November 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಡಿಎಸ್ ನಾಯಕ ರಾಮಾಚಾರಿ ಅವರ ನಿಧನಕ್ಕೆ ಮೋಹನ್ ಗೌಡ ಸಂತಾಪ

ಬೆಳ್ತಂಗಡಿ:ಇತ್ತೀಚಿಗೆ ನಿಧನರಾದ ಜೆಡಿಎಸ್ ಹಿರಿಯ ನಾಯಕ ಮುಂಡಾಜೆ ಗ್ರಾಮ ಪಂಚಾಯತ್ ನಲ್ಲಿ ಜನಸಾಮಾನ್ಯರ ಧ್ವನಿಯಾಗಿದ್ದ ಹಿರಿಯ ಮುಖಂಡರು ಕೃಷಿಕ ರಾಮಾಚಾರಿ ಅವರ ನಿಧನ ಕ್ಕೆ ಅವರ ಶಿಷ್ಯ ಬೆಳ್ತಂಗಡಿ ತಾಲೂಕಿನಲ್ಲಿ ರಾಜಕೀಯವಾಗಿ ಒಕ್ಕಲಿಗ ಗೌಡ ಸಮಾಜದ ಯುವಕನನ್ನ ಜೆಡಿಎಸ್ ನಿಂದ ಪರಿಚಯಿಸಿ ಇಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ವಿಭಾಗದ ನಾಯಕನಾಗಿ ಸೇವೆ ಸಲ್ಲಿಸಿ, ಕೃಷಿ, ಉದ್ಯಮಿಯಾಗಿ, ಕೃಷಿಕನಾಗಿ ಈ ವರ್ಷದ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಮೋಹನ್ ಗೌಡ ಸಂತಾಪ ಸಲ್ಲಿಸಿದ್ದಾರೆ.

ರಾಮಾಚಾರಿಯವರು ನನ್ನ ಅಂದು ಗುರುತಿಸ ದಿದ್ದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪರಿಚಯ ಮಾಡಿ ತಾಲೂಕು ಪ್ರದಾನ ಕಾರ್ಯದರ್ಶಿ ಆಗಿ. ಅಂದಿನ ಶಾಸಕರು ವಸಂತ ಬಂಗೇರರ ಪರಿಚಯ ಒಡನಾಟ ಮಾಡಿ ಕೊಡದಿದ್ದರೆ ಇಂದು ನಾನೂ ಯಾವುದೇ ನಾಯಕ ಆಗುತ್ತಿರಲಿಲ್ಲ. ಅವರು ಹೆಮ್ಮೆಯಿಂದ ಇಂದು ನಾನೂ ಎಲ್ಲಿ ಸಿಕ್ಕಾಗ ಕಾಂಗ್ರೆಸ್ ಪಕ್ಷದ ಕೆಲಸದಲ್ಲಿದ್ದರೂ ಅವರು ಬಹಿರಂಗವಾಗಿ ನನ್ನ ಶಿಷ್ಯ ಎಂದು ಹೆಮ್ಮೆಯಿಂದ ಬೆನ್ನು ತಟ್ಟುತಿದ್ದರು. ಎಲ್ಲಿ ಸಿಕ್ಕಾಗ ಕೂಡ ಅವರನ್ನು ನಾನು ಒಂದು ತಕ್ಷಣವೇ ಕಾರ್ ನಿಲ್ಲಿಸಿ ಸರ್ ಹೇಗಿದ್ದೀರಿ ಎಂದು ನಾನು ಮಾತಾಡಿಯೇ ಮುಂದೆ ಸಾಗುತ್ತಿದ್ದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಮನೆಯವರಿಗೆ,ಅಭಿಮಾನಿಗಳಿಗೆ ಈ ದುಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಂತಾಪ ವ್ಯಕ್ತಪಡಿಸಿದರು.

Related posts

ಬೈಕ್ ಮತ್ತು ಪಿಕಪ್ ವಾಹನ ನಡುವೆ ಅಪಘಾತ, ಬೈಕ್ ಸವಾರಿಗೆ ಗಂಭೀರ ಗಾಯ, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ, ವೇಣೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಸುಂದರ ಮಲೆಕುಡಿಯರ ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ: ಮಲೆಕುಡಿಯ ಸಂಘ ದಕ್ಷಿಣ ಕನ್ನಡ ಜಿಲ್ಲೆ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ “ಆಟಿಡೊಂಜಿ ದಿನ” ಸ್ನೇಹಭೋಜನ ಕೂಟ

Suddi Udaya

ಅಟೋ ರಿಕ್ಷಾ ಮತ್ತು ಬೈಕ್ ಢಿಕ್ಕಿ: ಪ್ರಯಾಣಿಕರಿಗೆ ಗಂಭೀರ ಗಾಯ

Suddi Udaya

ಲಾಯಿಲ: ಕಕ್ಕೆಜಾಲು ನಿವಾಸಿ ದೂಜ ಕುಮಾರ್ ನಿಧನ

Suddi Udaya
error: Content is protected !!