ನಿಡ್ಲೆ: ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಬೃಹತ್ ಪ್ರತಿಭಟನೆಯು ನಿಡ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಲೆ ಪೇಟೆಯಲ್ಲಿ ನ.13ರಂದು ಜರುಗಿತು.
ಶಾಸಕ ಹರೀಶ್ ಪೂಂಜ, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ತಾಲೂಕು ಎಸ್. ಟಿ. ಮೋರ್ಚಾ ಅಧ್ಯಕ್ಷ ರಾಜೇಶ್ ರವರು ಸರಕಾರದ ಆಡಳಿತ ವಿರೋಧಿ ನೀತಿಗಳ ವಿರುದ್ಧ ಮಾತನಾಡಿದರು. ವೇದಿಕೆಯಲ್ಲಿ ನಿಡ್ಲೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ನವೀನ್ ಗಾಂತ್ರಡ, ಮನ್ ಕೀ ಬಾತ್ ಜಿಲ್ಲಾ ಸಂಚಾಲಕ ಸೀತಾರಾಮ್ ಬೆಳಾಲ್, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೊಯಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಡ್ಲೆ ಸಹಕಾರಿ ಸಂಘದ ನಿರ್ದೇಶಕಿ ಗಾಯತ್ರಿ ಹೆಚ್. ಗೌಡ ವಂದೇ ಮಾತರಂ ಹಾಡಿದರು. ದೇವಿಪ್ರಸಾದ್ ಸುರ್ಯತ್ತಾವು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ಬಿಜೆಪಿ ಕಾರ್ಯಕರ್ತ ಮೋನಪ್ಪ ಗೌಡ ಬೂಡುಜಾಲು ಕಾರ್ಯಕ್ರಮ ನಿರೂಪಿಸಿದರು. ನಿಡ್ಲೆ ಗ್ರಾಮದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ನಂತರ ಪಂಚಾಯತ್ ಕಾರ್ಯದರ್ಶಿ ಮೂಲಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆಯವರಿಗೆ ಮನವಿಯನ್ನು ಕಳುಹಿಸಲಾಯಿತು.















