November 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭಸಂಘ-ಸಂಸ್ಥೆಗಳು

ನ.18: ರೂ.3.33 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪೆರಾಡಿ ಸೊಸೈಟಿಯ ಸುಸಜ್ಜಿತ ಸಭಾಭವನ, ಗೋದಾಮು ಕಟ್ಟಡ ಲೋಕಾರ್ಪಣೆ-ಪತ್ರಿಕಾಗೋಷ್ಠಿ

ಪೆರಾಡಿ: ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ1952ರಲ್ಲಿ ಸ್ಥಾಪನೆಯಾದ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 74 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ 75ನೇ ವರ್ಷಕ್ಕೆ ಕಾಲಿಟ್ಟಿದೆ. ಕೃಷಿ, ಸಹಕಾರ ಮತ್ತು ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಸಂಘವು ಇದೀಗ ಸುಮಾರು ರೂ 3.33 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತವಾದ ಸಂಗಮ ಸಭಾಭವನ, ನೂತನ ಗೋದಾಮು ಕಟ್ಟಡ ದ ಲೋಕಾರ್ಪಣೆ ಹಾಗೂ 73ನೇ ದ.ಕ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆಯು ನ.೧೮ರಂದು ಅದ್ದೂರಿಯಾಗಿ ನಡೆಯಲಿ ಎಂದು ಸಂಘದ ಅಧ್ಯಕ್ಷ ಸಹಕಾರ ರತ್ನ ಸತೀಶ್ ಕಾಶಿಪಟ್ಣ ತಿಳಿಸಿದ್ದಾರೆ.

ನ.11ರಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 1952ರಲ್ಲಿ ಪದ್ಮರಾಜ ಶೆಟ್ಟಿ ಕರೆಂಕಿದೋಡಿ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಂಘವು ಹಲವು ಹಿರಿಯ ಸಹಕಾರಿಗಳ ದೂರದೃಷ್ಟಿ ಮತ್ತು ಸದಸ್ಯರ ಸಹಕಾರದಿಂದ ಇಂದು ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿದೆ.ಆಡಳಿತ ಮಂಡಳಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಸAಘದ ವ್ಯವಹಾರ ಕ್ಷೇತ್ರವು ಪೆರಾಡಿ, ಮರೋಡಿ, ಕಾಶಿಪಟ್ಣ, ಹೊಸಂಗಡಿ ಹಾಗೂ ಬಡಕೋಡಿ ಸೇರಿದಂತೆ ಐದು ಗ್ರಾಮಗಳನ್ನು ಒಳಗೊಂಡಿದೆ. 1976-77ರಲ್ಲಿ ಸರ್ಕಾರದ ಆದೇಶದಂತೆ ಪೆರಾಡಿ ಮತ್ತು ಪೆರಿಂಜೆ ಸೇವಾ ಸಹಕಾರಿ ಸಂಘಗಳು ವಿಲೀನಗೊಂಡು ಪೆರಾಡಿ ವ್ಯವಸಾಯ ಸೇವಾ ಸಹಕಾರಿ ಸಂಘವಾಗಿ ಕಾರ್ಯನಿರ್ವಹಿಸಲು ಆರಂಭಿಸಿತು. ಪೆರಾಡಿಯಲ್ಲಿ ಪ್ರಧಾನ ಕಚೇರಿ ಹಾಗೂ ಪೆರಿಂಜೆಯಲ್ಲಿ ಶಾಖೆಯನ್ನು ಹೊಂದಿರುವ ಸಂಘವು ಕಾಲಕ್ರಮೇಣ ತನ್ನ ಸೇವೆಗಳನ್ನು ವಿಸ್ತರಿಸಿಕೊಂಡಿದೆ.

1985-86ನೇ ಸಾಲಿನಲ್ಲಿ ಎನ್.ಸಿ.ಡಿ.ಸಿ ಯೋಜನೆಯಡಿ 100 ಟನ್ ಸಾಮರ್ಥ್ಯದ ಗೋದಾಮು, ಕಚೇರಿ ಹಾಗೂ ಕಾರ್ಯದರ್ಶಿಯವರ ವಸತಿಗೃಹ ನಿರ್ಮಾಣಕ್ಕೆ ಮಂಜೂರಾತಿ ದೊರೆತಿತ್ತು. ಈ ಕಟ್ಟಡವು 1987ರ ಫೆಬ್ರವರಿ 12ರಂದು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯಹಸ್ತದಿಂದ ಉದ್ಘಾಟನೆಗೊಂಡಿತ್ತು. ನಂತರ ಸಂಘದ ವ್ಯವಹಾರ ವಿಸ್ತರಣೆಯ ಹಿನ್ನೆಲೆಯಲ್ಲಿ ಸದಸ್ಯರ ಅಭಿಪ್ರಾಯದಂತೆ ನೂತನ ಕಟ್ಟಡ ನಿರ್ಮಾಣ ಕೈಗೆತ್ತಿಕೊಂಡು 2005ರ ಡಿಸೆಂಬರ್ 9ರಂದು ಪಾಂಚಜನ್ಯ' ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗಿತ್ತು ಎಂದರು.

