November 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಗ್ರಾಮದಲ್ಲಿ 374 ಅಸಹಜ ಸಾವು ಪ್ರಕರಣವನ್ನು 1,510 ಪ್ರಕರಣ ಎಂದು ಸುಳ್ಳು ಮಾಹಿತಿ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು; ಇದು ಕೇವಲ ಧರ್ಮಸ್ಥಳ ಗ್ರಾಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ ಎಂಬ ಸತ್ಯವನ್ನು ಸರ್ಕಾರ ಸ್ಪಷ್ಟಪಡಿಸಬೇಕು, ಧರ್ಮಸ್ಥಳ ಗ್ರಾಮವನ್ನು ಕೆಟ್ಟ ಊರು ಶ್ರೀ ಕ್ಷೇತ್ರವನ್ನು ತಪ್ಪು ಕೆಲಸಗಳು ನಡೆಯುವ ಸ್ಥಳವೆಂದು ಬಿಂಬಿಸುವುದನ್ನು‌ ತಡೆಯಬೇಕು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿಯಿಂದ ಸರ್ಕಾರಕ್ಕೆ ತಪ್ಪು ಮಾಹಿತಿ-ಪತ್ರಿಕಾಗೋಷ್ಠಿಯಲ್ಲಿ ಧಮ೯ಸ್ಥಳ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಆರೋಪ

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ 1,510 ಅಸಹಜ ಸಾವುಗಳು (ಯುಡಿಆರ್) ಆಗಿವೆ ಎಂಬ ಸುಳ್ಳು ಮಾಹಿತಿಯನ್ನು ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಜಯಂತ್ ಟಿ. ಹಾಗೂ ಅವರ ಸಂಗಡಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾವು ಆರ್.ಟಿ.ಐ ತೆಗೆದ ಮಾಹಿತಿಯಲ್ಲಿ 374 ಅಸಹಜ ಸಾವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿ ಜನರಲ್ಲಿ ತಪ್ಪು ಮಾಹಿತಿ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯಿಸುತ್ತಿದ್ಧೇವೆ ಎಂದು ಧರ್ಮಸ್ಥಳ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹೇಳಿದರು.

ಅವರು ನ. 14ರಂದು ಧಮ೯ಸ್ಥಳ ಮಹೋತ್ಸವ ಸಭಾ‌ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ನಾವು ಧರ್ಮಸ್ಥಳ ಗ್ರಾಮದ ನಿವಾಸಿಗಳು. ನಮ್ಮ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ವರ್ಷಂಪ್ರತಿ ಲಕ್ಷಾಂತರ ಭಕ್ತರು ಬರುತ್ತಾರೆ. ನಮ್ಮ ಬದುಕು ಹಾಗೂ ನಂಟು ಶ್ರೀ ಕ್ಷೇತ್ರದೊಂದಿಗೆ ಭಕ್ತಿಪೂರ್ವಕವಾಗಿ ಬೆಸೆದುಕೊಂಡಿವೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ಗಿರೀಶ್ ಮಟ್ಟಣ್ಣವ‌ರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ. ಹಾಗೂ ಅವರ ಸಂಗಡಿಗರು “2000 ರಿಂದ 2014 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 1,510 ಅಸಹಜ ಸಾವುಗಳು (UDR) ಆಗಿವೆ” ಎಂದು ಸುಳ್ಳನ್ನೇ ಹೇಳುತ್ತಾ ಬಂದಿದ್ದಾರೆ.

ಶ್ರೀ ಕ್ಷೇತ್ರದ ಸುತ್ತಮುತ್ತ ಸಾವಿರಾರು ಅತ್ಯಾಚಾರ ಮತ್ತು ಕೊಲೆಗಳು ನಡೆದಿವೆ ಎಂದು ಬಿಂಬಿಸಿ ಪ್ರಚಾರ ಪಡೆದಿದ್ದಾರೆ. ಇವರ ಈ ಆರೋಪಗಳಿಂದಾಗಿ ನಮ್ಮ ಧರ್ಮಸ್ಥಳ ಗ್ರಾಮವನ್ನು ಒಂದು ಕೆಟ್ಟ ಊರು ಎಂಬಂತೆ, ನಮ್ಮ ಗ್ರಾಮದಲ್ಲಿರುವ ಶ್ರೀ ಕ್ಷೇತ್ರವನ್ನು ತಪ್ಪು ಕೆಲಸಗಳು ನಡೆಯುವ ಸ್ಥಳವೆಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದ ಗ್ರಾಮದ ಪ್ರತಿಯೊಬ್ಬ ನಿವಾಸಿಯ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದರು.

