November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ದಯಾ ವಿಶೇಷ ಶಾಲೆಯಲ್ಲಿ ದೀಪಾವಳಿ ಆಚರಣೆ

ಬೆಳ್ತಂಗಡಿ: ಲಾಯಿಲದ ದಯಾ ವಿಶೇಷ ಶಾಲೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮ, ಸಡಗರ ಹಾಗೂ ಅರ್ಥಪೂರ್ಣ ಸಂದೇಶದೊಂದಿಗೆ ಆಚರಿಸಲಾಯಿತು.

ಶಾಲಾ ಸಹ ನಿರ್ದೇಶಕವಂ. ಫಾ. ರೋಹನ್ ಲೋಬೋ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ “ಕತ್ತಲೆಯಲ್ಲಿದ್ದ ವಿಶೇಷ ಚೇತನ ಮಕ್ಕಳ ಬದುಕಿನಲ್ಲಿ ಬೆಳಕನ್ನು ಮೂಡಿಸುವ ಕಾರ್ಯವನ್ನು ದಯಾ ವಿಶೇಷ ಶಾಲೆ ಮಾಡುತ್ತಿದೆ. ಮಾತನಾಡಲು, ನಡೆಯಲು ಹಾಗೂ ಕಲಿಯಲು ಕಷ್ಟಪಡುತ್ತಿದ್ದ ಮಕ್ಕಳ ಬದುಕಿನಲ್ಲಿ ಶಿಕ್ಷಣ, ತರಬೇತಿ ಮತ್ತು ಪ್ರೀತಿಯ ಮೂಲಕ ಹೊಸ ಭರವಸೆಯನ್ನು ಮೂಡಿಸುತ್ತಿದೆ. ದೀಪಾವಳಿ ಕೇವಲ ದೀಪಗಳ ಹಬ್ಬವಲ್ಲ, ಅದು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಹಬ್ಬ. ಅದೇ ರೀತಿ ಸಮಾಜದಲ್ಲಿನ ಕತ್ತಲೆಯಲ್ಲಿರುವ ವಿಶೇಷ ಮಕ್ಕಳ ಬದುಕಿನಲ್ಲಿಯೂ ಜ್ಞಾನದ ಬೆಳಕು, ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಬೆಳಕು ಮೂಡಬೇಕು” ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಫಾ. ವಿನೋದ್ ಮಸ್ಕರೇನ್ಹಸ್ ಮಾತನಾಡಿ, ವಿಶೇಷ ಮಕ್ಕಳು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳಿಗೆ ಪ್ರೀತಿ, ಸಹಕಾರ ಹಾಗೂ ಸೂಕ್ತ ಅವಕಾಶಗಳನ್ನು ನೀಡಿದಾಗ ಅವರು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಆತ್ಮವಿಶ್ವಾಸದಿಂದ ಬದುಕಲು ಸಾಧ್ಯ ಎಂದು ತಿಳಿಸಿದರು.ದೀಪಾವಳಿಯು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಾರುವ ಹಬ್ಬವಾಗಿದ್ದು, ಪ್ರತಿಯೊಬ್ಬರ ಮನದಲ್ಲೂ ಪ್ರೀತಿ, ಶಾಂತಿ, ಸಹಬಾಳ್ವೆ ಮತ್ತು ಮಾನವೀಯತೆಯ ದೀಪ ಬೆಳಗಲಿ ಎಂದು ಶುಭ ಹಾರೈಸಿದರು

ಇದೇ ಸಂದರ್ಭದಲ್ಲಿ ವಿಶೇಷ ಮಕ್ಕಳ ಮುಖದಲ್ಲಿ ನಗು ಮೂಡಿಸುವುದು, ಅವರ ಬದುಕಿಗೆ ಭರವಸೆ ನೀಡುವುದು ಮತ್ತು ಅವರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವುದು ನಿಜವಾದ ದೀಪಾವಳಿ ಆಚರಣೆಯಾಗಿದೆ ಎಂಬ ಸಂದೇಶವನ್ನು ಸಾರಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ದೀಪಾವಳಿ ಹಬ್ಬದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳಿಂದ ತಯಾರಿಸಲಾದ ಆಕರ್ಷಕ ದೀಪಗಳು ಮತ್ತು ಕರಕುಶಲ ವಸ್ತುಗಳು ಎಲ್ಲರ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರು ವಂ.ಫಾ.ವಿನೋದ್ ,ಸಹ ನಿರ್ದೇಶಕರು ವಂ.ಫಾ.ರೋಹನ್ ಲೋಬೋ,ಮುಖ್ಯ ಶಿಕ್ಷಕಿ ದಿವ್ಯ ಟಿ.ವಿ ,ಹಾಗೂ ಮಕ್ಕಳ ಪ್ರತಿನಿದಿಯಾಗಿ ಶಾಲಾ ವಿದ್ಯಾರ್ಥಿ ವಿನುತ್ ರವರು ವೇದಿಕೆಯಲ್ಲಿ ಉಪಸ್ಧಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ,ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದವನ್ನು ಶಾಲಾ ಶಿಕ್ಷಕಿಯಾದ ಸುಮನಶ್ರೀ ಯವರು ನೆರವೇರಿಸಿದರು.

“ಪ್ರತಿಯೊಂದು ಮಗುವಿನ ಬದುಕಿನಲ್ಲೂ ಬೆಳಕು ಮೂಡಲಿ, ಪ್ರತಿಯೊಂದು ಮನದಲ್ಲೂ ಮಾನವೀಯತೆ ಬೆಳಗಲಿ” ಎಂಬ ಆಶಯದೊಂದಿಗೆ ದೀಪಾವಳಿ ಆಚರಣೆ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

Related posts

ಕಳಿಯ: ಗೋವಿಂದೂರು ಶಾಲಾ ಬಳಿಯ ಗುಡ್ಡಕ್ಕೆ ಬೆಂಕಿ

Suddi Udaya

ಲಯನ್ಸ್ ಕ್ಲಬ್ ನಲ್ಲಿ “ಕ್ಲಬ್ ಕ್ವಾಲಿಟಿ ಇನೀಶಿಯೇಟಿವ್” ಕಾರ್ಯಾಗಾರ

Suddi Udaya

ಉದ್ಯಮಿ ರಾಜೇಶ್ ಪೈ ಅವರಿಗೆ “ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ” ಪ್ರದಾನ

Suddi Udaya

ಅಂಡಿಂಜೆಯಲ್ಲಿ ಉಚಿತ ಕಣ್ಣಿನ ಶಿಬಿರ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

Suddi Udaya

ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!