ರೂ.102 ಕೋಟಿ ದುಡಿಯುವ ಬಂಡವಾಳ: ಸಂಘವು 1997-98ರವರೆಗೆ ನಷ್ಟದಲ್ಲಿದ್ದರೂ, 1998-99ರಿಂದ ಕ್ರಮೇಣ ಲಾಭದ ಹಾದಿಯಲ್ಲಿ ಮುನ್ನಡೆದು ಇಂದು ಆರ್ಥಿಕವಾಗಿ ಸದೃಢವಾಗಿದೆ. ಪ್ರಸ್ತುತ ಸಂಘವು ರೂ 2.49 ಕೋಟಿ ಕ್ಷೇಮನಿಧಿ ಹಾಗೂ ಸುಮಾರು ರೂ 102 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. 2026ರ ಅಕ್ಟೋಬರ್ 7ರ ಅಂತ್ಯದ ಅಂಕಿ-ಅಂಶಗಳ ಪ್ರಕಾರ ಸಂಘದ ಸದಸ್ಯರ ಸಂಖ್ಯೆ 3,308ಕ್ಕೆ ಏರಿಕೆಯಾಗಿದ್ದು, ಪಾಲು ಬಂಡವಾಳ ರೂ 2.40 ಕೋಟಿ ಹಾಗೂ ಠೇವಣಿ ರೂ 63.26 ಕೋಟಿಯಾಗಿದೆ. ಸಂಘವು ರೈತ ಸದಸ್ಯರಿಗೆ ಕೃಷಿ ಉದ್ದೇಶದ ಅಲ್ಪಾವಧಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಹಾಗೂ ಮಧ್ಯಮಾವಧಿ, ದೀರ್ಘಾವಧಿ ಮತ್ತು ಹೈನುಗಾರಿಕೆ ಸಾಲಗಳನ್ನು ಶೇ.3ರ ಬಡ್ಡಿದರದಲ್ಲಿ ಒದಗಿಸುತ್ತಿದೆ. ವಾಹನ, ಗೃಹನಿರ್ಮಾಣ, ಭೂ ಅಡಮಾನ, ಚಿನ್ನಾಭರಣ ಅಡಮಾನ, ತುರ್ತು, ವ್ಯಾಪಾರ, ಠೇವಣಿ ಹಾಗೂ ಪಿಗ್ಮಿ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ನವೋದಯ ಸ್ವಸಹಾಯ ಸಂಘಗಳಿಗೂ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರೊಂದಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ, ಅಡುಗೆ ಅನಿಲ ಪೂರೈಕೆ ಹಾಗೂ ಸಾಮಾನ್ಯ ಸೇವಾ ಕೇಂದ್ರದ ಮೂಲಕ ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ನೀಡಲಾಗುತ್ತಿದೆ. ಪ್ರಧಾನ ಕಚೇರಿ ಮತ್ತು ಪೆರಿಂಜೆ ಶಾಖೆಯಲ್ಲಿ ಒಟ್ಟು ೨೯೨ ನವೋದಯ ಸ್ವಸಹಾಯ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ ಸಂಘ ಪ್ರೋತ್ಸಾಹ ನೀಡುತ್ತಿದೆ ಎಂದರು.