ಈ ಬುರುಡೆ ಗ್ಯಾಂಗ್‌ನ ಸದಸ್ಯರು ವಿವಿಧ ಕಚೇರಿಗಳು, ಆಯೋಗಗಳು ಹಾಗೂ ನ್ಯಾಯಾಲಯಗಳಿಗೆ ಹೋಗಿ ಅದೇ ಸುಳ್ಳು ಮಾಹಿತಿಯೊಂದಿಗೆ ದೂರು ನೀಡುತ್ತಾ, ಅದನ್ನು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯನ್ನಾಗಿ ಮಾಡುತ್ತಿದ್ದಾರೆ. ಇದನ್ನೇ ತಮ್ಮ ಬಂಡವಾಳ ಮಾಡಿಕೊಂಡು ಶ್ರೀ ಕ್ಷೇತ್ರದ ವಿರುದ್ಧ ಮತ್ತು ನಮ್ಮ ಗ್ರಾಮದ ವಿರುದ್ಧ ಷಡ್ಯಂತ್ರ ರೂಪಿಸಿಕೊಂಡೇ ಬಂದಿದ್ದಾರೆ.

ಸತ್ಯ ಸಂಗತಿ ಏನೆಂದರೆ, ಮಾಹಿತಿ ಹಕ್ಕು ಅಧಿನಿಯಮದಡಿ ನಾವು ಪಡೆದ ಮಾಹಿತಿಯಂತೆ 2000 ರಿಂದ 2014 ರವರೆಗೆ ಶ್ರೀ ಕ್ಷೇತ್ರದ ಅಂದರೆ ಧರ್ಮಸ್ಥಳ ಮತ್ತು ಸುತ್ತಮುತ್ತ ಆಗಿರುವ ಅಸಹಜ ಸಾವುಗಳ ಸಂಖ್ಯೆ 374 ಎಂದು ನೀಡಿದ್ದಾರೆ.

ಅದರಲ್ಲಿ ಇವರು ಹೇಳುವ ಸಂಖ್ಯೆ ಇಡೀ ಬೆಳ್ತಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸಂಬಂಧಿಸಿದ್ದು, ಕೇವಲ ಧರ್ಮಸ್ಥಳ ಗ್ರಾಮಕ್ಕೆ ಸಂಬಂಧಿಸಿದ್ದಲ್ಲ. ವರ್ಷಂಪ್ರತಿ ಲಕ್ಷಾಂತರ
ಜನರು ಬರುವ ನಮ್ಮ ಕ್ಷೇತ್ರಕ್ಕೆ ಅನೇಕ ಮನಸ್ಥಿತಿಯ ಜನರು, ವಯೋವೃದ್ದರು, ಭಿಕ್ಷುಕರು ಹಾಗೂ ನಿರ್ಗತಿಕರು ಬರುವುದು ಸಹಜ. ಇಂತಹ ಸಾವುಗಳು ದೇಶಾದ್ಯಂತ ಎಲ್ಲಾ ತೀರ್ಥಕ್ಷೇತ್ರಗಳಲ್ಲೂ ಸಂಭವಿಸುತ್ತವೆ.

ಇಂತಹದೇ ಸುಳ್ಳು ಮಾಹಿತಿಯೊಂದಿಗೆ ಈ ಗ್ಯಾಂಗ್ ಮೇ 2025 ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದಾಗ, ನ್ಯಾಯಾಲಯವು ಅವರ ಅರ್ಜಿಯನ್ನು “Paisa Interest Litigation” (ಹಣದ ಉದ್ದೇಶದ ಅರ್ಜಿ) ಎಂದು ಛೀಮಾರಿ ಹಾಕಿತ್ತು. ನಂತರ ಸರ್ವೋಚ್ಚ ನ್ಯಾಯಾಲಯದ ಈ ಆದೇಶವನ್ನು ಮರೆಮಾಚಿ, ತಪ್ಪು ಮಾಹಿತಿ ನೀಡಿ ರಾಜ್ಯಸರ್ಕಾರ ವಿಶೇಷ ತನಿಖಾ ತಂಡ (SIT) ರಚನೆಯಾಗುವಂತೆ ಮಾಡಲಾಯಿತು. SIT ತನಿಖೆಯಲ್ಲಿ ಈ ಗ್ಯಾಂಗ್‌ನ ಸುಳ್ಳು. ಬಯಲಾಗಿದ್ದು, ಅವರ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ಯಾವ ಯಾವ ಕಲಂ ಗಳಡಿ ಪ್ರಕರಣ ದಾಖಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನೂ SIT ನೀಡಿದೆ.

