November 19, 2026
ಜಿಲ್ಲಾ ಸುದ್ದಿ

ಶಿಶಿಲ–ಬೈರಾಪುರ ರಸ್ತೆ ಹಕ್ಕೊತ್ತಾಯಕ್ಕೆ ಸ್ಪಂದನೆ: ಶಿಶಿಲದಿಂದ ಪೇರಿಕೆ ನಾಯಿಹಳ್ಳದವರೆಗೆ ಎಂಜಿನಿಯರ್‌ಗಳ ಪರಿಶೀಲನೆ

ಶಿಶಿಲ: ಶಿಶಿಲ–ಬೈರಾಪುರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅರಸಿನಮಕ್ಕಿಯಲ್ಲಿ ನಡೆದ ಹಕ್ಕೊತ್ತಾಯ ಸಮಾವೇಶದ ಬೆನ್ನಲ್ಲೇ ಪ್ರಸ್ತಾವಿತ ಮಾರ್ಗದ ಪರಿಶೀಲನೆಗೆ ಚಾಲನೆ ದೊರೆತಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಸೂಚನೆಯ ಮೇರೆಗೆ ಬೆಳ್ತಂಗಡಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಎಂಜಿನಿಯರ್‌ಗಳು ನ. 18ರಂದು ಶಿಶಿಲಕ್ಕೆ ಭೇಟಿ ನೀಡಿ, ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಶಿಶಿಲದಿಂದ ಪೇರಿಕೆ ನಾಯಿಹಳ್ಳದವರೆಗಿನ ರಸ್ತೆ ಭಾಗವನ್ನು ಪರಿಶೀಲಿಸಿದರು.

ಶಿಶಿಲ–ಬೈರಾಪುರ ರಸ್ತೆ ಹಕ್ಕೊತ್ತಾಯ ಸಮಿತಿಯ ನೇತೃತ್ವದಲ್ಲಿ ನ. 2ರಂದು ಅರಸಿನಮಕ್ಕಿಯಲ್ಲಿ ಜಾಥಾ ಹಾಗೂ ಹಕ್ಕೊತ್ತಾಯ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜಾ ಅವರು, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಂಜಿನಿಯರ್‌ಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ಕರೆದು, ಎರಡೂ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ರಸ್ತೆಗೆ ಅಗತ್ಯವಿರುವ ಅರಣ್ಯ ಅನುಮತಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದಾಗಿಯೂ ಭರವಸೆ ನೀಡಿದ್ದರು.

ಶಿಶಿಲದಿಂದ ಪೇರಿಕೆ, ನಾಯಿಹಳ್ಳ ಹಾಗೂ ಉಳ್ಳೆಮಲೆ ಎಸ್ಟೇಟ್ ಮೂಲಕ ಬೈರಾಪುರವನ್ನು ಸಂಪರ್ಕಿಸುವ ಪ್ರಸ್ತಾವಿತ ಮಾರ್ಗದ ಉದ್ದ ಸುಮಾರು 17.85 ಕಿ.ಮೀ. ಈ ರಸ್ತೆ ಅಭಿವೃದ್ಧಿಯಾದರೆ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ನಡುವಿನ ಓಡಾಟಕ್ಕೆ ಕಡಿಮೆ ಅಂತರದ ಪರ್ಯಾಯ ಸಂಪರ್ಕ ದೊರೆಯಲಿದೆ ಎಂಬುದು ಸಮಿತಿಯ ಆಶಯ. ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಉಭಯ ಭಾಗಗಳ ಗ್ರಾಮಸ್ಥರು ಶ್ರಮದಾನದಲ್ಲಿಯೂ ಕೈಜೋಡಿಸಿದ್ದರು. ಇದೀಗ ಎಂಜಿನಿಯರ್‌ಗಳು ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ರಸ್ತೆ ಭಾಗವನ್ನು ಪರಿಶೀಲಿಸುವುದರೊಂದಿಗೆ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದನೆ ದೊರೆತಿದೆ.

Related posts

ಮುಂಡೂರು ಕಟ್ಟಿ ಹಾಕಿದ್ದ ಕರುಗಳ ಮೇಲೆ ಚಿರತೆ ದಾಳಿ: ಎರಡು ಕರುಗಳು ಮೃತ್ಯು

Suddi Udaya

ದ.ಕ. ಜಿಲ್ಲಾ ನೂತನ ಎಸ್ಪಿಯಾಗಿ ಡಾ. ಅರುಣ್ ಕೆ. ಅಧಿಕಾರ ಸ್ವೀಕಾರ

Suddi Udaya

ಪಟ್ರಮೆ: ವಿಷ್ಣುಮೂರ್ತಿ ದೇವಸ್ಥಾನದ ಹಿಂಭಾಗದ ತಡೆಗೋಡೆ ಕುಸಿತ

Suddi Udaya

ರಾಜ್ಯದಲ್ಲಿ ಗುಟ್ಕಾ, ತಂಬಾಕು ಮಿಶ್ರಿತ ಪಾನ್ ಮಸಾಲ ಬ್ಯಾನ್ : ರಾಜ್ಯ ಸರ್ಕಾರದ ಮಹತ್ವದ ಆದೇಶ

Suddi Udaya

ಆಗಸ್ಟ್ 12, 13 ವಿ.ವಿ. ಘಟಕ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಸಂದರ್ಶನ

Suddi Udaya

ಬೆಳ್ತಂಗಡಿ: ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya
error: Content is protected !!