ಸದಸ್ಯರ ಕಲ್ಯಾಣಕ್ಕೆ ವಿಶೇಷ ಆದ್ಯತೆ: ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆ, ಹವಾಮಾನ ಆಧಾರಿತ ಬೆಳೆ ವಿಮೆ ಹಾಗೂ ಅರ್ಹರಿಗೆ ಗುಂಪು ಅವಧಿ ಜೀವ ವಿಮೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸದಸ್ಯರು ಹಾಗೂ ಸಾರ್ವಜನಿಕರ ಅಮೂಲ್ಯ ಒಡವೆಗಳ ಸುರಕ್ಷತೆಗಾಗಿ ಪೆರಾಡಿ ಮತ್ತು ಪೆರಿಂಜೆ ಶಾಖೆಗಳಲ್ಲಿ ಸಿಸಿಟಿವಿ ಹಾಗೂ ಸೈರನ್ ವ್ಯವಸ್ಥೆಯೊಂದಿಗೆ ಸೇಫ್ ಲಾಕರ್ ಸೌಲಭ್ಯ ಒದಗಿಸಲಾಗಿದೆ. ಪ್ರತಿ ವರ್ಷ ಮಹಾಸಭೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉನ್ನತ ಶಿಕ್ಷಣದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಗೌರವ, ಉತ್ತಮ ಕೃಷಿಕ ಸದಸ್ಯರಿಗೆ ಪ್ರಶಸ್ತಿ, ವಿಕಲಚೇತನರಿಗೆ ಸಹಾಯಧನ ಹಾಗೂ ಮೃತಪಟ್ಟ ಸದಸ್ಯರ ವಾರಸುದಾರರಿಗೆ ನೆರವು ನೀಡಲಾಗುತ್ತಿದೆ. ನಿರಂತರ ಲಾಭ, ಲೆಕ್ಕಪರಿಶೋಧನೆಯಲ್ಲಿ ಎ’ ವರ್ಗದ ಮಾನ್ಯತೆ, ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ವಿತರಣೆ ಸಂಘದ ಪ್ರಮುಖ ಸಾಧನೆಗಳಾಗಿವೆ. 2025-26ನೇ ಸಾಲಿನಲ್ಲಿ ರೂ ೧.೦೬ ಕೋಟಿಗೂ ಅಧಿಕ ನಿವ್ವಳ ಲಾಭ ಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸತತ 13ವರ್ಷಗಳಿಂದ ಉತ್ತಮ ಸಹಕಾರಿ ಸಂಘ ಎಂಬ ವಿಶೇಷ ಪ್ರೋತ್ಸಾಹಕ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಸಂಘದ ಪ್ರಗತಿಯಲ್ಲಿ ಹಿಂದಿನ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ಸದಸ್ಯರ ಸಹಕಾರ ಮಹತ್ವದ್ದಾಗಿದೆ. ಪ್ರಸ್ತುತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಾ ಅವರ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಸೇವೆ ಸಲ್ಲಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸದಸ್ಯರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವುದರೊಂದಿಗೆ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಂಘ ಬದ್ಧವಾಗಿದೆ ಎಂದು ಅಧ್ಯಕ್ಷ ಸತೀಶ್ ಕಾಶಿಪಟ್ಣ ತಿಳಿಸಿದರು.

73ನೇ ಸಹಕಾರ ಸಪ್ತಾಹ ಸಂಭ್ರಮ: ಸಭಾಭವನ ಮತ್ತು ಗೋದಾಮು ಕಟ್ಟಡ ಉದ್ಘಾಟನ ಸಮಾರಂಭ ಹಾಗೂ 73ನೇ ದ.ಕ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಕೂಡ ನಡೆಯಲಿದೆ. ನೂತನ ಕಟ್ಟಡದ ಉದ್ಘಾಟನೆಯನ್ನು ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನೇರವೇರಿಸಲಿದ್ದಾರೆ. ಸಂಗಂಮ ಸಭಾ ಭವನವನ್ನು ಸಹಕಾರ ಸಚಿವ ಲಕ್ಷö್ಮಣ ಸಂಗಪ್ಪ ಸವದಿ, ಪಂಚಸಿರಿ ಸಭಾ ಭವನವನ್ನು ಉಸ್ತುವಾರಿ ಸಚಿವ ಯು.ಟಿ ಖಾದರ್, ರಸಗೊಬ್ಬರ ವಿಭಾಗದ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ ಹಾಗೂ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು, ಸಹಕಾರಿಗಳು ಭಾಗವಹಿಸಲಿದ್ದಾರೆ.