ಇಷ್ಟೆಲ್ಲಾ ಆದರೂ ಇದೇ ಗ್ಯಾಂಗ್ ಮತ್ತೆ ಅದೇ ಕುಕೃತ್ಯಕ್ಕೆ ಇಳಿದಿದೆ. ಗ್ಯಾಂಗ್‌ನ ಪ್ರತಿನಿಧಿಯಾದ ಜಯಂತ್ ಟಿ. ಅವರು ಅದೇ UDR ಸಂಖ್ಯೆಯ ಸುಳ್ಳನ್ನು ಹೇಳಿಕೊಂಡು ಧರಣಿ ನಡೆಸಲು ಮುಂದಾಗಿದ್ದಾರೆ. ಅದಕ್ಕಾಗಿ ರಾಜಕೀಯ ನಾಯಕರ ಭಾವಚಿತ್ರಗಳನ್ನು ಬಳಸಿಕೊಂಡು ಪಚಾರ ಪಡೆಯುತ್ತಿದ್ದಾರೆ.

ರಾಜ್ಯ ಮಹಿಳಾ ಆಯೋಗದ ಪ್ರಸ್ತುತ ಅಧ್ಯಕ್ಷೆ ಯಾಗಿರುವ ಡಾ ನಾಗಲಕ್ಷ್ಮಿ ಚೌಧರಿ ಯವರು ಇದೇ ಸಂಖ್ಯೆಯನ್ನು ಹೇಳಿಕೊಂಡು, ಜನರಿಗೆ ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದೇ ಆಧಾರದಲ್ಲಿ ಮತ್ತೊಮ್ಮೆ SIT ರಚಿಸಬೇಕೆಂದು ಪತ್ರದ ಮೇಲೆ ಪತ್ರ ಬರೆಯುತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಅಂದರೆ ಕೇವಲ ಧರ್ಮಸ್ಥಳ ಗ್ರಾಮ ಒಂದೇ ಅಲ್ಲ, (ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 81 ಗ್ರಾಮಗಳಿವೆ) ಎಂಬ ಸರಳ ಸತ್ಯವನ್ನೂ ಪರಿಗಣಿಸದೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಈ ಸಂಖ್ಯೆಯನ್ನು ಯಾವ ಮೂಲದಿಂದ ಪಡೆದು ಬಳಸಲಾಗುತ್ತಿದೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಕುಮಾರಿ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಗ್ರಾಮಸ್ಥರ ಒಕ್ಕೊರಲ ಆಗ್ರಹ. ಈ ಬಗ್ಗೆ ಮೊದಲು ನಿಸ್ವಾರ್ಥ ಹೋರಾಟ ನಡೆಸಿದ್ದು ನಾವೇ. ಬಳಿಕ ಬಂದ ಬುರುಡೆ ಗ್ಯಾಂಗ್ ಈ ಹೋರಾಟವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿದೆ. ಇಂದು ಸೌಜನ್ಯಳ ತಾಯಿ ಶ್ರೀಮತಿ ಕುಸುಮಾವತಿ ಅವರನ್ನು ಮುಂದಿಟ್ಟುಕೊಂಡು ನ್ಯಾಯಾಲಯಗಳಲ್ಲಿ ತಪ್ಪು ಮಾಹಿತಿ ನೀಡಿ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ಸಲ್ಲಿಸಲಾಗಿದೆ.

