November 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ ಪೂರ್ವ ತಯಾರಿ ಬಗ್ಗೆ ಇಲಾಖಾ ಸಮಾಲೋಚನ ಸಭೆ

ಧರ್ಮಸ್ಥಳ: ಭಗವಾನ್ ಶ್ರೀ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ ಜಾತ್ರೋತ್ಸವದ ಪೂರ್ವ ತಯಾರಿ ಸಮಾಲೋಚನ ಸಭೆ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಮಹಾತ್ಮ ಗಾಂಧಿ ಧರ್ಮಸ್ಥಳ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಮಹಾವೀರ ಶೇಬಣ್ಣ ಇವರ ಅಧ್ಯಕ್ಷತೆಯಲ್ಲಿ ಇಲಾಖಾಧಿಕಾರಿಗಳ ಸಭೆ ನಡೆಯಿತು.

ಪ್ರತಿವರ್ಷದಂತೆ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತಾದಿಗಳು ಹಾಗೂ ಯಾತ್ರಾರ್ಥಿಗಳು ಆಗಮಿಸುವ ಕಾರಣ ಮೂಲಭೂತ ಸೌಕರ್ಯ, ಭದ್ರತೆ, ವಾಹನ ಪಾರ್ಕಿಂಗ್, ಇತರ ವ್ಯವಸ್ಥೆಗಳನ್ನು ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ಕ್ಷೇತ್ರದ ಪರವಾಗಿ ಮ್ಯಾನೇಜರ್ ಗಳಾದ ರಾಜೇಂದ್ರ ದಾಸ್ ಹಾಗೂ ದೀಕ್ಷಿತ್ ಇಲಾಖೆಗಳ ಸಹಕಾರ ಕೋರಿದರು.

ಕುಡಿಯುವ ನೀರಿನ ವ್ಯವಸ್ಥೆ, ದಾರಿದೀಪದ ದುರಸ್ತಿ, ರಾಷ್ಟ್ರೀಯ ಹೆದ್ದಾರಿ ಬದಿ ದುರಸ್ತಿಪಡಿಸುವುದು, ಜನಸಂದನಿ ಹಾಗೂ ವಾಹನ ಟ್ರಾಫಿಕ್ ತೊಂದರೆಯಾಗದಂತೆ ಪರ್ಯಾಯ ರಸ್ತೆಗಳನ್ನು ವ್ಯವಸ್ಥೆ ಮಾಡಿಕೊಡುವುದು, ಏಕಬಲಕ್ಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವುದು, ಜನಸಂದನಿ ಪ್ರದೇಶದಲ್ಲಿ ಕಳ್ಳತನ ಪ್ರಕರಣ ತಡೆಗಟ್ಟುವಂತೆ ಕಳ್ಳತನ ಪ್ರಕರಣ ನಿಯಂತ್ರಣ ಮಾಡುವ ಬಗ್ಗೆ ಸಿ ಸಿ ಕ್ಯಾಮೆರಾ ಅಳವಡಿಕೆ, ಬಂದೋಬಸ್ತ್ ಬಗ್ಗೆ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡುವ ಬಗ್ಗೆ, ಜನಸಂದನಿರುವ ರಸ್ತೆ ಬದಿಗಳಲ್ಲಿ ಬೀದಿಬದಿ ಅಂಗಡಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಯಂತ್ರಣ ಮಾಡುವ ಬಗ್ಗೆ, ನಿಗದಿತ ಕಡೆಗಳಲ್ಲಿ ಪೊಲೀಸ್ ಪಾಯಿಂಟ್ ಗಳ ವ್ಯವಸ್ಥೆ, ಯಾತ್ರಾರ್ತಿಗಳಿಗೆ ತೊಂದರೆ ಆಗದಂತೆ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಸುಗಳ ವ್ಯವಸ್ಥೆ ಕಲ್ಪಿಸುವುದು, ವಿದ್ಯುತ್ ತೊಂದರೆ ಆಗದಂತೆ ಹೆಚ್ಚುವರಿ ಸಿಬ್ಬಂದಿಗಳು ವ್ಯವಸ್ಥೆ, ಹೆಚ್ಚುವರಿ ವಿದ್ಯುತ್ ಬಳಕೆ ಬಗ್ಗೆ ವ್ಯವಸ್ಥೆ, ನಿಗದಿತ ಪ್ರದೇಶದಲ್ಲಿ ಆರೋಗ್ಯ ಘಟಕಗಳನ್ನು ಹಾಗೂ ಅಂಬುಲೆನ್ಸ್ ಗಳ ವ್ಯವಸ್ಥೆಯನ್ನು ಕಲ್ಪಿಸುವುದು, ಮಕ್ಕಳ ಮತ್ತು ಮಹಿಳೆ ರಕ್ಷಣೆ ಬಗ್ಗೆ ಇಲಾಖೆಗಳ ಸಹಕಾರ, ದಿನಂಪ್ರತಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಸಾರ್ವಜನಿಕ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗ್ಗೆ ಆರೋಗ್ಯ ಇಲಾಖೆಯಿಂದ ಫಾಗಿಂಗ್ ಮಾಡುವುದು, ಬೋಳಿಯಾರ್ ಮುಳಿಕ್ಕಾರು ಭಾಗದಲ್ಲಿ ಕಾಡಾನೆಗಳ ಹಾವಳಿಯ ಬಗ್ಗೆ ಮುಂಜಾಗ್ರತವಾಗಿ ಅರಣ್ಯ ಇಲಾಖೆಯಿಂದ ಕ್ರಮ, ಮುಂತಾದ ವ್ಯವಸ್ಥೆಗಳ ಬಗ್ಗೆ ಪೂರ್ವ ತಯಾರಿ ಬಗ್ಗೆ ಇಲಾಖೆ ಅಧಿಕಾರಿಗಳ ಜೊತೆ ಸುರಕ್ಷಿತವಾಗಿ ಕಾರ್ಯಕ್ರಮ ನಡೆಸುವ ಬಗ್ಗೆ ಸಮಾಲೋಚನೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಪೊಲೀಸ್ ಉಪ ವರಿಷ್ಠಾಧಿಕಾರಿ ರೋಹಿಣಿ, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ ಎಸ್, ಧರ್ಮಸ್ಥಳ ಗ್ರಾಮ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ, ಧರ್ಮಸ್ಥಳ ಪೊಲೀಸ್ ಉಪ ನಿರೀಕ್ಷಕ ಸಮರ್ಥ್ ಗಾಣಿಗೇರಾ, ಧರ್ಮಸ್ಥಳ ಕೆಎಸ್ಆರ್ಟಿಸಿ ಘಟಕದ ಅಧಿಕಾರಿಗಳಾದ ರೋಷನ್ ವಾಲ್ಟರ್, ಗೋಪಾಲ್, ಧರ್ಮಸ್ಥಳ ಪ್ರಾಥಮಿಕ ಆರೋಗ್ಯದ ವೈದ್ಯಾಧಿಕಾರಿ ಡಾ. ಮಂಜು, ಹಿರಿಯ ಆರೋಗ್ಯ ಅಧಿಕಾರಿ ವೀಣಾ ಕುಮಾರಿ, ಮೆಸ್ಕಾಂ ಇಲಾಖೆ ಅಧಿಕಾರಿ ಅಶೋಕ್ ಜೈನ್, ಗ್ರಾಮ ಆಡಳಿತ ಅಧಿಕಾರಿ ಪೃಥ್ವಿ ರಾಜ್ ಶೆಟ್ಟಿ ಗ್ರಾಮ ಸಹಾಯಕ ಹರೀಶ್ ಕುರ್ಮಾಣಿ, ಉಪವಲಯ ಅರಣ್ಯ ಅಧಿಕಾರಿ ಕಮಲ, ಅರಣ್ಯ ಸಹಾಯಕ ಸದಾನಂದ ಗೌಡ, ಅಗ್ನಿಶಾಮಕ ನಿರೀಕ್ಷಕ ನೀಲಯ್ಯ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ನಾಗವೇಣಿ, ನೀರು ಮತ್ತು ನೈರ್ಮಲ್ಯ ಇಂಜಿನಿಯರ್ ಲಕ್ಷ್ಮಿ, ಗ್ರಾಮ ಪಂಚಾಯತ ಡಾಟಾ ಎಂಟ್ರಿ ಆಪರೇಟರ್ ಗಜಾನನ ಮಂಜಯ್ಯ ದೇವಾಡಿಗ, ಶಿಕ್ಷಣ ಇಲಾಖೆಯ ಸಿಬ್ಬಂದಿಗಳು, ಪೋಲಿಸ್ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಮಾಹಿತಿ ಕಚೇರಿ ಸಿಬ್ಬಂದಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಲಕ್ಷದೀಪೋತ್ಸವ ಜಾತ್ರ ಕಾರ್ಯಕ್ರಮ ಬಂದೋಬಸ್ತ್ ಬಗ್ಗೆ DYSP ರೋಹಿಣಿಯವರು ಮಾರ್ಗದರ್ಶನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಆಡಳಿತ ಅಧಿಕಾರಿ ಮಹಾವೀರ ಶೇಬಣ್ಣನವರು ಸುರಕ್ಷಿತವಾಗಿ ಕಾರ್ಯಕ್ರಮ ನಡೆಸುವ ಬಗ್ಗೆ ಸಹಕಾರ ಕೋರಿದರು,

