November 16, 2026
Uncategorizedಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕಾರು ಸವಾರನಿಗೆ ಎದುರಾದ ಚಿರತೆ: ಲಾಯಿಲದ ಅಗಳಿ ಪರಿಸರದಲ್ಲಿ ನಿರಂತರ ಚಿರತೆ ಸಂಚಾರ ಸ್ಥಳೀಯರಲ್ಲಿ ಆತಂಕ

ಬೆಳ್ತಂಗಡಿ: ಲಾಯಿಲ ಗ್ರಾಮದ ಅಗಳಿ ಎಂಬಲ್ಲಿ ಭಾನುವಾರ ಸಂಜೆ ಕಾರಿನಲ್ಲಿ ತೆರಳುತ್ತಿದ್ದ ಸವಾರನಿಗೆ ರಸ್ತೆ ಮಧ್ಯೆಯೇ ಚಿರತೆ ಎದುರಾದ ಘಟನೆ ನಡೆದಿದೆ.

ಅಗಳಿ ನಿವಾಸಿ ಚೇತನ್ ಹೆಬ್ಬಾರ್ ಅವರು ಭಾನುವಾರ ಸಂಜೆ ಬೆಳ್ತಂಗಡಿಯಿಂದ ತಮ್ಮ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ರಾತ್ರಿ ಸುಮಾರು 7.30ರ ವೇಳೆಗೆ ಮನೆ ಸಮೀಪದ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಏಕಾಏಕಿ ರಸ್ತೆ ಮಧ್ಯದಲ್ಲಿ ಚಿರತೆ ಕಾಣಿಸಿಕೊಂಡಿದೆ. ಕಾರಿನ ಬೆಳಕಿಗೆ ಚಿರತೆ ಗೋಚರಿಸಿದ್ದು, ಕೆಲಕಾಲ ಕಾರು ಸವಾರರಿಗೆ ಆತಂಕದ ಕ್ಷಣ ಎದುರಾಯಿತು. ಬಳಿಕ ಚಿರತೆ ಅಲ್ಲಿಂದ ತೆರಳಿದೆ ಎಂದು ತಿಳಿದುಬಂದಿದೆ.

ನಿರಂತರ ಚಿರತೆ ಓಡಾಟಲಾಯಿಲ ಗ್ರಾಮದ ಅಗಳಿ ಪರಿಸರದಲ್ಲಿ ಕಳೆದ ಹಲವು ಸಮಯಗಳಿಂದ ಚಿರತೆ ಸಂಚಾರ ಕಂಡುಬರುತ್ತಿದೆ. ಆಗಾಗ್ಗೆ ರಾತ್ರಿ ವೇಳೆ ರಸ್ತೆ ಹಾಗೂ ಜನವಸತಿ ಪ್ರದೇಶಗಳ ಸಮೀಪ ಚಿರತೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಭಾಗದಲ್ಲಿ ಮನೆಗಳು, ಕೃಷಿ ತೋಟಗಳು ಹಾಗೂ ಸಂಪರ್ಕ ರಸ್ತೆಗಳಿದ್ದು, ರಾತ್ರಿ ಸಂಚರಿಸುವ ವಾಹನ ಸವಾರರು ಮತ್ತು ಪಾದಚಾರಿಗಳು ಭಯದಿಂದಲೇ ಓಡಾಡುವಂತಾಗಿದೆ.

ಚಿರತೆ ಓಡಾಟದಿಂದ ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆಯೂ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಜನವಸತಿ ಪ್ರದೇಶದ ಸಮೀಪವೇ ವನ್ಯಪ್ರಾಣಿ ಕಾಣಿಸಿಕೊಳ್ಳುತ್ತಿರುವುದರಿಂದ ಯಾವುದೇ ಅನಾಹುತ ಸಂಭವಿಸುವ ಮೊದಲು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನದ ಬಗ್ಗೆ ಪರಿಶೀಲನೆ ನಡೆಸಬೇಕು. ಚಿರತೆಯ ಓಡಾಟದ ಬಗ್ಗೆ ಮಾಹಿತಿ ಸಂಗ್ರಹಿಸುವುದರ ಜತೆಗೆ ಜನರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related posts

ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮ: ಡಾ. ಶಿವಾನಂದ

Suddi Udaya

ಮಳೆಗೆ ಕೊಚ್ಚಿ ಹೋದ ಕಿರು ಸೇತುವೆಗೆ ತಾತ್ಕಾಲಿಕ ರಸ್ತೆ ನಿರ್ಮಾಣ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

31 ವರ್ಷಗಳ ವಿಶ್ವಾಸದ ಪಯಣ: ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ವಿಡಿಯಂ ಸರ್ವಿಸ್ ಕ್ಯಾಂಪ್‌ಗೆ ಚಾಲನೆ

Suddi Udaya

ಮುಂಡಾಜೆ :ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಸರಕಾರಿ ಪ.ಪೂ. ಕಾಲೇಜು ಬೆಳ್ತಂಗಡಿಯ ರಾಜ್ಯ ಪ್ರಶಸ್ತಿ ಪಡೆದ ಪ್ರಾಂಶುಪಾಲರಾದ ಸುಕುಮಾರ್ ರವರಿಗೆ ಅಭಿನಂದನೆ: ವಗಾ೯ವಣೆಗೊಂಡ ಉಪನ್ಯಾಸಕ ಗಣಪತಿ ಭಟ್ ರವರಿಗೆ ಬೀಳ್ಕೊಡುಗೆ

Suddi Udaya
error: Content is protected !!