November 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಕ್ಷಗಾನ ಬಯಲಾಟ ಸಮಿತಿ ಅಳದಂಗಡಿ: ನೂತನ ಪ್ರಸಂಗ ‘ಸಿಂಧೂರ’ ಬಿಡುಗಡೆ ಹಾಗೂ ಬಯಲಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

ಅಳದಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಕ್ಷಗಾನ ಬಯಲಾಟ ಸಮಿತಿ ಅಳದಂಗಡಿ ವತಿಯಿಂದ ನ.23ರಂದು ಅಳದಂಗಡಿ ಬಸ್ ನಿಲ್ದಾಣದ ಆವರಣದಲ್ಲಿ ನಡೆಯಲಿರುವ ಬಯಲಾಟ ಸಮಿತಿಯ ಉದ್ಘಾಟನಾ ಸಮಾರಂಭ, ನೂತನ ಯಕ್ಷಗಾನ ಪ್ರಸಂಗ ‘ಸಿಂಧೂರ’ ಬಿಡುಗಡೆ ಹಾಗೂ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆಯನ್ನು ಅಳದಂಗಡಿ ಅರಮನೆಯ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲರು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಪ್ರಸಾದ್ ಅಜಿಲರು, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಯಕ್ಷಗಾನ ಬಯಲಾಟ ಸಮಿತಿಯು ಉತ್ತಮ ಉದ್ದೇಶದೊಂದಿಗೆ ಕಾರ್ಯಪ್ರವೃತ್ತವಾಗಿರುವುದು ಸಂತೋಷದ ವಿಚಾರ. ಈ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಎಲ್ಲರೂ ಒಗ್ಗಟ್ಟಿನಿಂದ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕು. ನ. 23ರಂದು ನಡೆಯಲಿರುವ ಉದ್ಘಾಟನಾ ಸಮಾರಂಭ ಹಾಗೂ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಅಲ್ಲದೆ, ಅಳದಂಗಡಿ ಪರಿಸರದ ಶ್ರೀ ಸತ್ಯದೇವತೆ, ಶ್ರೀ ಸೋಮನಾಥೇಶ್ವರ ಹಾಗೂ ಸಮಸ್ತ ದೈವ-ದೇವರುಗಳ ಅನುಗ್ರಹದಿಂದ ಈ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಲಿ ಮತ್ತು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೈವಿಕ ಶಕ್ತಿಗಳ ಆಶೀರ್ವಾದ ಸದಾ ಸಮಿತಿಯ ಮೇಲಿರಲಿ ಎಂದು ಪ್ರಾರ್ಥಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಂಬೈಯ ಖ್ಯಾತ ಉದ್ಯಮಿಯಾಗಿರುವ ಹಾಗೂ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ಸದಸ್ಯರು ಮತ್ತು ಕೊಡುಗೈ ದಾನಿಗಳಾದ ಸುರೇಶ್ ಪೂಜಾರಿ ಊರವರು, ಅಳದಂಗಡಿಯ ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ಸದಾನಂದ ಪೂಜಾರಿ ಉಂಗಿಲಬೈಲು, ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಕ್ಷಗಾನ ಮೇಳದ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಕ್ಷಗಾನ ಬಯಲಾಟ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ನಮನ, ಪ್ರಧಾನ ಸಂಚಾಲಕ ವಿಶ್ವನಾಥ ಬಂಗೇರ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಕುಮಾರ್ ಜೈನ್, ಆಮಂತ್ರಣ ಪ್ರತಿಷ್ಠಾನದ ಮುಖ್ಯಸ್ಥರೂ ಅಳದಂಗಡಿ ಸಾಂಸ್ಕೃತಿಕ ರಾಯಭಾರಿ ವಿಜಯಕುಮಾರ್ ಜೈನ್, ಸಮಿತಿಯ ಪದಾಧಿಕಾರಿಗಳಾದ ಉಮೇಶ್ ಶಿರ್ಲಾಲ್, ಶುಭಕರ ಪೂಜಾರಿ ಕುದ್ಯಾಡಿ ಸೇರಿದಂತೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿಮಾನಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ವಿಜಯಕುಮಾರ್ ಜೈನ್ ಸ್ವಾಗತಿಸಿದರು.

ನವೆಂಬರ್ 23ರ ಕಾರ್ಯಕ್ರಮದ ವಿಶೇಷತೆಗಳು: ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿಯ ಉದ್ಘಾಟನೆ, ಮೇಳದ ನೂತನ ಪ್ರಸಂಗ ‘ಸಿಂಧೂರ’ದ ಬಿಡುಗಡೆ ಹಾಗೂ ಯಕ್ಷಗಾನ ಬಯಲಾಟವು ಒಂದೇ ವೇದಿಕೆಯಲ್ಲಿ ನಡೆಯಲಿದ್ದು, ಕ್ಷೇತ್ರದ ಭಕ್ತರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯು ವಿನಂತಿಸಿದೆ.

Related posts

80ನೇ ಸ್ವಾತಂತ್ರ್ಯೋತ್ಸವದಲ್ಲಿ ಕಂಗೊಳಿಸಿದ ಬ್ರೈಟ್ ಹೊರೈಝನ್

Suddi Udaya

ಪುದುವೆಟ್ಟು: ಅಕ್ರಮ ಮರಳು ಅಡ್ಡೆ‌ಗೆ ಧರ್ಮಸ್ಥಳ ಪೊಲೀಸ್ ದಾಳಿ

Suddi Udaya

ದೇಶಭಕ್ತಿ ಗೀತೆ ಸ್ಪರ್ಧೆ: ಉಜಿರೆ ಶ್ರೀ. ಧ. ಮಂ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಮುಂಡಾಜೆ : ಸುಷ್ಮಾ ಪಟವರ್ಧನ್ ನಿಧನ

Suddi Udaya

ಶಾಂತಿವನದಲ್ಲಿ 8ನೇ ರಾಷ್ಟ್ರೀಯ ನಿಸರ್ಗೋಪಚಾರ ದಿನಾಚರಣೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪ್ರ.ದ. ಕಾಲೇಜಿನಲ್ಲಿ ಯೋಗ ದಿನಾಚರಣೆ

Suddi Udaya
error: Content is protected !!