September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಷ್ಟ್ರೀಯ ಕರಾಟೆ ಪಂದ್ಯಾಟ: ಬೆಳ್ತಂಗಡಿಯ ಶೊರಿನ್ ರಿಯೊ ಕರಾಟೆ ಅಶೋಷಿಯೇಶನ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ಬೆಳ್ತಂಗಡಿ: ಹಾಸನದಲ್ಲಿ ನಡೆದಂತಹ ಮುಕ್ತ ರಾಷ್ಟ್ರೀಯ ಕರಾಟೆ ಪಂದ್ಯಕೂಟದಲ್ಲಿ ಬೆಳ್ತಂಗಡಿಯ ಶೊರಿನ್ ರಿಯೊ ಕರಾಟೆ ಅಶೋಷಿಯೇಶನ ವಿಧ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೆರೆಸಿಕೊಂಡಿದ್ದಾರೆ.

ಕಲರ್ ಬೆಲ್ಟ್ ವಿಭಾಗದಲ್ಲಿ ಮೊಹಮ್ಮದ್ ರಯ್ಯಾನ್ ಮತ್ತು ನಿಶಾನ್ ಕಟಾ ಹಾಗೂ ಫೈಟಿಂಗ್ ನಲ್ಲಿ ಚಿನ್ನ, ಆಡ್ಲಿನ್ ಎಲಿಜಬೆತ್ ಜೆರಿನ್ ಫೈಟಿಂಗ್ ನಲ್ಲಿ ಚಿನ್ನ ಮತ್ತು ಕಟಾದಲ್ಲಿ ಕಂಚು, ವಿಶ್ವಾಸ್ ಶೆಟ್ಟಿ ಕಟಾದಲ್ಲಿ ಬೆಳ್ಳಿ, ಕ್ಷಿತಿಜ್ ಶೆಟ್ಟಿ ಕಟಾ ಹಾಗೂ ಫೈಟಿಂಗ್ ನಲ್ಲಿ ಬೆಳ್ಳಿ , ರಾಜೇಶ್ ಶಾಹೋ ಕಟಾದಲ್ಲಿ ಚಿನ್ನ ಫೈಟಿಂಗ್ ನಲ್ಲಿ ಬೆಳ್ಳಿ , ಮೊಹಮ್ಮದ್ ಫಾಝಿಮ್ ಕಟಾದಲ್ಲಿ ಚಿನ್ನ ಫೈಟಿಂಗ್ ನಲ್ಲಿ ಕಂಚು ಮತ್ತು ಹಲೀಮ ಹೈಫಾ ಕಟಾದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಹಾಗೆಯೇ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಫೈಟಿಂಗ್ ನಲ್ಲಿ ಚಿನ್ನ ಹಾಗೂ ಕಟಾದಲ್ಲಿ ಬೆಳ್ಳಿ, ಮೊಹಮ್ಮದ್ ಅಜ್ಮಲ್ ಫೈಟಿಂಗ್ ನಲ್ಲಿ ಚಿನ್ನ ಕಟಾದಲ್ಲಿ ಬೆಳ್ಳಿ, ಶಹೀರ್ ಅನಾಸ್ ಮತ್ತು ಮೋಹನ್ ಬಜ ಕಟಾ ಹಾಗೂ ಫೈಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಪಡೆದು ತಾಲ್ಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ.

ಇವರು ರೆನ್ಶಿ ಮೊಹಮ್ಮದ್ ನದೀಮ್, ಶಿಹನ್ ಅಬ್ದುಲ್ ರಹಿಮಾನ್ ಹಾಗೂ ಸೆನ್ಸಾಯಿ ರಿಜ್ವಾನ್ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ.

Related posts

ನೆರಿಯ ಆರೋಗ್ಯ ಕೇಂದ್ರದ ವತಿಯಿಂದ ಈಡಿಸ್ ಲಾರ್ವ ಸಮೀಕ್ಷ ಕಾರ್ಯ ಮತ್ತು ಲಾರ್ವ ನಿರ್ಮೂಲನ ಕಾರ್ಯಕ್ರಮ

Suddi Udaya

ಮುಂಡಾಜೆ ಕಾಯರ್ತೋಡಿ ರಾಧಾ ಹೆಬ್ಬಾರ್‌ರವರ ತೋಟಕ್ಕೆ ನುಗ್ಗಿದ ನೇತ್ರಾವತಿ ನದಿ ನೀರು: 25 ಅಡಿಕೆ ಮರ ಹಾಗೂ 10 ರಬ್ಬರ್ ಮರ ಧರಾಶಾಯಿ

Suddi Udaya

ಉಜಿರೆ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುವಿಗೆ ಅಭಿನಂದನಾ ಸಮಾರಂಭ

Suddi Udaya

ಮುಂಡೂರು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಮುರಳಿ ಬಲಿಪ ವಕೀಲರ ಕಚೇರಿ ಸ್ಥಳಾಂತರಗೊಂಡು ಶುಭಾರಂಭ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya
error: Content is protected !!