ಅದ್ದೂರಿ ಮೆರವಣಿಗೆ ಮತ್ತು ಸಾಂಸ್ಕೃತಿಕ ವೈಭವ: ಕಾರ್ಯಕ್ರಮದ ಮೊದಲು ಅದ್ದೂರಿ ಮೆರವಣಿಗೆ, ಉದ್ಘಾಟನೆ, ಸಭಾ ಕಾರ್ಯಕ್ರಮ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ, ದೇವಿದಾಸ್ ಕಾಪಿಕಾಡ್ ಬಳಗದಿಂದ ಎನೋರಿ ಬರೋಲಿಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ, ಸಿಇಓ ಹೇಮಾ, ನಿರ್ದೇಶಕರಾದ ಯನ್.ಆರ್ ಸೀತರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೋ, ದೇವಕಿ ಡಿ ಶೆಟ್ಟಿ, ಸುಜಾತ, ಕೃಷ್ಣಪ್ಪ, ರಾಜೇಶ್ ಎನ್ ಶೆಟ್ಟಿ, ಸುರೇಶ್ ಅಂಚನ್, ಅಕ್ಷಯ್ ಕುಮಾರ್, ವಿಜಯ ನಾಯ್ಕ, ಹಿರಿಯರಾದ ಹೇಮರಾಜ್ ಬೆಳ್ಳಿಬೀಡು ಉಪಸ್ಥಿತರಿದ್ದರು.

ರೂ.3.33 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ: ಸತೀಶ್ ಕಾಶಿಪಟ್ಣ
ಸದಸ್ಯರಿಗೆ ಗುಣಮಟ್ಟದ ರಾಸಾಯನಿಕ ಗೊಬ್ಬರ ಪೂರೈಸಲು ಹಾಗೂ ಅಡಿಕೆ, ಕಾಳುಮೆಣಸು ಮೊದಲಾದ ಕೃಷಿ ಉತ್ಪನ್ನಗಳನ್ನು ಸುರಕ್ಷಿತವಾಗಿ ದಾಸ್ತಾನು ಇರಿಸಲು ಆಧುನಿಕ ಗೋದಾಮಿನ ಅಗತ್ಯವಿದೆ. ಅದೇ ರೀತಿ ಸದಸ್ಯರು ಮತ್ತು ಸಾರ್ವಜನಿಕರ ಸಭೆ, ಸಮಾರಂಭ, ಮದುವೆ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಸಭಾಭವನ ನಿರ್ಮಿಸುವ ಉದ್ದೇಶದಿಂದ ಸಂಘವು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ನೂತನ ಸಭಾಭವನವು ಸಂಘದ ಸದಸ್ಯರಿಗಷ್ಟೇ ಸೀಮಿತವಾಗದೆ ಸಾರ್ವಜನಿಕರಿಗೂ ಉಪಯುಕ್ತವಾಗಲಿದೆ. ಸಂಘದ ವಾರ್ಷಿಕ ಮಹಾಸಭೆ, ರೈತರಿಗೆ ಕೃಷಿ ಮಾಹಿತಿ ಹಾಗೂ ತರಬೇತಿ ಶಿಬಿರಗಳು, ಮಹಿಳಾ ಸ್ವಸಹಾಯ ಸಂಘಗಳ ಸಭೆಗಳು, ಯುವಜನರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಶೈಕ್ಷಣಿಕ, ಸಾಮಾಜಿಕ ಹಾಗೂ ಸಮುದಾಯದ ಚಟುವಟಿಕೆಗಳಿಗೆ ಈ ಸಭಾಭವನ ವೇದಿಕೆಯಾಗಲಿದೆ ಎಂದು ಸತೀಶ್ ಕಾಶಿಪಟ್ಣ ತಿಳಿಸಿದರು

Related posts

ಬಿ.ಜೆ.ಪಿ ಮನೆ ಮನೆ ಪ್ರಚಾರ ಕಾರ್ಯಕ್ಕೆ ಹರೀಶ್ ಪೂಂಜ ಚಾಲನೆ

Suddi Udaya

ನಿಂತಿದ್ದ ಸ್ಕೂಟರಿಗೆ ಆಟೋ ರಿಕ್ಷಾ ಡಿಕ್ಕಿ: ಸ್ಕೂಟರ್ ಸವಾರನಿಗೆ ಗಾಯ

Suddi Udaya

ಅವೈಜ್ಞಾನಿಕ ಹಾಗೂ ಜನಹಿತಪರವಲ್ಲದ ಕಸ್ತೂರಿರಂಗನ್ ವರದಿ ತಡೆಹಿಡಿದು ವಜಾಮಾಡುವ ತನಕ ಹೋರಾಟವನ್ನು ಮುನ್ನಡೆಸೋಣ : ಫಾ| ಸುನಿಲ್ ಐಸಕ್ ಬೆಂಬಲ

Suddi Udaya

ಉರುವಾಲು ಶ್ರೀ ಭಾರತೀ ಆ.ಮಾ. ಪ್ರೌಢ ಶಾಲೆ ಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Suddi Udaya

ಮಾ.28: ಶ್ರೀ ಮಾತಾ ನಾಲ್ಕೂರು ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya
error: Content is protected !!