಯರ್ಥಿಗಳು ನೋಂದಣಿಗೊAಡಿರುತ್ತಾರೆ. ತಾಲೂಕಿನಲ್ಲಿ ಒಟ್ಟು ೧೧೩೨ ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಸಹಾಯಧನವನ್ನು ವಿತರಿಸಲಾಗಿದ್ದು, ಈವರೆಗೆ ೩,೩೩,೫೨,೫೦೦ ರೂ.ಗಳನ್ನು ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಶ್ರೀಮತಿ ಮಂಜೂಷರವರು ತಿಳಿಸಿದರು.
ಗ್ಯಾರಂಟಿ ಅನುಷ್ಟಾನ ಸಮಿತಿ ಸಮಿತಿಯ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಉದ್ದೇಶಿಸಿ ಮಾತನಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯು ಉತ್ತಮ ಪ್ರಗತಿಯನ್ನು ಸಾಧಿಸಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲಾ ಇಲಾಖೆಯ ಆಧಿಕಾರಿಗಳಿಗೆ ಶುಭಾಷಯ ಕೋರಿದರು, ಬೆಳ್ತಂಗಡಿ ತಾಲೂಕಿನ ನಿರುದ್ಯೋಗಿ ಯುವಕ/ಯುವತಿಯರಿಗೆ ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳವನ್ನು ನಡೆಸುವುದಾಗಿ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ಯಾರಂಟಿ ಉತ್ಸವವನ್ನು ನಡೆಸುವುದಾಗಿ ಮಾಹಿತಿ ನೀಡಿದರು.
ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಶೇಖರ್ ಕುಕ್ಕೇಡಿ, ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರಾದ ಅಬ್ದುಲ್ ರಹಿಮಾನ್, ಸಕೇಶ್ ಕೆ. ವಿನೋದ್ ಡಿಸೋಜ, ಎಂ ಸೂರ್ಯ ಪ್ರಕಾಶ್, ಜೋಸೆಫ್ ಕೆ.ಜೆ.,ಸುಪ್ರಿಯಾ ಡಿಸೋಜ, ಸುಧೀರ್ ಕುಮಾರ್, ಮುನಿರಾಜ್ ಜೈನ್, ಪುಷ್ಪಲತಾ, ರವಿ ನೇತ್ರಾವತಿನಗರ, ಸಚಿನ್ ದೇವಾಡಿಗ, ವಿನಯ್ ಕುಮಾರ್ ಎಂ ಹಾಗೂ ನೋಡೆಲ್ ಅಧಿಕಾರಿ ಹೆರಾಲ್ಡ್ ಸ್ವಿಕ್ವೇರಾ ಉಪಸ್ಥಿತರಿದ್ದರು.ಯೋಜನೆಯ ಸದಸ್ಯ ಕಾರ್ಯದರ್ಶಿ ಭವಾನಿಶಂಕರ್ ಎನ್ ಸಭೆಯಲ್ಲಿ ಸ್ವಾಗತಿಸಿದರು.















