November 19, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಮ್ಮ ಪ್ರಶಸ್ತಿಗೆ ಪದ್ಮಲತಾ ಮೋಹನ್ ನಿಡ್ಲೆಯವರ ಕೃತಿ ಸಹಿತ 10 ಸಾಹಿತಿಗಳ ಕೃತಿಗಳು ಆಯ್ಕೆ

ಬೆಳ್ತಂಗಡಿ: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯ ಮಟ್ಟದ ಪ್ರತಿಷ್ಠಿತ ಅಮ್ಮ ಪ್ರಶಸ್ತಿ’ಗೆ ಸಾಹಿತಿಗಳಾದ ನಿಡ್ಲೆಯ ಪದ್ಮಲತಾ ಮೋಹನ್, ಪ್ರತಿಭಾ ನಂದಕುಮಾರ, ಸಂತೆಬೆನ್ನೂರು ಫೈಜ್ನಟ್ರಾಜ್, ಮಹಾದೇವ ಹಡಪದ, ಜಯರಾಮಚಾರಿ, ಮಮತಾ ಅರಸೀಕೆರೆ, ಬೇಲೂರು ರಘುನಂದನ್, ಚೀ.ಜ.ರಾಜೀವ್, ಡಾ.ಸಂತೋಷ ಹಾನಗಲ್ ಹಾಗೂ ಡಾ.ಶರಣಮ್ಮ ಪಾಟೀಲ (ಕಲಬುರಗಿ) ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಕಾವ್ಯ ವಿಭಾಗದಲ್ಲಿ ಪ್ರತಿಭಾ ನಂದಕುಮಾರ ಬೆಂಗಳೂರು (ಇಳಿದು ಬರುವುದಿಲ್ಲ ತಾಯಿ) ಹಾಗೂ ಸಂತೆಬೆನ್ನೂರು ಫೈಜ್ನಟ್ರಾಜ್ ದಾವಣಗೆರೆ (ದ್ರೌಪದಿಯ ವಾಷಿಂಗ್ ಮಿಷನ್ನು), ಕಥಾ ವಿಭಾಗದಲ್ಲಿ ಜಯರಾಮಚಾರಿ ಬೆಂಗಳೂರು (ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ) ಹಾಗೂ ಡಾ.ಶರಣಮ್ಮ ಪಾಟೀಲ ಕಲಬುರಗಿ (ರರಾಚಿ), ಕಾದಂಬರಿ ವಿಭಾಗದಲ್ಲಿ ಮಹಾದೇವ ಹಡಪದ ಧಾರವಾಡ (ಅನಿಮಿಷಯೋಗಿ) ಹಾಗೂ ಪದ್ಮಲತಾ ಮೋಹನ್ ದಕ್ಷಿಣ ಕನ್ನಡ (ಎಲ್‌ಬಿಡಬ್ಲೂ), ನಾಟಕ ವಿಭಾಗದಲ್ಲಿ ಮಮತಾ ಅರಸೀಕೆರೆ ಹಾಸನ (ಗೂಡು ಸೇರಿದ ಹಕ್ಕಿಗಳು) ಹಾಗೂ ಬೇಲೂರು ರಘುನಂದನ್ ಬೆಂಗಳೂರು (ಶರ್ಮಿಷ್ಠೆ), ಲೇಖನ ಸಂಕಲನ ವಿಭಾಗದಲ್ಲಿ ಡಾ.ಸಂತೋಷ ಹಾನಗಲ್ ಹಾವೇರಿ (ಭಾಷೆ ಮತ್ತು ಬದುಕು) ಹಾಗೂ ಚೀ.ಜ.ರಾಜೀವ್ ಮೈಸೂರು (ಪ್ರಿಯ ಗಾಂಧೀ) ಕೃತಿಗಳನ್ನು ೨೬ ನೇ ವರ್ಷದ ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊAಡಿದ್ದು, ಇದೇ ನ.26ರಂದು ಸಂಜೆ 5.30ಕ್ಕೆ ಸೇಡಮ್‌ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮAಟಪದಲ್ಲಿ ನಡೆಯುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಪದ್ಮಲತಾ ಮೋಹನ್: ಇವರು ಮೂಲತಃ ದಕ್ಷಿಣ ಕನ್ನಡದ ನಿಡ್ಲೆಯವರು. ಸಂಖ್ಯಾಶಾಸ್ತçದ ಉಪನ್ಯಾಸಕಿಯಾಗಿರುವ ಇವರು ತಮ್ಮ ಸಾಹಿತ್ಯ ಸೇವೆಯಿಂದ ಗುರುತಿಸಿಕೊಂಡಿದ್ದಾರೆ.
ಹಲವು ಕೃತಿಗಳನ್ನು ಪ್ರಕಟಿಸಿರುವ ಇವರು ನಾಡಿನ ಪ್ರಸಿದ್ಧ ಪತ್ರಿಕೆ, ಮ್ಯಾಗಸೀನ್‌ಗಳಿಗೆ ಬರೆಯುತ್ತಿದ್ದಾರೆ. ಹಲವು ಪ್ರಶಸ್ತಿಗೆ ಭಾಜನರಾಗಿರುವ ಇವರು ಕವನ, ಕಥೆ ಕಾದಂಬರಿ, ಲೇಖನಗಳನ್ನು ಬರೆದಿದ್ದಾರೆ.
ಕರ್ನಾಟಕ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘದ(ರಿ) ಮಹಿಳಾ ಪದಾಧಿಕಾರಿಯಾಗಿದ್ದಾರೆ ಹಾಗೂ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸುದ್ದಿ ಉದಯ ವಾರಪತ್ರಿಕೆಯ ಬರಹಗಾರರು ಆಗಿದ್ದಾರೆ.

