November 19, 2026
Uncategorized

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಮಹೋತ್ಸವ, ನೂತನ ‘ಸಂಗಮ’ ಸಭಾಭವನದ ಲೋಕಾರ್ಪಣೆ ಗೋದಾಮು ಕಟ್ಟಡದ ಉದ್ಘಾಟನೆ-೭೩ನೇ ದ.ಕ. ಜಿಲ್ಲಾ ಅಖಿಲ ಭಾರತ ಸಹಕಾರ ಸಪ್ತಾಹ

ಬೆಳ್ತಗಂಡಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು, ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳು ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘಗಳು ಹಾಗೂ ಇತರ ಸಹಕಾರಿ ಸಂಘಗಳ ಸಹಯೋಗದೊಂದಿಗೆ ಪೆರಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ಪೆರಾಡಿ ಸಂಘದ ೭೫ನೇ ವರ್ಷ ಅಮೃತ ಮಹೋತ್ಸವ ಆಚರಣೆ, ನೂತನ ಸಂಗಮ ಸಭಾಭವನದ ಲೋಕಾರ್ಪಣೆ, ಗೋದಾಮು ಕಟ್ಟಡದ ಉದ್ಘಾಟನೆ ಹಾಗೂ ೭೩ನೇ ದ.ಕ. ಜಿಲ್ಲಾ ಅಖಿಲ ಭಾರತ ಸಹಕಾರ ಸಪ್ತಾಹ-೨೦೨೬ ಕಾರ್ಯಕ್ರಮವು ನ. ೧೮ ರಂದು ಪೆರಾಡಿ ಪ್ರಾ.ಕೃ.ಪ.ಸ. ಸಂಘದ ವಠಾರದಲ್ಲಿ ನಡೆಯಿತು.

ನೂತನ ಗೋದಾಮು ಕಟ್ಟಡದ ಉದ್ಘಾಟನೆ ಹಾಗೂ ನವೋದಯ ಸಂಘಗಳಿಗೆ ಗೌರವಾರ್ಪಣೆಯನ್ನು ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ನೆರವೇರಿಸಿದರು.ನೂತನ ಸಂಗಮ ಸಭಾಭವನದ ಉದ್ಘಾಟನೆಯನ್ನು ಸಚಿವ ಲಕ್ಷ್ಮಣ ಎಸ್. ಸವದಿ, ಪಂಚಸಿರಿ ಸಭಾಭವನದ ಉದ್ಘಾಟನೆಯನ್ನು ನೆರವೇರಿಸಿದರು. ಪೆರಾಡಿ ಪ್ಯಾಕ್ಸ್ ಅಧ್ಯಕ್ಷ ಸಹಕಾರ ರತ್ನ ಸತೀಶ್ ಕೆ.ಕಾಶಿಪಟ್ಣ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು.

ಉತ್ತಮ ಹೈನುಗಾರರಿಗೆ ಮಂಗಳೂರು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ಗೈದರು. ವಸತಿ ಸಮುಚ್ಛಯ ಉದ್ಘಾಟನೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸಹಕಾರಿ ಸಪ್ತಾಹ ಉದ್ಘಾಟನೆಯನ್ನು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ನೇರವೇರಿಸಿದರು.  ರೈತ ಸಂಗಮ ಸ್ಮರಣ ಸಂಚಿಕೆಯನ್ನು ಅಳದಂಗಡಿ ಅರಮನೆಯ ಅರಸರಾದ ಡಾ. ಪದ್ಮಪ್ರಸಾದ ಅಜಿಲರು ಬಿಡುಗಡೆಗೊಳಿಸಿದರು.

ಸಹಕಾರಿ ಜಾಥಾಕ್ಕೆ ಶ್ರೀ ಕ್ಷೇತ್ರ ಪಡ್ಡಾರಬೆಟ್ಟದ ಸ್ಮರಣ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ್ ಕುಮಾರ್ ಯಾನೆ ಕಂಚಿಪೂವಣಿಯವರು ಚಾಲನೆ ನೀಡಿದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಸಹಕಾರಿ ಧ್ವಜಾರೋಹಣ ನೇರವೇರೆಸಿದರು.

