ನಾವೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಇದರ 2009- 2010ನೇ ಎಸ್ ಎಸ್ ಎಲ್ ಸಿ ಬ್ಯಾಚ್ ನ ವಿದ್ಯಾರ್ಥಿಗಳಿಂದ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆಯಲ್ಲಿ ನ.14ರಂದು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಂದ್ರರವರು ವಹಿಸಿದ್ದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ಜೀವಂಧರ್ ಹೆಗ್ಡೆ ಉದ್ಘಾಟಿಸಿದರು. ವೇದಿಕೆಯಲ್ಲಿ ನಾವೂರು ಆರೋಗ್ಯ ಕ್ಲಿನಿಕ್ ನ ಡಾ. ಪ್ರದೀಪ್, ನಿವೃತ್ತ ಮುಖ್ಯ ಶಿಕ್ಷಕ ರಾದ ಅನಂತ ಪದ್ಮನಾಭ, ದೈಹಿಕ ಶಿಕ್ಷಣ ಶಿಕ್ಷಕ ಪಂಚಾಕ್ಷರಪ್ಪ, ಶಿಕ್ಷಕರಾದ ಬಲಿರಾಮ್ ಲಮಣಿ, ಅಚ್ಚುತ ಗೌಡ, ಅಪ್ಪಾ ಸಾಹೇಬ್ ಪಾಟೀಲ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ನಾಯ್ಕ್, ಪ್ರೌಢಶಾಲೆಯ ಉಪಾಧ್ಯಕ್ಷ ಉಮೇಶ್ ಪ್ರಭು, ಗ್ರಾ.ಪಂ. ಮಾಜಿ ಅಧ್ಯಕ್ಷ ಗಣೇಶ್ ಗೌಡ, ಧರ್ಣಪ್ಪ ಮೂಲ್ಯ, ವೇದಾವತಿ, ಪ್ರಸ್ತುತ ಇರುವ ಹಿ. ಪ್ರಾ. ಶಾಲೆ ಹಾಗೂ ಪ್ರೌಢಶಾಲೆಯ ಶಿಕ್ಷಕವೃಂದ, ವರ್ಗಾವಣೆಗೊಂಡಿರುವ ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿ.ಪ್ರಾ. ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ, ನಿವೃತ್ತಿ ಹೊಂದಿರುವ, ವರ್ಗಾವಣೆಗೊಂಡಿರುವ, ಅಂಗನವಾಡಿ ಶಿಕ್ಷಕರು ಹಾಗೂ ಬಿಸಿಯೂಟ ಸಿಬಂದಿಗಳನ್ನು ಸನ್ಮಾನಿಸಲಾಯಿತು. ಬ್ಯಾಚ್ ನ ಅನ್ಸಾರ್ ಗುರುವಂದನ ಕಾರ್ಯಕ್ರಮ ಆಯೋಜಿಸಿದ ಬಗ್ಗೆ ವಿವರಿಸಿದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಪ್ರದೀಪ್ ಗೌಡ ನಾಗಾಜೆ ಸ್ವಾಗತಿಸಿದರು. ಪೂಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನ್ಯಾಸ್ ಕಾರ್ಯಕ್ರಮ ನಿರೂಪಿಸಿದರು. ನಳಿನಾಕ್ಷ ಧನ್ಯವಾದವಿತ್ತರು. ನಿಧನರಾದ ಬ್ಯಾಚ್ ನ ಮಹಮ್ಮದ್ ಇರ್ಷಾದ್ ರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಹಿ.ಪ್ರಾ. ಶಾಲಾ ವಠಾರದಿಂದ ಸಭೆ ನಡೆಯುವ ಪ್ರೌಢಶಾಲಾ ಮೈದಾನದವರೆಗೆ ಸನ್ಮಾನಗೊಳ್ಳಲಿದ್ದ ಗುರುಗಳನ್ನು ಹಾಗೂ ಅತಿಥಿಗಳನ್ನು ಬ್ಯಾಚ್ ನವರು ಹಾಗೂ ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಯಿತು
ಮಧ್ಯಾಹ್ನ ನಂತರ ಶಾಲಾ ಮಕ್ಕಳು ಹಾಗೂ ಶಿಕ್ಷಕರಿಗೆ ವಿವಿಧ ಚಟುವಟಿಕೆಗಳು ನಡೆಯಿತು.














