November 14, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಪಿಲಿಗೂಡು – ಉಪ್ಪಿನಂಗಡಿ ರಸ್ತೆ ಅವ್ಯವಸ್ಥೆ: ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ

ಬೆಳ್ತಂಗಡಿ: ಕಳೆದ ಮೂರ್ನಾಲ್ಕು ವರ್ಷಗಳಿಂದ ತೀವ್ರ ಅವ್ಯವಸ್ಥೆಗೊಂಡಿರುವ ಗುರುವಾಯನಕೆರೆ – ಉಪ್ಪಿನಂಗಡಿಯ ರಾಜ್ಯ ಹೆದ್ದಾರಿಯ, ಪಿಲಿಗೂಡು-ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆಗೆ ಶೀಘ್ರವಾಗಿ ಸಂಪೂರ್ಣ ಡಾಮರೀಕರಣ ಮಾಡಲು ಒತ್ತಾಯಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯು ಭೇಟಿ ನೀಡಿ ಮಾತುಕತೆ ನಡೆಸಿತು.

ಕಳೆದ ವಾರ ನೂರಾರು ನಾಗರಿಕರ ಉಪಸ್ಥಿತಿಯಲ್ಲಿ ನಡೆದ ಪ್ರತಿಭಟನೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಜಾತಿ ಧರ್ಮ ಪಕ್ಷ ಭೇದವಿಲ್ಲದೆ ಸರ್ವ ನಾಗರಿಕರು ರಸ್ತೆ ಅವ್ಯವಸ್ಥೆಯಿಂದ ಆಕ್ರೋಷಿತರಾಗಿದ್ದು, ರಸ್ತೆ ಬಂದ್ ಮಾಡಲು ಮುಂದಾಗಿದ್ದಾರೆ. ಅಂದು ನಡೆದ ಪ್ರತಿಭಟನೆಯಲ್ಲಿ ರಸ್ತೆ ಕಾಮಗಾರಿ ಆರಂಭಿಸಲು ನ.16 ರ ಗಡುವು ನೀಡಲಾದ ಬಗ್ಗೆಯೂ, 17 ರಂದು ಸಂಪೂರ್ಣ ರಸ್ತೆ ಬಂದ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಇದೇ ವೇಳೆ ಚರ್ಚಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ರಸ್ತೆ ಅವ್ಯವಸ್ಥೆಯಿಂದ ರೋಸಿ ಹೋದ ಜನ ಸಾಮಾನ್ಯರಿಗೆ ರಸ್ತೆ ಬಂದ್ ನಿಂದ ಮತ್ತಷ್ಟು ಸಮಸ್ಯೆ ತಲೆದೋರುವ ಕಾರಣ ಬಂದ್ ಕೈ ಬಿಡುವ ಬಗ್ಗೆ ಆಲೋಚಿಸಲು ನಿಯೋಗದೊಂದಿಗೆ ಸೂಚಿಸಿದರು. ತಕ್ಷಣವೇ ಕಾಮಗಾರಿ ಪ್ರಾರಂಭಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಮಾಡುವುದಾಗಿಯೂ ತಿಳಿಸಿದರು.

ಜಿಲ್ಲಾಧಿಕಾರಿ ಭೇಟಿ ಬಳಿಕ ಹೇಳಿಕೆ ನೀಡಿದ ನಾಗರಿಕ ಹೋರಾಟ ಸಮಿತಿ ನಾಯಕರು, ರಸ್ತೆಯ ಶೀಘ್ರವಾದ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಸಂಪೂರ್ಣ ಅವ್ಯವಸ್ಥೆಗೊಂಡ ರಸ್ತೆಯ ಗಂಭೀರತೆಯ ಬಗ್ಗೆ ಮಾಹಿತಿ ನೀಡಿದ್ದೇವೆ. ಇದೀಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಲಭಿಸಿದ ಮಾಹಿತಿಯಂತೆ, ನಾಗರಿಕ ಹೋರಾಟ ಸಮಿತಿಯು ನೀಡಿದ ನ.16 ರ ಗಡುವಿನಂದೇ ಡಾಮರೀಕರಣ ಆರಂಭವಾಗಲಿದೆ. ಅಲ್ಲದೆ ಶೀಘ್ರವಾಗಿ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಇಲಾಖೆಯ ಸಚಿವರನ್ನು ನಾಗರಿಕ ಹೋರಾಟ ಸಮಿತಿಯು ಭೇಟಿ ನೀಡಿ ಮಾತುಕತೆ ನಡೆಸಲಿದ್ದೇವೆ.

ನಿಯೋಗದಲ್ಲಿ ನಾಗರಿಕ ಹೋರಾಟ ಸಮಿತಿ ಉಪಾಧ್ಯಕ್ಷ ಅಬ್ದುಲ್‌ ರಹಿಮ್ಮಾನ್ ಬಂಡಸಾಲೆ ಕುಪ್ಪೆಟ್ಟಿ, ಪ್ರಧಾನ ಕಾರ್ಯದರ್ಶಿ ಎನ್.ಎಂ. ಶರೀಫ್ ಸಖಾಫಿ ನೆಕ್ಕಿಲ್, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಬಿ ಮುಹಮ್ಮದ್ ಅಲೀ ತುರ್ಕಳಿಕೆ, ಸಂಚಾಲಕ ಅಬ್ದುಲ್‌ ರಹಿಮ್ಮಾನ್ ಪದ್ಮುಂಜ, ಖಾಸಗಿ ಬಸ್ ಮಾಲಕ ಚಾಲಕ ಸಂಘದ ಜಿಲ್ಲಾ ಕೋಶಾಧಿಕಾರಿ ಇಲ್ಯಾಸ್ ಕರಾಯ, ಭೀಮ್ ಆರ್ಮಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷ ಅಣ್ಣು, ಸಾಧನ ಪದ್ಮುಂಜ ಮೊದಲಾದವರು ಉಪಸ್ಥಿತರಿದ್ದರು.

Related posts

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಶ್ರವಣ್ ನೇಮಕ

Suddi Udaya

ಮೇ 3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

Suddi Udaya

ಕುಕ್ಕೇಡಿ: ಶ್ರೀಮತಿ ಲಲಿತಾ ನಿಧನ

Suddi Udaya

ನ್ಯಾಯತರ್ಪು ಕಲಾಯಿದೊಟ್ಟು ನಲ್ಲಿ ಧರೆ ಕುಸಿತ: ಇನ್ನಷ್ಟು ಧರೆ ಕುಸಿಯುವ ಭೀತಿ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ ಜೋಶನ್‌ ರಫಾಯೆಲ್‌ ಡಿಸೋಜ ರಿಗೆ ಮಡಂತ್ಯಾರು ಸೇಕ್ರೆಡ್‌ ಹಾಟ್‌೯ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನ

Suddi Udaya

ಅಕ್ರಮ ಮರಳು ಸಾಗಾಟ: ವಾಹನ ಚಾಲಕನಿಗೆ ನ್ಯಾಯಾಂಗ ಬಂಧನ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!