ಶಿರ್ತಾಡಿ ಕಾರ್ಮೆಲ್ ಮಾತೆಯ ದೇವಾಲಯ ಧರ್ಮಗುರು ವಂ.ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ಶ್ರೀ.ಕ್ಷೇ.ಧ.ಗ್ರಾ.ಯೊ.ಉತ್ತಮ ಸಂಘಗಳಿಗೆ ಗೌರವಾರ್ಪಣೆಯನ್ನು ಶ್ರೀ.ಕ್ಷೇ.ಧ.ಗ್ರಾ.ಯೋ.ಬಿಸಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್.,ಸಭಾ ಕೊಠಡಿಯ ಉದ್ಘಾಟನೆಯನ್ನು ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವಾರಂ, ಉತ್ತಮ ಕೃಷಿಕರಿಗೆ ಸನ್ಮಾನ ಮಂಗಳೂರು ಮಾಸ್ ಲಿ.ಅಧ್ಯಕ್ಷ ಕೆ.ಸೀತಾರಾಮ ರೈ, ವಿಶೇಷ ಸಾಧಕರಿಗೆ ಸನ್ಮಾನವನ್ನು ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಕ್ಯಾಲೆಂಡರ್ ಬಿಡುಗಡೆಯನ್ನು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್ ನೇರವೇರಿಸಿದರು.

ಮುಖ್ಯ ಅತಿಥಿಗಳಾಗಿ ಪಂಚ ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ವಿ. ಹಿರೇಮಠ, ಕೆಎಂಎಫ್ ನಿರ್ದೇಶಕ ಪ್ರಭಾಕರ್ ಆರಂಬೋಡಿ, ಹಾಗೂ ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು, ಸಂಘದ ಮಾಜಿ ಅಧ್ಯಕ್ಷ ಹೇಮರಾಜ್ ಭಾಗವಹಿಸಿದ್ದರು.

ತಾಲೂಕಿನ ವಿವಿಧ ಪ್ಯಾಕ್ಸ್ ಗಳ ಅಧ್ಯಕ್ಷರು,ಸಂಘದ ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ, ನಿರ್ದೇಶಕರಾದ ಯನ್.ಆರ್.ಸೀತಾರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೋ, ದೇವಕಿ ಡಿ.ಶೆಟ್ಟಿ, ಸುಜಾತ, ಕೃಷ್ಣಪ್ಪ, ರಾಜೇಶ್ ಎನ್.ಶೆಟ್ಟಿ, ಸುರೇಶ್ ಅಂಚನ್, ಅಕ್ಷಯ ಕುಮಾರ್, ವಿಜಯ ನಾಯ್ಕ ಹಾಗೂ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಕೊಟ್ಯಾನ್ ಮತ್ತು ಮುಖ್ಯ ಕಾರ್ಯನಿರ್ವಹಾಣಧಿಕಾರಿ ಹೇಮಾ ಉಪಸ್ಥಿತರಿದ್ದರು.ಅದ್ದೂರಿ ಮೆರೆವಣಿಗೆ ಮೂಲಕ ಆಥಿಗಳನ್ನು ಸ್ವಾಗತಿಸಲಾಯಿತು.ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು.

Related posts

ಕೂಕ್ರಬೆಟ್ಟು ಸರ್ಕಾರಿ ಶಾಲೆಗೆ ರೂ.1.10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಫೆ.17: ಕಟ್ಟಡ ಲೋಕಾರ್ಪಣಾ ಸಮಾರಂಭ

Suddi Udaya

ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ನಾಪತ್ತೆಯಾಗಿದ್ದ ಬೆದ್ರಬೆಟ್ಟು ನಿವಾಸಿ ಮೋಹಿನಿ ರವರ ಮೃತದೇಹ ಬಂಗಾಡಿ ನದಿಯಲ್ಲಿ ಪತ್ತೆ

Suddi Udaya

ಭಾರತ ಪಂಚರತ್ನ ಪ್ರಶಸ್ತಿ” ಪುರಸ್ಕೃತ ಹಾಜಿ ಅಬ್ದುಲ್‌ ಲೆತೀಫ್ ಸಾಹೇಬ್ ಅವರಿಗೆ ಜಿಲ್ಲೆಯಲ್ಲಿ ಸನ್ಮಾನ

Suddi Udaya

ಕ್ವಿಜ್ ಸ್ಪರ್ಧೆ: ನಾರಾವಿಯ ಸಂತ ಅಂತೋನಿ ಪದವಿ ಕಾಲೇಜಿಗೆ ಪ್ರಶಸ್ತಿ

Suddi Udaya

ಭಾರಿ ಮಳೆ: ಆ.29ರಂದು ದ.ಕ.ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ

Suddi Udaya
error: Content is protected !!