November 14, 2026
ಪ್ರಮುಖ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಶ್ರೀ ಸ್ಟಾರ್ ಯುವಕ ಮಂಡಲ ಮತ್ತು ಶ್ರೀ ಸ್ಟಾರ್ ಮಹಿಳಾ ಮಂಡಲ ಪಣೆಜಾಲು ಆಶ್ರಯದಲ್ಲಿ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ದೀಪಾವಳಿ ಆಚರಣೆ

ಬೆಳ್ತಂಗಡಿ: ಶ್ರೀ ಸ್ಟಾರ್ ಯುವಕ ಮಂಡಲ ಮತ್ತು ಶ್ರೀ ಸ್ಟಾರ್ ಮಹಿಳಾ ಮಂಡಲ, ಪಣೆಜಾಲು ಇವರ ಸಂಯುಕ್ತ ಆಶ್ರಯದಲ್ಲಿ ಈ ಬಾರಿಯ ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ನ.11ರಂದು ಮಧ್ಯಾಹ್ನ ಉಜಿರೆಯಲ್ಲಿರುವ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ (ಎಂಡೋಸಲ್ಫಾನ್ ಪೀಡಿತ ಮಕ್ಕಳಿಗಾಗಿ) ಮಕ್ಕಳಿಗೆ ಸಂಘದ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಮಕ್ಕಳೊಂದಿಗೆ ಆತ್ಮೀಯವಾಗಿ ಸಮಯ ಕಳೆದು, ಅವರೊಂದಿಗೆ ದೀಪಾವಳಿಯ ಸಂಭ್ರಮವನ್ನು ಹಂಚಿಕೊಂಡರು.

ಇದರ ಜೊತೆಗೆ, ದೀಪಾವಳಿ ಪಾಡ್ಯದ ದಿನ ನಾಗಚಾವಡಿ ಗುಂಪಲಾಜೆಯಲ್ಲಿ 1008 ಹಣತೆಗಳನ್ನು ಬೆಳಗಿಸುವ ಮೂಲಕ ಹಬ್ಬಕ್ಕೆ ವಿಶೇಷ ಮೆರುಗು ನೀಡಲಾಯಿತು. ಸುಡುಮದ್ದು ಪ್ರದರ್ಶನದೊಂದಿಗೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಲ್ಲದೆ, ಸ್ಥಳೀಯ ಅಶಕ್ತ ಹಾಗೂ ಬಡ ಕುಟುಂಬಗಳಿಗೆ ದಿನಬಳಕೆಯ ಅಗತ್ಯ ಆಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ಮತ್ತು ಮಾನವೀಯತೆಯನ್ನು ಮೆರೆದರು.

ಹಬ್ಬದ ಸಂಭ್ರಮದ ಜೊತೆಗೆ ಸಮಾಜಮುಖಿ ಕಾರ್ಯಗಳ ಮೂಲಕ ದೀಪಾವಳಿಯ ನಿಜವಾದ ಆಶಯವಾದ ಸಂತೋಷ, ಪ್ರೀತಿ, ಸಹಬಾಳ್ವೆ ಮತ್ತು ಸೇವಾ ಮನೋಭಾವವನ್ನು ಸಾರುವಲ್ಲಿ ಎರಡೂ ಸಂಘಟನೆಗಳು ಯಶಸ್ವಿಯಾದವು.

Related posts

ಧರ್ಮಸ್ಥಳ ಬುರುಡೆ ಪ್ರಕರಣ: ಚಿನ್ನಯ್ಯನಿಗೆ ಜೀವ ಬೆದರಿಕೆ ಹಿನ್ನೆಲೆ ರಕ್ಷಣೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ

Suddi Udaya

ಕನ್ಯಾಡಿ: ಶ್ರೀರಾಮ ತಾರಕ ಮಂತ್ರ‌ ಸಪ್ತಾಹದಲ್ಲಿ ಭಾಗವಹಿಸಿದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ

Suddi Udaya

ವೇಣೂರು: ನಿಟ್ಟಡೆ ಕುಂಭಶ್ರೀ ಶಿಕ್ಷಣ ಸಂಸ್ಥೆಗೆ ‘ಶಿಕ್ಷಣ ಭೀಷ್ಮ ಪ್ರಶಸ್ತಿ’ಯ ಗರಿ

Suddi Udaya

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರಕ್ಕೆ ಎನ್.ಎಸ್.ಎಸ್ ಸ್ವಯಂ ಸೇವಕರ ಭೇಟಿ

Suddi Udaya

ಉಜಿರೆ: ಎಸ್.ಡಿ.ಎಂ ಪ ಪೂ ಕಾಲೇಜಿನಲ್ಲಿ ಆಟಿದ ಗೌಜಿ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾಸಿಕ ಸಭೆ

Suddi Udaya
error: Content is protected !!