September 6, 2026
ತಾಲೂಕು ಸುದ್ದಿ

ಬಿ.ಜೆ.ಪಿ ಮನೆ ಮನೆ ಪ್ರಚಾರ ಕಾರ್ಯಕ್ಕೆ ಹರೀಶ್ ಪೂಂಜ ಚಾಲನೆ

ಬೆಳ್ತಂಗಡಿ: 2023ರ ವಿಧಾನ ಸಭಾ ಚುನಾವಣೆಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಹರೀಶ್ ಪೂಂಜ ಅವರು ಇಂದು ಎ. 22 ರಂದು ಮನೆ ಭೇಟಿಯ ಮೂಲಕ ಪ್ರಚಾರಕಾರ್ಯಕ್ಕೆ ಚಾಲನೆ ನೀಡಿದರು.
ವೇಣೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ವೇಣೂರಿನಿಂದ ಪ್ರಚಾರ ಕಾರ್ಯ ಆರಂಭಿಸಿದ ಶಾಸಕರು 10 ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ದಿನ ವಿಡೀ ಶಾಸಕರು

ಬಜಿರೆ,ಗುಂಡೂರಿ,ಆರಂಬೋಡಿ,ಹೊಸಂಗಡಿ, ಬಡಕೋಡಿ, ಕಾಶಿಪಟ್ಟ,ಪೆರಾಡಿ,ನಾರಾವಿ, ಕುತ್ತೂರು,ಕೊಕ್ರಾಡಿ,ಸಾವ್ಯ,ಅಂಡಿಂಜೆ ಗ್ರಾಮಗಳ ಮನೆ ಭೇಟಿ ನಡೆಸಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿ,ಮೋದಿ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಅರಿವುಮೂಡಿಸಿ,


ಕ್ಷೇತ್ರದ ಜನರು ಪ್ರೀತಿ, ಆದರಗಳಿಂದ ಸ್ವಾಗತಿಸುತ್ತಿದ್ದಾರೆ: ಹರೀಶ್ ಪೂಂಜ

ಇಂದು ನಮ್ಮಮನೆಮನೆ ಪ್ರಚಾರಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ನಾವು ಸಂಘಟನಾತ್ಮಕವಾಗಿ ಬಲಿಷ್ಠವಾಗಿರುವ ಕಾರಣ ಕಟ್ಟ ಕಡೆಯ ಕಾರ್ಯಕರ್ತರನ್ನೂ ತಲುಪಲು ನಮ್ಮಿಂದ ಸಾಧ್ಯವಾಗುತ್ತಿದೆ.ಇಂದಿನ ಮೊದಲ ದಿನದ ಮನೆ ಭೇಟಿಯ ವೇಳೆ ಕ್ಷೇತ್ರದ ಜನರು ಪ್ರೀತಿ, ಆದರಗಳಿಂದ ಸ್ವಾಗತಿಸಿದ್ದಾರೆ.ನಮ್ಮಕಾರ್ಯಕರ್ತರು ಅತ್ಯುತ್ಸಾಹದಿಂದ ಕೆಲಸಮಾಡುತ್ತಿದ್ದು ಕಾರ್ಯಕರ್ತರ ಉತ್ಸಾಹ ನೋಡಿ ತುಂಬಾ ಸಂತೋಷವಾಯಿತು
-ಹರೀಶ್ ಪೂಂಜ

Related posts

ಪುಂಜಾಲಕಟ್ಟೆಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya

ಕೆಎಸ್ಆರ್ ಟಿಸಿ ಮಜ್ದೂರು ಸಂಘದ ವಾರ್ಷಿಕ ಸಭೆ

Suddi Udaya

ವೇಣೂರು ದೇವಾಡಿಗರ ಸೇವಾ ವೇದಿಕೆಯ ನೂತನ ಅಧ್ಯಕ್ಷರಾಗಿ ಜಗನ್ನಾಥ ದೇವಾಡಿಗ, ಕಾರ್ಯದರ್ಶಿಯಾಗಿ ಅರುಣ ದೇವಾಡಿಗ ಆಯ್ಕೆ

Suddi Udaya

ಮಲವಂತಿಗೆ ಗ್ರಾ.ಪಂ. ಮತ್ತು ಕೆನರಾ ಬ್ಯಾಂಕ್ ವತಿಯಿಂದ ಜನ ಸುರಕ್ಷಾ ಸಂಪೂರ್ಣತಾ ಅಭಿಯಾನ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಿಣಿಯಲ್ಲಿ ಶ್ರೀಮತಿ ಆಶಾಲತಾಪ್ರಶಾಂತ್ ರವರ ಕೈ ಚಳಕದಲ್ಲಿ ಮೂಡಿ ಬಂದ ಆಪರೇಷನ್ ಸಿಂಧೂರ ಅದ್ಭುತ ರಂಗೋಲಿ

Suddi Udaya

ಅನುಗ್ರಹ ಪದವಿಪೂರ್ವ ಕಾಲೇಜಿಗೆ ಶೇ.94 ಫಲಿತಾಂಶ

Suddi Udaya
error: Content is protected !!