November 16, 2026
ಕ್ರೀಡಾ ಸುದ್ದಿ

ಬೆಳ್ತಂಗಡಿ ತಾಲೂಕು ವಲಯ ಮಟ್ಟದ ಬಂಟ ಬಾಂಧವರ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಬೆಳ್ತಂಗಡಿ: ಕ್ರೀಡಾಕೂಟಗಳ ಮೂಲಕ ಯುವಕರನ್ನು ಒಟ್ಟುಗೂಡಿಸಿ ಸಂಘಟನೆಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಕ್ರೀಡೆ ಯುವಕರಲ್ಲಿ ಒಗ್ಗಟ್ಟು, ಸಹಕಾರ ಮತ್ತು ಸಂಘಟನಾ ಮನೋಭಾವವನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿದೆ ಎಂದು ಉದ್ಯಮಿ, ಬೆಳ್ತಂಗಡಿ ಬಂಟರ ಸಂಘದ ಮಾರ್ಗದರ್ಶಕ ಶಶಿಧರ್ ಶೆಟ್ಟಿ ನವಶಕ್ತಿ ಹೇಳಿದರು.

ಅವರು ಬೆಳ್ತಂಗಡಿಯ ಬಂಟರ ಯಾನೆ ನಾಡವರ ಸಂಘ ಹಾಗೂ ಬಂಟರ ಮಹಿಳಾ ವಿಭಾಗದ ಸಹಕಾರದಲ್ಲಿ ಯುವ ಬಂಟರ ವಿಭಾಗದ ವತಿಯಿಂದ ನವಶಕ್ತಿ ಕ್ರೀಡಾಂಗಣದಲ್ಲಿ ನ 15 ಭಾನುವಾರ ನಡೆದ ಬೆಳ್ತಂಗಡಿ ತಾಲೂಕು ವಲಯ ಮಟ್ಟದ ಬಂಟ ಬಾಂಧವರ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ದೇವು ಪೂಂಜ ಟ್ರೋಫಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ವಿಭಾಗ ಕೇವಲ ಕ್ರೀಡಾಕೂಟಗಳಿಗೆ ಅಥವಾ ಬಂಟರ ಸಂಘದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೇ, ಉದ್ಯಮ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದುವ ಮೂಲಕ ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು. ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಇತರ ಸಮಾಜದ ಬಂಧುಗಳಿಗೂ ಸಹಾಯ ಹಸ್ತ ಚಾಚುವ ಕಾರ್ಯವನ್ನು ಮಾಡಬೇಕು.

ಯುವಕರು ಕ್ರೀಡೆ, ಉದ್ಯಮ ಮತ್ತು ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನವಶಕ್ತಿ ಕುಟುಂಬವು ಯುವಕರನ್ನು ಪ್ರೋತ್ಸಾಹಿಸುವ ಹಾಗೂ ಅವರ ಸಾಧನೆಗಳಿಗೆ ಬೆಂಬಲ ನೀಡುವ ಕಾರ್ಯವನ್ನು ಮುಂದುವರಿಸಲಿದೆ ಎಂದು ಶಶಿಧರ್ ಶೆಟ್ಟಿ ನವಶಕ್ತಿ ತಿಳಿಸಿದರು. ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಛ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ವಸುಧ ಪಿ. ಶೆಟ್ಟಿ ಮಾತನಾಡಿ ಯುವಕರ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ , ಉದ್ಯಮಿ ಹರೀಶ್ ಶೆಟ್ಟಿ ನವಶಕ್ತಿ, ವಸಂತ ಶೆಟ್ಟಿ , ಸುರೇಶ್ ಶೆಟ್ಟಿ ಲಾಯಿಲ , ಜಯಂತ ಶೆಟ್ಟಿ ಭಂಡಾರಿಗುಡ್ಡೆ, ರಾಜು ಶೆಟ್ಟಿ ಬೆಂಗೆತ್ಯಾರ್, ಅಖಿಲೇಶ್ ಧರ್ಮಸ್ಥಳ, ಪ್ರದೀಪ್ ಶೆಟ್ಟಿ ವಾತ್ಸಲ್ಯ ಪಾಡ್ಯಾರ್, ವೆಂಕಟರಮಣ ಶೆಟ್ಟಿ ಉಜಿರೆ, ನಾರಾಯಣ ಶೆಟ್ಟಿ ಗುರುವಾಯನಕೆರೆ, ಜಗನ್ನಾಥ ಶೆಟ್ಟಿ ಕರ್ನೊಡಿ, ಪ್ರಶಾಂತ್ ಶೆಟ್ಟಿ ಕರಂಬಾರು ಸುಭಾಶ್ಚಂದ್ರ ರೈ ಪಡ್ಯೊಡಿ,ವಿಠಲ ಶೆಟ್ಟಿ ಕೊಲ್ಲೊಟ್ಟು, ಮಂಜಯ್ಯ ರೈ ಮಡಂತ್ಯಾರ್, ಸ್ವಾತಿ ಶೆಟ್ಟಿ ಸುಲ್ಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಯುವ ವಿಭಾಗದ ಅಧ್ಯಕ್ಷ ಅಜಯ್ ಜೆ ಶೆಟ್ಟಿ ಸ್ವಾಗತಿಸಿದರು, ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ವಲಯಗಳ ಸುಮಾರು 9 ತಂಡಗಳು ಪಾಲ್ಗೊಂಡವು.

Related posts

ರಂಜನ್‌ ಜಿ. ಗೌಡ ನೇತೃತ್ವದ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಕಂಬಳ ಉದ್ಘಾಟನೆ

Suddi Udaya

ವಾಲಿಬಾಲ್ ಪಂದ್ಯಾಟ: ಪದ್ಮುಂಜ ಸರಕಾರಿ ಪ್ರೌಢಶಾಲಾ ಬಾಲಕರ ತಂಡ ಪ್ರಥಮ ಸ್ಥಾನ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ

Suddi Udaya

ವಿಶ್ವ ಹಿಂದೂ ಪರಿಷತ್ ಭಜರಂಗದಳ ಚಾರ್ಮಾಡಿ, ಘಟಕ ಶ್ರೀ ರಾಮ್ ಚಾರ್ಮಾಡಿ ಇದರ ಸಹಭಾಗಿತ್ವದಲ್ಲಿ ಹೊನಲು ಬೆಳಕಿನ ಹಿಂದೂ ಭಾಂಧವರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಬೆಳ್ತಂಗಡಿ ತಾಲೂಕು ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ಆಯ್ಕೆ

Suddi Udaya

ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿಗೆ ಕ್ರೀಡಾ ಪ್ರಶಸ್ತಿ

Suddi Udaya

ಉಜಿರೆ ಎಸ್.ಡಿ.ಎಮ್ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

Suddi Udaya
error: Content is protected !!