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ ಸ್ವಾಗತಿಸಿ ಪ್ರಸ್ತಾಪಿಸಿದರು, ಗ್ರಾಮ ಪಂಚಾಯತ್ ಡಾ. ದೇವಿಪ್ರಸಾದ್ ಬೊಲ್ಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಮುಗೇರಡ್ಕ ಶಿರಾಡಿ ದೈವದ ಹುಲಿಬಂಡಿಯ ಮತ್ತು ಪಲ್ಲಕ್ಕಿಯ ಪುರಪ್ರವೇಶ: ಪೆರ್ಲ -ಬೈಪಾಡಿಯಿಂದ ಮುಗೇರಡ್ಕದವರೆಗೆ ವಾಹನ ಜಾಥಾ

Suddi Udaya

ರಾಜ್ಯ ಸರ್ಕಾರ ದ ಜನ ವಿರೋಧಿ ನೀತಿ ಖಂಡಿಸಿ ಚಾರ್ಮಾಡಿ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ರಾಜ್ಯ ಮಟ್ಟದ ಮಹಿಳೆಯರ ನೆಟ್ ಬಾಲ್ ಪಂದ್ಯಾಟ : ಎಸ್.ಡಿ.ಎಂ ತಂಡ ಪ್ರಥಮ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ ಪ್ರಕಾಶ್ ಕುಡ್ವ ನಿಧನ

Suddi Udaya

ತಾಲೂಕು ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿ: ಶ್ರೀ ಧ.ಮಂ. ಆಂ.ಮಾ. ಶಾಲೆಗೆ ಹಲವು ಪ್ರಶಸ್ತಿಗಳು

Suddi Udaya

ಗುರುವಾಯನಕೆರೆ ಶಕ್ತಿನಗರ ಸರ್ಕಲ್ ನಲ್ಲಿ ಮಾಜಿ ಶಾಸಕರು ದಿ. ವಸಂತ ಬಂಗೇರರ ಪುತ್ಥಳಿ ಸ್ಥಾಪನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Suddi Udaya
error: Content is protected !!