ಈ ಸುಳ್ಳು ಪ್ರಚಾರದಿಂದ ಧರ್ಮಸ್ಥಳ ಗ್ರಾಮಸ್ಥರಿಗೆ ಹಾಗೂ ಊರಿನ ಹೆಸರಿಗೆ ಕಳಂಕ ಬರುವಂತಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರು ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಸುಳ್ಳನ್ನು ಪಸರಿಸುವವರ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.
ನಮ್ಮ ಆಗ್ರಹಗಳು:

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಸ್ಥಳ ಗ್ರಾಮದ ಬಗ್ಗೆ ಸುಳ್ಳು ಮಾಹಿತಿ ಪಸರಿಸುತ್ತಿರುವ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ. ಹಾಗೂ ಅವರ ಸಂಗಡಿಗರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು.
ಅದೇ ಸುಳ್ಳು ಸಂಖ್ಯೆಯನ್ನು ಹೇಳಿಕೊಂಡು ನಡೆಸಲು ಉದ್ದೇಶಿಸಿರುವ ಧರಣಿಯ ಹಾಗೂ ಸಾಮಾಜಿಕಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. 1,510 ಸಂಖ್ಯೆ ಕೇವಲ ಧರ್ಮಸ್ಥಳ ಗ್ರಾಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ ಎಂಬ ಸತ್ಯವನ್ನು ಸರ್ಕಾರ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು.

ಮಹಿಳಾ ಆಯೋಗದ ಅಧ್ಯಕ್ಷರು ಬಳಸಿರುವ ಸಂಖ್ಯೆಯ ಮೂಲದ ಬಗ್ಗೆ ಸ್ಪಷ್ಟಿಕರಣ ಪಡೆಯಬೇಕು ಹಾಗೂ ಮತ್ತೊಮ್ಮೆ SIT ರಚಿಸಬೇಕೆಂಬ ಅವರ ಮನವಿ ಪೂರ್ವನಿಯೋಜಿತ ಷಡ್ಯಂತ್ರ ಎಂಬುದಾಗಿ ಭಾಸವಾಗುತ್ತಿದ್ದು, ಮಾನ್ಯ ಸರ್ಕಾರ ಈ ಬಗ್ಗೆ ಗಮನಹರಿಸಬೇಕು.
ನಮ್ಮ ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಗ್ರಾಮಸ್ಥರ ಅಹವಾಲು ಆಲಿಸಬೇಕು.

ನಮ್ಮ ಊರಿನ ಹೆಸರು ಹಾಗೂ ಶ್ರೀ ಕ್ಷೇತ್ರದ ಗೌರವವನ್ನು ಕಾಪಾಡಲು ತಾವುಗಳು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುಬೇಕು ಎಂದು ಆಗ್ರಹಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ನ್ಯಾಯವಾದಿ ಕೇಶವ ಬೆಳಾಲ್ , ಭಾಸ್ಕರ್ , ಪ್ರಭಾಕರ ಪೂಜಾರಿ, ರಾಜೇಂದ್ರ ಅಜ್ರಿ , ಸದಾಶಿವ, ದೇವಸ್ಯ ಟಿ, ರತ್ನಾಕರ, ಪ್ರಭಾಕರ ಬೊಲ್ಮ, ಸಂತೋಷ್, ಲಾಲಿಮಣಿ, ಸುವಾಸ್ ಮೊದಲಾದವರು ಉಪಸ್ಥಿತರಿದ್ದರ

Related posts

ಪುದುವೆಟ್ಟು ಗ್ರಾ.ಪಂ. ನಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

Suddi Udaya

ಎಸ್ಸೆಸ್ಸೆಲ್ಸಿ ಇಂಗ್ಲೀಷ್ ಪರೀಕ್ಷೆಯಲ್ಲಿ 25ಮಂದಿ ಗೈರು

Suddi Udaya

ಶಿರ್ಲಾಲು : ಮೊಂಟ ಮೂಲ್ಯ ನಿಧನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಮಧ್ಯಂತರ ಸಮ್ಮೇಳನದಲ್ಲಿ ಸಮಗ್ರ ಪ್ರಶಸ್ತಿ

Suddi Udaya

ನಾಲ್ಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಜನಮಂಗಳ ಯೋಜನೆಯಡಿ ಮಂಜೂರಾದ ವಾಕಿಂಗ್ ಸ್ಟಿಕ್ ಹಸ್ತಾಂತರ

Suddi Udaya

ತಣ್ಣೀರುಪಂತ ಶಾರದಾಂಭ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!