ಅಮ್ಮ ಪ್ರಶಸ್ತಿಗೆ 26 ರ ಸಂಭ್ರಮ
ಕಳೆದ 26 ವರ್ಷಗಳಿಂದ ನಿರಂತರವಾಗಿ ತಾಲೂಕು ಕೇಂದ್ರವೊAದರಿAದ ದಿನಾಂಕ, ಸ್ಥಳ ಬದಲಿಸದಂತೆ, ಎಲ್ಲವನ್ನೂ ಬದ್ಧತೆಯಿಂದ ನಡೆಸಿಕೊಂಡು ಬರಲಾಗುತ್ತಿರುವ ಅಮ್ಮ ಪ್ರಶಸ್ತಿಗೆ ಈ ಬಾರಿ 26ನೇ ವರ್ಷದ ಸಂಭ್ರಮ. ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ಅಮ್ಮ ಪ್ರಶಸ್ತಿ’ಗೆ ಈಗ ೨೬ ನೇ ವರ್ಷ. ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಅವರು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

Related posts

ಕಾಜೂರು: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕ ಮತ್ತು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಶ್ರಯದಲ್ಲಿ ನೇಜಿ ನಾಟಿ ಕಾರ್ಯಕ್ರಮ

Suddi Udaya

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ನಲ್ಲಿ ಓಣಂ ಆಚರಣೆ

Suddi Udaya

ಉಜಿರೆ ರುಡ್‌ ಸೆಟ್ ಸಂಸ್ಥೆಯಲ್ಲಿ ವಿಶೇಷ ಸಂವಾದ ಕಾರ್ಯಕ್ರಮ

Suddi Udaya

ಮಚ್ಚಿನ: ಬಳ್ಳ ಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಾಲಯದ ಹಿರಿಯ ಅರ್ಚಕ ನಾರಾಯಣ ಪುತ್ರಾಯ ನಿಧನ

Suddi Udaya

ಅಡ್ಡ ಮತದಾನ ವಿವಾದ: ಬೇಲೂರು ಶಾಸಕ ಹೆಚ್. ಕೆ. ಸುರೇಶ್ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ

Suddi Udaya
error: Content is protected !!