November 16, 2026
ಕ್ರೀಡಾ ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಟೆಕ್ನೋ ಸ್ಕೂಲ್‌ನಲ್ಲಿ ಪ್ರಾಥಮಿಕ ಶಾಲಾ ಕ್ರೀಡಾಕೂಟ: ಕ್ರೀಡೆಗಳು ದೈಹಿಕ ಕ್ಷಮತೆಯನ್ನು ಒದಗಿಸುತ್ತವೆ: ಸುಮಂತ್ ಕುಮಾರ್ ಜೈನ್ ಬಿ

ವೇಣೂರು:ತರಗತಿ ಕೋಣೆಯಲ್ಲಿ ಬೌದ್ಧಿಕ ಬೆಳವಣಿಗೆ ನಡೆದರೆ, ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆ ಆಟದ ಮೈದಾನದಲ್ಲಿ ಸಾಕಾರಗೊಳ್ಳುತ್ತದೆ. ಪರಸ್ಪರ ಸೌಹಾರ್ದತೆಯೊಂದಿಗೆ – ಕ್ರೀಡೆಗಳು ದೈಹಿಕ ಕ್ಷಮತೆಯನ್ನು ಒದಗಿಸುತ್ತವೆ ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಬಿ. ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಎಕ್ಸೆಲ್ ಟೆಕ್ನೋ ಸ್ಕೂಲ್‌ನಲ್ಲಿ ನ 14ರಂದು ನಡೆದ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟವನ್ನು ಉದ್ಘಾಟಿಸಿ,ವಿದ್ಯಾರ್ಥಿಗಳಿಂದ ಕ್ರೀಡಾ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಎಕ್ಸೆಲ್ ಟೆಕ್ನೋ ಸ್ಕೂಲ್‌ನ ಮುಖ್ಯ ಶಿಕ್ಷಕಿ ವಾಣಿ , ಉಪ ಮುಖ್ಯ ಶಿಕ್ಷಕಿ ಕಾವ್ಯಶ್ರೀ ಎನ್, ಎಕ್ಸೆಲ್ ವಿದ್ಯಾ ಸಂಸ್ಥೆಯ ಶಿಕ್ಷಣ ಸಂಯೋಜಕಿ ನಿಶಾ ಹಾಗೂ ಲೆಕ್ಕ ಪರಿಶೋಧನಾ ವಿಭಾಗದ ಮುಖ್ಯಸ್ಥೆ ಶ್ರುತಿ ಉಪಸ್ಥಿತರಿದ್ದರು.

ಸುಷ್ಮಾ ಜೈನ್ ನಿರೂಪಿಸಿ,ವಿದ್ಯಾರ್ಥಿಗಳಾದ ಸಾನ್ವಿ, ಅನ್ವಿತಾ ಮತ್ತು ರಶ್ಮಿತಾ ದೇವಾಡಿಗ ಪ್ರಾರ್ಥಿಸಿದರು. ಶಿಕ್ಷಕಿಯರಾದ ಲತಾಶ್ರೀ ಸ್ವಾಗತಿಸಿ, ಪೂಜಿತಾ ಬಿ.ಕೆ. ಧನ್ಯವಾದವಿತ್ತರು. ಕ್ರೀಡಾ ಮಂತ್ರಿ ಅನ್ವೇಶ್ ಪ್ರಮಾಣ ವಚನ ಬೋಧಿಸಿದರು. ಬಳಿಕ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟ ಮತ್ತು ಪ್ರೌಢ ಶಾಲಾ ವಿಭಾಗದ ಬೆಂಕಿ ರಹಿತ ಅಡುಗೆ ಸ್ಪರ್ಧೆ ಜರುಗಿತು.

ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲಾ ಅಸೆಂಬ್ಲಿಯನ್ನು ಶಿಕ್ಷಕರೇ ನೆರವೇರಿಸಿ, ವಿದ್ಯಾರ್ಥಿಗಳನ್ನು ಪುಷ್ಪಾರ್ಚನೆಯೊಂದಿಗೆ ಬರಮಾಡಿಕೊಂಡರು.

Related posts

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಉಜಿರೆ ಎಸ್ ಡಿ ಎಮ್ ಶಾಲಾ ವಿದ್ಯಾರ್ಥಿ ಕ್ಷಿತಿಜ್ ಶೆಟ್ಟಿ ಕುಮಿಟೆ ಹಾಗು ಕಟಾ ವಿಭಾಗದಲ್ಲಿ ಬೆಳ್ಳಿ ಪದಕ

Suddi Udaya

ನಡ: ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ‘ಸೇವಾ ಭಾರತಿ’ ವತಿಯಿಂದ ಪುಸ್ತಕಗಳ ವಿತರಣೆ

Suddi Udaya

ಬೆಳ್ತಂಗಡಿ: ಶ್ರೀ ಧ.ಆಂ.ಮಾ. ಶಾಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಹಾಗೂ ದುಷ್ಪರಿಣಾಮಗಳ ಬಗ್ಗೆ ಮಾಹಿತಿ

Suddi Udaya

ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ: ಶಿಶಿರ್ ಜಯವಿಕ್ರಮ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಮೇ 1: ಎಸ್.ಡಿ.ಎಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ

Suddi Udaya

ಪುಂಜಾಲಕಟ್ಟೆ  ಕರ್ನಾಟಕ ಪಬ್ಲಿಕ್ ಶಾಲೆ : ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!