November 11, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನ.15: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ರೋಗ ತಪಾಸಣಾ ಶಿಬಿರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನ.15 ಆದಿತ್ಯವಾರ ಬೆಳಿಗ್ಗೆ ೯.೩೦ರಿಂದ ಮಧ್ಯಾಹ್ನ 1ರವರೆಗೆ ಮಕ್ಕಳ ರೋಗ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ 14 ವರ್ಷದೊಳಗಿನ ಎಲ್ಲಾ ಮಕ್ಕಳ ರೋಗ ತಪಾಸಣೆ ಉಚಿತವಾಗಿ ನಡೆಸಲಾಗುವುದು.

ಅಸ್ತಮ, ಉಬ್ಬಸ ಅತಿಸಾರ (ಅತಿಭೇದಿ), ಮಲಬದ್ಧತೆ, ಜ್ವರ, ಅಲರ್ಜಿ, ರ‍್ಯಾಶಸ್ (ದದ್ದುಗಳು), ಚರ್ಮದ ಸೋಂಕು, ಕೆಮ್ಮು, ಕಫ, ಹೊಟ್ಟೆ ನೋವು, ಹಲ್ಲುನೋವು, ಕಟ್ಟಿಕೊಳ್ಳುವ ಮೂಗು, ವಾಕರಿಕೆ ಮತ್ತು ವಾಂತಿ, ಪೌಷ್ಟಿಕಾಂಶದ ಕೊರತೆ, ಮೂರ್ಛೆರೋಗ, ಮಕ್ಕಳ ಬೆಳವಣಿಗೆಯ ಮೌಲ್ಯಮಾಪನ, ಜಾಂಡೀಸ್, ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುವುದು.
.
ವೈದ್ಯರ ಸಮಾಲೋಚನೆ ಉಚಿತ, ಒಳರೋಗಿ ವಿಭಾಗದಲ್ಲಿ ೨೫% ರಿಯಾಯಿತಿ, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ ೫೦% ಹಾಗೂ ಔಷಧದಲ್ಲಿ ೧೦% ರಿಯಾಯಿತಿ ನೀಡಲಾಗುವುದು. ಸಂಪೂರ್ಣ ರಕ್ತ ಪರೀಕ್ಷೆ, ಸೀರಮ್ ಕ್ಯಾಲ್ಸಿಯಂ, ಸೀರಮ್ ಮ್ಯಾಗ್ನಿಷಿಯಮ್ ಈ ಮೂರು ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವುದು.

ಮಕ್ಕಳರೋಗ ತಜ್ಞರಾದ ಡಾ| ಪ್ರತೀತ್, ಡಾ| ನಿಖಿತಾ ಮಿರ್ಲೆ ಇವರು ತಪಾಸಣೆ ನಡೆಸಲಿದ್ದಾರೆ. ಹೆಸರು ನೊಂದಾಯಿಸಿಕೊಳ್ಳಲು 7760397878/ 8073349216 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ತೆಕ್ಕಾರು : ಕುಟ್ಟಿಕಳ ರಾಧು ರವರ ಮನೆ ಭಾಗಶಃ ಕುಸಿತ

Suddi Udaya

ಕನ್ಯಾಡಿ ಸೇವಾನಿಕೇತನಕ್ಕೆ ಬೈಂದೂರು ಶಾಸಕರ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಸಿ ಬಿ ಎಸ್ ಸಿ ಟಾಪರ್ ಅಕ್ಷಯ್ ಗೆ ಎಕ್ಸೆಲ್ ನಲ್ಲಿ ಗೌರವ

Suddi Udaya

ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಾಶಿಪಟ್ಟಣ: ಸಂತ ಅಂತೋನಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya

ಧರ್ಮಸ್ಥಳ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ, ನಿಲ್ಲಿಸಿದ್ದ ರೂ.1.50 ಲಕ್ಷ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ಕಳವು

Suddi Udaya
error: Content is protected !!